सिद्धरामय्या यांनी राजीनामा देऊन, दुसऱ्या योग्य व्यक्तीला मुख्यमंत्री पद सोपवावे ; खासदार विश्वेश्वर हेगडे-कागेरी.
शीरसी ; सिद्धरामय्या हे मुख्यमंत्रिपदाचा अनादर करत असुन, जे राज्यातील मानाचे पद आहे. सिद्धरामय्या हे लोकायुक्त चौकशीला सामोरे जात असतानाही, त्यांनी हे पद सोडले नाही. त्यामुळे सिद्धरामय्या हे मुख्यमंत्री पदाच्या सन्मानाला धक्का पोचवत आहेत, त्यासाठी त्यांनी तात्काळ राजीनामा देऊन योग्य व्यक्तीकडे हे पद सोपवावेत अशी मागणी कॅनरा लोकसभा क्षेत्राचे खासदार व कर्नाटक विधानसभेचे माजी सभापती विश्वेश्वर हेगडे कागेरी यांनी केली आहे.
पुढे बोलताना ते म्हणाले की, राज्यातील सत्ताधारी काँग्रेस सरकार घोटाळ्यांच्या मालिकेमुळे, अंथरुणाला खिळून राहिले आहे. मुख्यमंत्री सरकारी गाडीतून खाली उतरून, खासगी गाडीतून लोकायुक्त चौकशीला सामोरे गेले. ही तर राज्याची प्रतिष्ठा पणाला लावण्यासारखी आहे. वाल्मिकी मुडा घोटाळ्यानंतर आता अबकारी घोटाळ्यात नवी भर पडली आहे. राज्याच्या इतिहासात प्रथमच मुख्यमंत्रिपदाच्या मानद पदावर असताना त्यांना लोकायुक्त चौकशीला सामोरे जावे लागले आहे. संपूर्ण मंत्रिमंडळ एकापाठोपाठ एक चौकशीला सामोरे जात आहे.
वक्फ बोर्डाच्या बाबतीत राज्यातील शेतकऱ्यांच्या जमिनी हडपण्याचा प्रयत्न मुख्यमंत्री आणि जमीर अहमद यांनी केला. ही यांची मानसिकता दर्शवते. फुकटचे आमिष दाखवून सत्तेवर आलेल्या, सरकारच्या काळात आत्महत्येची खेदजनक घटना उघडकीस आली आहे. राज्याचा विकास नसून हा केवळ घोटाळा आहे.
सिद्धरामय्या यांनी राज्याला दिवाळखोरीच्या टप्प्यावर आणले आहे. एकापाठोपाठ एक घोटाळ्यात बुडालेले सिद्धरामय्या यांचे मंत्रिमंडळ जनतेची दिशाभूल करण्यात व्यस्त आहे. त्यासाठी, या सगळ्या गोष्टीला जबाबदार असलेल्या सिद्धरामय्या यांनी राजीनामा देऊन चौकशीला सामोरे जावेत अशी मागणी कॅनरा लोकसभा क्षेत्राचे खासदार व माजी विधानसभा सभापती विश्वेश्वर हेगडे-कागेरी यांनी केली आहे.
ಸಿದ್ದರಾಮಯ್ಯ ರಾಜೀನಾಮೆ ನೀಡಿ ಪಕ್ಷದ ಸೂಕ್ತ ಹಾಗೂ ಯೋಗ್ಯತೆ ಇರುವ ಮತ್ತೊಬ್ಬ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು; ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ.
ಶೀರಸಿ ; ರಾಜ್ಯದಲ್ಲಿ ಗೌರವಯುತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅಪಚಾರ ಮಾಡುತ್ತಿದ್ದಾರೆ. ಲೋಕಾಯುಕ್ತ ವಿಚಾರಣೆಯನ್ನು ಎದುರಿಸುತ್ತಿದ್ದರೂ ಈ ಸ್ಥಾನ ಬಿಡದೇ ಹುದ್ದೆಯ ಗೌರವಕ್ಕೆ ದ್ಧಕ್ಕೆ ಮಾಡುತ್ತಿದ್ದು, ತಕ್ಷಣವೇ ರಾಜೀನಾಮೆ ನೀಡಿ ಯೋಗ್ಯರಿಗೆ ಹುದ್ದೆ ಬಿಟ್ಟುಕೊಡಬೇಕು, ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೇಡಿಕೆ ಇಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಹಗರಣಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಮುಖ್ಯಮಂತ್ರಿಯಾದವರು ಸರ್ಕಾರಿ ಕಾರಿನಿಂದ ಇಳಿದು ವಿಚಾರಣೆಗೆ ಖಾಸಗಿ ಕಾರಿನಲ್ಲಿ ತೆರಳುತ್ತಾರೆಂದರೆ ಇದು ರಾಜ್ಯದ ಮರ್ಯಾದೆ ಹಾಳುಮಾಡುವ ವಿಷಯ. ವಾಲ್ಮೀಕಿ ಮೂಡ ಹಗರಣಗಳ ಬಳಿಕ ಈಗ ಅಬಕಾರಿ ಹಗರಣ ಹೊಸದಾಗಿ ಸೇರ್ಪಡೆಯಾದಂತಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಮುಖ್ಯಮಂತ್ರಿಯಂತ ಗೌರವ ಸ್ಥಾನದಲ್ಲಿದ್ದು ಲೋಕಾಯುಕ್ತ ವಿಚಾರಣೆ ಎದುರಿಸಿದ್ದು ಕೂಡ ಅವರ ಸಾಧನೆಯ ಸರಿ, ಇಡೀ ಸರ್ಕಾರದ ಮಂತ್ರಿ ಮಂಡಲವೇ ಒಂದಿಲ್ಲೊಂದು ವಿಚಾರಣೆ ಎದುರಿಸುತ್ತಿದೆ.
ವಕ್ಫಬೋರ್ಡ್ ವಿಚಾರದಲ್ಲಿ ರಾಜ್ಯದ ರೈತರ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದು ಮುಖ್ಯಮಂತ್ರಿ ಮತ್ತು ಜಮೀರ್ ಅಹ್ಮದ್ ರವರ ಮನಸ್ಥಿತಿಯನ್ನು ತೋರಿಸುತ್ತದೆ. ಉಚಿತಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಈ ಸರ್ಕಾರ ಉಚಿತ ಆತ್ಮಹತ್ಯಾ ಭಾಗ್ಯವನ್ನು ಕೂಡ ಘೋಷಿಸಿದಂತಿದೆ. ಒಂದು ಹಗರಣ ಬಯಲಿಗೆ ಬಂದಿದ್ದೇ ಒಂದು ಆತ್ಮಹತ್ಯೆಯನ್ನು ಕರುಣಿಸುತ್ತಿದೆ. ಸಿದ್ದರಾಮಯ್ಯನವರು ಕೇವಲ ಹಗರಣವೇ ರಾಜ್ಯದ ಅಭಿವೃದ್ಧಿ ಅಂತ ತಿಳಿದು ರಾಜ್ಯವನ್ನು ದಿವಾಳಿ ಹಂತಕ್ಕೆ ತಂದಿಟ್ಟಿದ್ದಾರೆ. ಸಚಿವ ಸಂಪುಟವೇ ಒಂದಿಲ್ಲೊಂದು ಹಗರಣದಲ್ಲಿ ಮುಳುಗಿ, ಜನರ ದಿಕ್ಕು ತಪ್ಪಿಸುವಲ್ಲೇ ನಿರತವಾಗಿದೆ. ಇದೆಲ್ಲದರ ಹೊಣೆ ಹೊತ್ತು ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗ್ರಹಿಸಿದರು.