श्री विश्वकर्मा समाजाच्या वतीने उद्या खानापूरात फर्निचर व्यवसायातील मान्यवरांचा सत्कार; महाप्रसादाचे आयोजन.
खानापूर, दि. 13 : श्री विश्वकर्मा समाज विकास देवस्थान ट्रस्ट, खानापूर यांच्या वतीने खानापूर तालुक्यातील विश्वकर्मा तसेच मराठा व इतर समाजातील व्यक्तींचा फर्निचर व्यवसायात उल्लेखनीय कार्य करून नावलौकिक मिळविल्याबद्दल भव्य सत्कार समारंभ मंगळवार, दि. 14 जुलै 2026 रोजी श्री विश्वकर्मा मंदिर, करंबळ क्रॉस, खानापूर येथे आयोजित करण्यात आला आहे.
कार्यक्रमाची सुरुवात सकाळी 9.00 वाजता अभिषेकाने होणार असून सकाळी 10.00 वाजता महापूजा होईल. त्यानंतर सकाळी 10.00 ते 11.00 या वेळेत भजन व आरतीचा कार्यक्रम पार पडेल. सकाळी 11.30 वाजता फर्निचर व्यवसायातील मान्यवरांचा सत्कार समारंभ आयोजित करण्यात आला आहे.
या कार्यक्रमाच्या अध्यक्षस्थानी श्री विश्वकर्मा समाज विकास देवस्थान ट्रस्टचे अध्यक्ष श्री अशोक कृष्णाजी सुतार हे राहणार आहेत.
या कार्यक्रमातील सत्कारमूर्ती म्हणून श्री पुंडलिक ज्ञानोबा सुतार (मूळ गाव ओलमनी, सध्या पुणे) यांचा गौरव करण्यात येणार असून त्यांच्या वतीने संपूर्ण महाप्रसादाचे आयोजन करण्यात आले आहे.
या कार्यक्रमास अनेक मान्यवर मंडळी प्रमुख पाहुणे म्हणून उपस्थित राहणार आहेत.
श्री विश्वकर्मा समाज विकास देवस्थान ट्रस्टच्या वतीने खानापूर व परिसरातील सर्व नागरिकांनी सहकुटुंब, सहपरिवार उपस्थित राहून कार्यक्रमाची शोभा वाढवावी, असे आवाहन आयोजकांनी केले आहे.
ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ನಾಳೆ ಖಾನಾಪುರದಲ್ಲಿ ಫರ್ನಿಚರ್ ಕ್ಷೇತ್ರದ ಗಣ್ಯರಿಗೆ ಸನ್ಮಾನ; ಮಹಾಪ್ರಸಾದದ ವ್ಯವಸ್ಥೆ.
ಖಾನಾಪುರ, ಜು. 13 : ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್, ಖಾನಾಪುರ ಇವರ ವತಿಯಿಂದ ಖಾನಾಪುರ ತಾಲ್ಲೂಕಿನ ವಿಶ್ವಕರ್ಮ ಹಾಗೂ ಮರಾಠಾ ಮತ್ತು ಇತರ ಸಮಾಜಗಳ ಫರ್ನಿಚರ್ ಉದ್ಯಮದಲ್ಲಿ ಗಮನಾರ್ಹ ಸೇವೆ ಸಲ್ಲಿಸಿ ಹೆಸರು ಗಳಿಸಿರುವ ಗಣ್ಯ ವ್ಯಕ್ತಿಗಳಿಗೆ ಭವ್ಯ ಸನ್ಮಾನ ಸಮಾರಂಭವನ್ನು ಮಂಗಳವಾರ, ಜುಲೈ 14, 2026 ರಂದು ಖಾನಾಪುರ ಬಳಿ ಕರಂಬಳ ಕ್ರಾಸ್ನಲ್ಲಿರುವ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9.00 ಗಂಟೆಗೆ ಅಭಿಷೇಕದೊಂದಿಗೆ ಆರಂಭವಾಗಲಿದ್ದು. ಬಳಿಕ ಬೆಳಿಗ್ಗೆ 10.00 ಗಂಟೆಗೆ ಮಹಾಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 10.00 ರಿಂದ 11.00 ಗಂಟೆಯವರೆಗೆ ಭಜನೆ ಹಾಗೂ ಆರತಿ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 11.30 ಗಂಟೆಗೆ ಫರ್ನಿಚರ್ ಉದ್ಯಮದಲ್ಲಿ ಸಾಧನೆ ಮಾಡಿದ ಗಣ್ಯರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಅಶೋಕ್ ಕೃಷ್ಣಾಜಿ ಸುತಾರ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸನ್ಮಾನಿತ ವ್ಯಕ್ತಿಯಾಗಿ ಶ್ರೀ ಪುಂಡಲೀಕ ಜ್ಞಾನೋಬಾ ಸುತಾರ (ಮೂಲ ಊರು: ಓಲಮನಿ, ಪ್ರಸ್ತುತ ಪುಣೆ) ಅವರನ್ನು ಗೌರವಿಸಲಾಗುವುದು. ಅವರ ವತಿಯಿಂದ ಸಮಸ್ತ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್ನ ವತಿಯಿಂದ ಖಾನಾಪುರ ಹಾಗೂ ಸುತ್ತಮುತ್ತಲಿನ ಎಲ್ಲಾ ನಾಗರಿಕರು ತಮ್ಮ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

