श्रीकृष्ण जन्माष्टमी महोत्सवानिमित्त खानापुरात विविध धार्मिक कार्यक्रम.
खानापूर : आंतरराष्ट्रीय कृष्ण भावनामृत संघ (इस्कॉन) संस्थापक आचार्य कृष्ण कृपा श्रीमूर्ती ए.सी. भक्तिवेदांत स्वामी प्रभुपाद यांच्या प्रेरणेने श्री जगन्नाथ प्रचार केंद्र, खानापूर यांच्या वतीने शुक्रवार दिनांक 4 सप्टेंबर 2026 रोजी, श्रीकृष्ण महोत्सवाचे आयोजन करण्यात आले आहे. मलप्रभा नदी घाट येथील श्री जगन्नाथ मंदिरात श्रीकृष्ण जन्माष्टमी हा धार्मिक सोहळा भक्तिमय वातावरणात होणार आहे.
महोत्सवानिमित्त सायंकाळी 6.30 ते 7 वाजता कीर्तन, 7 ते 8 पर्यंत श्रीकृष्ण अभिषेक, रात्री 8 ते 8.45 पर्यंत वरिष्ठ भक्तांचे प्रवचन, 8.45 ते 9.30 पर्यंत सांस्कृतिक कार्यक्रम, 9.30 ते 10 पर्यंत महाआरती आणि त्यानंतर रात्री 10 वाजता महाप्रसादाचे आयोजन करण्यात आले आहे.
या धार्मिक कार्यक्रमास कृष्ण भक्त व भाविकांनी मोठ्या संख्येने उपस्थित राहून श्रीकृष्णाचे दर्शन व आशीर्वाद घ्यावेत, असे आवाहन आयोजकांनी केले आहे. तसेच ज्या कृष्ण भक्तांना व भाविकांना महाप्रसादासाठी देणगी द्यायची असेल तर जगन्नाथ मंदिर मलप्रभा नदी घाट या ठिकाणी संपर्क साधावा असे आवाहन इस्कॉन मंदिरातर्फे करण्यात आले आहे.
तसेच श्री जगन्नाथ प्रचार केंद्रात दर शनिवारी सायंकाळी 6.30 ते 8.30 या वेळेत भजन, कीर्तन, प्रवचन व महाप्रसादाचे आयोजन करण्यात येत असते. तसेच प्रत्येक मंगळवारी सायंकाळी 7 ते 8 या वेळेत श्रीमद् भागवत कथा, तसेच दर एकादशीला सायंकाळी 7 ते 9 या वेळेत भजन, कीर्तन, प्रवचन व महाप्रसादाचा कार्यक्रम आयोजित केला जातो. याचा सुद्धा लाभ भक्तांनी घ्यावात असे मंदिरातर्फे कळविण्यात आले आहे.
स्थळ : श्री जगन्नाथ मंदिर, मलप्रभा नदी घाट, खानापूर.
संपर्क : 9844620902, 9449441113, 8197887743,
ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಅಂಗವಾಗಿ ದಿನಾಂಕ 4 ಸೆಪ್ಟೆಂಬರ್ ರಂದು ಖಾನಾಪುರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
ಖಾನಾಪುರ : ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ಸಂಸ್ಥಾಪಕ ಆಚಾರ್ಯ ಕೃಷ್ಣ ಕೃಪಾ ಶ್ರೀಮೂರ್ತಿ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಪ್ರೇರಣೆಯಿಂದ ಶ್ರೀ ಜಗನ್ನಾಥ ಪ್ರಚಾರ ಕೇಂದ್ರ, ಖಾನಾಪುರ ಇವರ ವತಿಯಿಂದ ದಿನಾಂಕ 4 ಸೆಪ್ಟೆಂಬರ್ 2026 ರಂದು ಶ್ರೀಕೃಷ್ಣ ಮಹೋತ್ಸವವನ್ನು ಆಯೋಜಿಸಲಾಗಿದೆ. ಮಲಪ್ರಭಾ ನದಿ ಘಾಟ್ ಬಳಿ ಇರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಕಾರ್ಯಕ್ರಮವು ಭಕ್ತಿಮಯ ವಾತಾವರಣದಲ್ಲಿ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 4 ರಂದು ಸಂಜೆ 6.30 ರಿಂದ 7 ಗಂಟೆಯವರೆಗೆ ಕೀರ್ತನೆ, ಸಂಜೆ 7 ರಿಂದ 8 ಗಂಟೆಯವರೆಗೆ ಶ್ರೀಕೃಷ್ಣ ಅಭಿಷೇಕ, ರಾತ್ರಿ 8 ರಿಂದ 8.45 ಗಂಟೆಯವರೆಗೆ ಹಿರಿಯ ಭಕ್ತರಿಂದ ಪ್ರವಚನ, ರಾತ್ರಿ 8.45 ರಿಂದ 9.30 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.30 ರಿಂದ 10 ಗಂಟೆಯವರೆಗೆ ಮಹಾಆರತಿ ಹಾಗೂ ನಂತರ ರಾತ್ರಿ 10 ಗಂಟೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕೃಷ್ಣ ಭಕ್ತರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದು ಆಶೀರ್ವಾದ ಪಡೆಯಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಅದೇ ರೀತಿ, ಕೃಷ್ಣ ಭಕ್ತರು ಹಾಗೂ ಭಕ್ತಾದಿಗಳಲ್ಲಿ ಯಾರಾದರೂ ಮಹಾಪ್ರಸಾದಕ್ಕಾಗಿ ದೇಣಿಗೆ ನೀಡಲು ಇಚ್ಛಿಸುವವರು ಜಗನ್ನಾಥ ದೇವಸ್ಥಾನ, ಮಲಪ್ರಭಾ ನದಿ ಘಾಟ್ ಈ ಸ್ಥಳದಲ್ಲಿ ಸಂಪರ್ಕಿಸಬೇಕೆಂದು ಇಸ್ಕಾನ್ ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ.
ಅದೇ ರೀತಿ, ಶ್ರೀ ಜಗನ್ನಾಥ ಪ್ರಚಾರ ಕೇಂದ್ರದಲ್ಲಿ ಪ್ರತಿ ಶನಿವಾರ ಸಂಜೆ 6.30 ರಿಂದ ರಾತ್ರಿ 8.30 ರವರೆಗೆ ಭಜನೆ, ಕೀರ್ತನೆ, ಪ್ರವಚನ ಹಾಗೂ ಮಹಾಪ್ರಸಾದದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಹಾಗೆಯೇ ಪ್ರತಿ ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಶ್ರೀಮದ್ ಭಾಗವತ ಕಥೆ, ಹಾಗೂ ಪ್ರತಿ ಏಕಾದಶಿಯಂದು ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ ಭಜನೆ, ಕೀರ್ತನೆ, ಪ್ರವಚನ ಹಾಗೂ ಮಹಾಪ್ರಸಾದದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದರ ಪ್ರಯೋಜನವನ್ನು ಭಕ್ತರು ಪಡೆದುಕೊಳ್ಳಬೇಕೆಂದು ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.
ಸ್ಥಳ : ಶ್ರೀ ಜಗನ್ನಾಥ ದೇವಸ್ಥಾನ, ಮಲಪ್ರಭಾ ನದಿ ಘಾಟ್ ಬಳಿ, ಖಾನಾಪುರ.
ಸಂಪರ್ಕ : 9844620902, 9449441113, 8197887743.

