खानापूर व गुंजी येथे कर्नाटक पब्लिक स्कूल (केपीएस) शाळेला मंजुरी – आमदार विठ्ठल हलगेकर.

खानापूर : खानापूर येथील मादरी शाळा व तालुक्यातील गुंजी येथे शासनाकडून कर्नाटक पब्लिक स्कूल (केपीएस) ला मंजुरी मिळाली असून लवकरच या शाळांमध्ये मातृभाषा व इंग्रजी माध्यमातून शिक्षणाची सुरुवात होणार आहे, अशी माहिती खानापूरचे आमदार विठ्ठल हलगेकर यांनी दिली. खानापूर अर्बन बँक चौक येथील श्री दुर्गादेवी नवरात्र उत्सव मंडळाच्या महाआरती कार्यक्रमात सहभागी झाल्यानंतर महिला नागरिक व भाविकांना उद्देशून मार्गदर्शन करताना त्यांनी ही माहिती दिली.
सुरुवातीला आमदार विठ्ठल हलगेकर व सामाजिक कार्यकर्ते व भाजपा युवा नेते अभिजीत चांदीलकर यांच्या हस्ते श्री दुर्गादेवीची महापूजा व महाआरती करण्यात आली. यानंतर मंडळाच्या वतीने संस्थापक दिनकर मरगाळे, खजिनदार सुनील पानेरी, डॉ. पी. एस. गुंजीकर, मनोज रेवणकर आदींच्या हस्ते आमदार हलगेकर व अभिजीत चांदीलकर यांचा शाल-श्रीफळ देऊन सत्कार करण्यात आला.
पुढे बोलताना आमदार हलगेकर म्हणाले की, गुंजी येथे मंजूर झालेल्या केपीएस शाळेत मातृभाषा मराठी व इंग्रजी माध्यमातून शिक्षणाची सोय करण्यात आली आहे. तर खानापूर येथील शाळेत मातृभाषा व इंग्रजी अशा दोन्ही माध्यमांतून शिक्षण दिले जाणार आहे. त्यामुळे विद्यार्थ्यांच्या शैक्षणिक प्रगतीला मोठी चालना मिळणार असल्याचे त्यांनी स्पष्ट केले.
यावेळी त्यांनी विकासकामांचा आढावा घेत सांगितले की, निवडणूक जिंकल्यानंतर दोन महिन्यांतच विविध विकासात्मक कामांसाठी अनुदान मंजुरीसाठी पत्र व आराखडे सादर केले होते. मात्र गृहलक्ष्मी योजनेसाठी मोठ्या प्रमाणात निधी वळविल्याने अनुदान मंजूर होण्यास विलंब झाला. तरीही त्याचे फळ आता मिळत असून खानापूर शहर अंतर्गत 14 कोटींच्या रस्त्याचे काम सुरू झाले आहे. तसेच जांबोटी मार्गाचे रस्त्याचे काम लवकरच सुरू होणार आहे. खानापूर शहरातील मारुतीनगरमध्ये संपूर्ण काँक्रीटीकरणाचे रस्ते झाले आहेत. पावसाळा संपल्यानंतर तालुक्यातील अनेक विकासात्मक कामांना गती मिळणार असल्याचे आमदार हलगेकर यांनी सांगितले. शेवटी नवरात्र उत्सव मंडळाचे संस्थापक दिनकर मरगाळे यांनी आभार व्यक्त केले.
यावेळी खानापूर शहरातील महिला व नागरिक मोठ्या संख्येने उपस्थित होते.
ಖಾನಾಪುರ ಹಾಗೂ ಗುಂಜಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಸರ್ಕಾರದ ಅನುಮೋದನೆ – ಶಾಸಕರಾದ ವಿಠ್ಠಲ್ ಹಲಗೇಕರ ಅವರಿಂದ ಮಾಹಿತಿ.
ಖಾನಾಪುರ : ಖಾನಾಪುರ ತಾಲೂಕಿನ ಮಾದರಿ ಶಾಲೆಯಲ್ಲಿ ಹಾಗೂ ಗುಂಜಿ ಗ್ರಾಮದಲ್ಲಿ ಸರ್ಕಾರದಿಂದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಸರ್ಕಾರದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಈ ಶಾಲೆಗಳಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆರಂಭವಾಗಲಿದೆ ಎಂದು ಖಾನಾಪುರ ಶಾಸಕರಾದ ವಿಠ್ಠಲ್ ಹಲಗೇಕರ್ ತಿಳಿಸಿದ್ದಾರೆ. ಖಾನಾಪುರ ಅರ್ಬನ್ ಬ್ಯಾಂಕ್ ಚೌಕದಲ್ಲಿರುವ ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಮಂಟಪದಲ್ಲಿ ನಡೆದ ಮಹಾಆರತಿ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಭಕ್ತರನದ್ದೇಶಿಸಿ ಮಾತನಾಡುವ ವೇಳೆ ಅವರು ಈ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ಶಾಸಕರಾದ ವಿಠ್ಠಲ್ ಹಲಗೇಕರ್ ಹಾಗೂ ಸಾಮಾಜಿಕ ಕಾರ್ಯಕರ್ತರು, ಬಿಜೆಪಿ ಯುವನಾಯಕ ಅಭಿಜೀತ್ ಚಾಂದೀಲ್ಕರ್ ಅವರಿಂದ ಶ್ರೀ ದುರ್ಗಾದೇವಿಯ ಮಹಾಪೂಜೆ ಹಾಗೂ ಮಹಾಆರತಿ ನೆರವೇರಿಸಲಾಯಿತು. ನಂತರ ಉತ್ಸವ ಮಂಡಳದ ವತಿಯಿಂದ ಸಂಸ್ಥಾಪಕ ದಿನಕರ ಮಾರ್ಗಾಳೆ, ಖಜಾಂಚಿ ಸುನಿಲ್ ಪಾನೇರಿ, ಡಾ.ಪಿ.ಎಸ್. ಗುಂಜೀಕರ, ಮನೋಜ್ ರೇವಣಕರ ಹಾಗೂ ಇತರ ಕಾರ್ಯಕರ್ತರು ಹಾಗೂ ಭಕ್ತರ ಸಮ್ಮುಖದಲ್ಲಿ ಶಾಸಕರಾದ ಹಲಗೇಕರ್ ಹಾಗೂ ಅಭಿಜೀತ್ ಚಾಂದೀಲ್ಕರ್ ಅವರಿಗೆ ಶಾಲು-ಶ್ರಿಫಲ ನೀಡಿ ಸತ್ಕರಿಸಲಾಯಿತು.
ಮುಂದೆ ಮಾತನಾಡಿದ ಶಾಸಕರಾದ ಹಲಗೇಕರ್ ಅವರು, ಗುಂಜಿಯಲ್ಲಿ ಅನುಮೋದಿತವಾದ ಕೆಪಿಎಸ್ ಶಾಲೆಯಲ್ಲಿ ಮಾತೃಭಾಷೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಖಾನಾಪುರದಲ್ಲಿರುವ ಶಾಲೆಯಲ್ಲಿ ಮಾತೃಭಾಷೆ ಹಾಗೂ ಇಂಗ್ಲಿಷ್ ಎಂಬ ಎರಡು ಮಾಧ್ಯಮಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
ಇದೇ ವೇಳೆ ಅವರು ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿ, “ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕೇವಲ ಎರಡು ತಿಂಗಳಲ್ಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ನಿಧಿ ತಿರುಗಿಸಲಾಗಿದ್ದರಿಂದ ಅನುದಾನ ಮಂಜೂರಿಗೆ ವಿಳಂಬವಾಯಿತು. ಇದೀಗ ಅದರ ಫಲ ದೊರೆತಿದ್ದು, ಖಾನಾಪುರ ನಗರದಲ್ಲಿ 14 ಕೋಟಿಯ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದೆ. ಜೊತೆಗೆ ಜಾಂಬೋಟಿ ಮಾರ್ಗದ ರಸ್ತೆ ಕಾಮಗಾರಿ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ. ಖಾನಾಪುರದ ಮಾರುತಿನಗರದಲ್ಲಿ ಸಂಪೂರ್ಣ ಕಾನ್ಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಮಳೆಗಾಲ ಮುಗಿದ ಬಳಿಕ ತಾಲೂಕಿನ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ನವರಾತ್ರಿ ಉತ್ಸವ ಮಂಡಳಿಯ ಸಂಸ್ಥಾಪಕ ದಿನಕರ ಮಾರ್ಗಾಳೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಖಾನಾಪುರ ನಗರದ ಮಹಿಳೆಯರು ಹಾಗೂ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.

