शिरोलीत हत्तींच्या कळपाचा धुडगूस; ऊस पिकांसह केळीच्या बागांचे मोठे नुकसान, शेतकरी त्रस्त! हत्तींचा कायमस्वरूपी बंदोबस्त करण्याची मागणी!
खानापूर : प्रतिनिधी
खानापूर तालुक्यातील शिरोली परिसरात गेल्या काही दिवसांपासून हत्तींच्या कळपाने धुमाकूळ घातला असून, या हत्तींमुळे शेतकऱ्यांचे मोठ्या प्रमाणात नुकसान होत आहे. ऊस पिकांसह केळीच्या बागा आणि इतर शेती पिकांची हत्तींकडून नासधूस केली जात असल्याने या भागातील शेतकरी अक्षरशः वैतागून गेले आहेत. वारंवार होणाऱ्या या नुकसानीमुळे शेतकऱ्यांमध्ये तीव्र नाराजी पसरली आहे.
गेल्या दोन दिवसांत शिरोली ग्रामपंचायतीच्या मागील बाजूस नदीपलीकडील शिवारात शेती असलेल्या रवी काटगी आणि संतोष अनंत बिरजे यांच्या ऊस पिकांचे हत्तींनी मोठ्या प्रमाणात नुकसान केले आहे. तसेच नदीच्या अलीकडील बाजूस शेती असलेल्या सुशील देसाई, विनायक राऊत, लाडोबा राऊत आणि रुक्माणा माटगे या शेतकऱ्यांच्या शेतातील ऊस पिके हत्तींनी तुडवून फस्त केली आहेत. याशिवाय केळीच्या बागांमध्येही घुसून हत्तींनी मोठ्या प्रमाणात नुकसान केले आहे.
संरक्षणासाठी उभारलेले खांब आणि तारा उद्ध्वस्त…..
शेती पिकांचे वन्यप्राण्यांपासून संरक्षण व्हावे, यासाठी शेतकऱ्यांनी शेताच्या बाजूने खांब उभे करून त्यांना तारा बांधल्या होत्या. मात्र, हत्तींच्या कळपाने हे खांबदेखील उपटून टाकले असून, संरक्षणासाठी लावलेल्या सर्व तारा तोडून टाकल्या आहेत. त्यामुळे पिकांचे नुकसान होण्याबरोबरच शेतकऱ्यांनी संरक्षणासाठी केलेला खर्चही वाया गेला आहे. आधीच शेती उत्पादनासाठी मोठा खर्च केलेल्या शेतकऱ्यांना या नुकसानीमुळे दुहेरी आर्थिक फटका बसला आहे.
वनविभागाने तातडीने लक्ष देण्याची मागणी…..
शिरोली परिसरात हत्तींचा वावर सातत्याने वाढत असल्याने शेतकऱ्यांना आपल्या पिकांचे संरक्षण करणे कठीण झाले आहे. रात्रंदिवस शेतात काम करणाऱ्या शेतकऱ्यांमध्ये हत्तींच्या धुडगुसामुळे भीतीचे वातावरण निर्माण झाले आहे. कष्टाने उभे केलेले पीक काही क्षणांत उद्ध्वस्त होत असल्याने शेतकरी हतबल झाले आहेत.
हा परिसर लोंढा वनक्षेत्राच्या कार्यक्षेत्रात येत असल्याने लोंढा वनक्षेत्राचे एसीएफ, आरएफओ तसेच वनविभागाच्या वरिष्ठ अधिकाऱ्यांनी या गंभीर समस्येकडे तातडीने लक्ष द्यावे, अशी मागणी शेतकरी वर्गातून होत आहे.
हत्तींचा केवळ तात्पुरता बंदोबस्त न करता या परिसरातील शेतकऱ्यांना वारंवार होणाऱ्या त्रासातून मुक्त करण्यासाठी कायमस्वरूपी उपाययोजना कराव्यात. हत्तींच्या कळपाच्या हालचालींवर लक्ष ठेवण्यासाठी वनविभागाने विशेष पथक तैनात करावे, तसेच शेतकऱ्यांच्या पिकांचे संरक्षण करण्यासाठी प्रभावी उपाययोजना राबवाव्यात, अशी अपेक्षा व्यक्त केली जात आहे.
नुकसानीचे तातडीने पंचनामे करून भरपाई द्या!…..
हत्तींच्या कळपामुळे नुकसान झालेल्या सर्व शेतकऱ्यांच्या शेतांची वनविभाग आणि महसूल विभागाच्या अधिकाऱ्यांनी तातडीने पाहणी करून नुकसानीचे पंचनामे करावेत. नुकसानग्रस्त शेतकऱ्यांना शासनाच्या नियमानुसार योग्य नुकसानभरपाई लवकरात लवकर देण्यात यावी, अशी मागणीही शिरोली परिसरातील शेतकऱ्यांनी केली आहे.
शेती हाच उदरनिर्वाहाचा मुख्य आधार असलेल्या शेतकऱ्यांचे वारंवार नुकसान होत असताना संबंधित विभागांनी केवळ पाहणी करून न थांबता ठोस कार्यवाही करावी. अन्यथा हत्तींच्या या वाढत्या उपद्रवामुळे शेतकऱ्यांना शेती करणेच कठीण होईल, अशी चिंता व्यक्त होत आहे.
ಶಿರೋಳಿಯಲ್ಲಿ ಕಾಡಾನೆಗಳ ಹಾವಳಿ; ಕಬ್ಬಿನ ಬೆಳೆ ಸೇರಿದಂತೆ ಬಾಳೆ ತೋಟಗಳಿಗೆ ಭಾರೀ ಹಾನಿ, ರೈತರು ಕಂಗಾಲು! ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯ!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಶಿರೋಳಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ಉಪಟಳ ನೀಡುತ್ತಿದ್ದು, ಇದರಿಂದ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕಬ್ಬಿನ ಬೆಳೆಗಳ ಜೊತೆಗೆ ಬಾಳೆ ತೋಟಗಳು ಹಾಗೂ ಇತರೆ ಕೃಷಿ ಬೆಳೆಗಳನ್ನು ಕಾಡಾನೆಗಳು ತುಳಿದು ನಾಶಪಡಿಸುತ್ತಿರುವುದರಿಂದ ಈ ಭಾಗದ ರೈತರು ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ರೈತ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಎರಡು ದಿನಗಳಲ್ಲಿ ಶಿರೋಳಿ ಗ್ರಾಮ ಪಂಚಾಯಿತಿಯ ಹಿಂಭಾಗದಲ್ಲಿ ನದಿಯ ಆಚೆ ದಡದಲ್ಲಿರುವ ಕೃಷಿ ಜಮೀನುಗಳಲ್ಲಿ ರವಿ ಕಾಟಗಿ ಮತ್ತು ಸಂತೋಷ ಅನಂತ ಬಿರ್ಜೆ ಎಂಬ ರೈತರ ಕಬ್ಬಿನ ಬೆಳೆಗಳಿಗೆ ಕಾಡಾನೆಗಳ ಹಿಂಡು ಭಾರೀ ಹಾನಿ ಉಂಟುಮಾಡಿದೆ. ಅದೇ ರೀತಿ ನದಿಯ ಈಚೆ ದಡದಲ್ಲಿರುವ ಸುಶೀಲ ದೇಸಾಯಿ, ವಿನಾಯಕ ರಾವುತ್, ಲಾಡೋಬಾ ರಾವುತ್ಮ ರುಕ್ಮಾಣಾ ಮಾಟಗೆ ಎಂಬ ರೈತರ ಜಮೀನುಗಳಲ್ಲಿನ ಕಬ್ಬಿನ ಬೆಳೆಗಳನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಅಲ್ಲದೆ, ಬಾಳೆ ತೋಟಗಳಿಗೂ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿವೆ.
ಬೆಳೆಗಳ ರಕ್ಷಣೆಗಾಗಿ ನಿರ್ಮಿಸಿದ್ದ ಕಂಬಗಳು ಮತ್ತು ತಂತಿಗಳು ಧ್ವಂಸ…..
ಕೃಷಿ ಬೆಳೆಗಳನ್ನು ವನ್ಯಪ್ರಾಣಿಗಳಿಂದ ರಕ್ಷಿಸುವ ಉದ್ದೇಶದಿಂದ ರೈತರು ತಮ್ಮ ಜಮೀನುಗಳ ಸುತ್ತಲೂ ಕಂಬಗಳನ್ನು ನೆಟ್ಟು ಅವುಗಳಿಗೆ ತಂತಿಗಳನ್ನು ಅಳವಡಿಸಿದ್ದರು. ಆದರೆ, ಕಾಡಾನೆಗಳ ಹಿಂಡು ಈ ಕಂಬಗಳನ್ನು ಕಿತ್ತುಹಾಕಿದ್ದು, ರಕ್ಷಣೆಗೆ ಅಳವಡಿಸಿದ್ದ ಎಲ್ಲಾ ತಂತಿಗಳನ್ನು ತುಂಡರಿಸಿದೆ. ಇದರಿಂದ ಬೆಳೆಗಳಿಗೆ ಹಾನಿಯಾಗುವುದರ ಜೊತೆಗೆ ಬೆಳೆಗಳ ರಕ್ಷಣೆಗಾಗಿ ರೈತರು ಮಾಡಿದ ಖರ್ಚು ಕೂಡ ವ್ಯರ್ಥವಾಗಿದೆ. ಈಗಾಗಲೇ ಕೃಷಿ ಉತ್ಪಾದನೆಗಾಗಿ ಹೆಚ್ಚಿನ ಹಣ ವೆಚ್ಚ ಮಾಡಿರುವ ರೈತರಿಗೆ ಈ ನಷ್ಟದಿಂದಾಗಿ ದ್ವಿಗುಣ ಆರ್ಥಿಕ ಹೊರೆ ಎದುರಾಗಿದೆ.
ಅರಣ್ಯ ಇಲಾಖೆ ತಕ್ಷಣ ಗಮನಹರಿಸುವಂತೆ ಒತ್ತಾಯ…..
ಶಿರೋಳಿ ಪರಿಸರದಲ್ಲಿ ಕಾಡಾನೆಗಳ ಸಂಚಾರ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ರೈತರಿಗೆ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಕಷ್ಟಕರವಾಗಿದೆ. ಹಗಲು-ರಾತ್ರಿ ಎನ್ನದೆ ಜಮೀನುಗಳಲ್ಲಿ ದುಡಿಯುವ ರೈತರಲ್ಲಿ ಕಾಡಾನೆಗಳ ಉಪಟಳದಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳು ಕೆಲವೇ ಕ್ಷಣಗಳಲ್ಲಿ ನಾಶವಾಗುತ್ತಿರುವುದರಿಂದ ರೈತರು ಅಸಹಾಯಕರಾಗಿದ್ದಾರೆ.
ಈ ಪ್ರದೇಶವು ಲೋಂಡಾ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವುದರಿಂದ ಲೋಂಡಾ ಅರಣ್ಯ ವಲಯದ ಎಸಿಎಫ್, ಆರ್ಎಫ್ಒ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಗಂಭೀರ ಸಮಸ್ಯೆಯತ್ತ ತಕ್ಷಣ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಾಡಾನೆಗಳ ಹಾವಳಿಗೆ ಕೇವಲ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬದಲು, ಈ ಭಾಗದ ರೈತರಿಗೆ ಪದೇಪದೇ ಎದುರಾಗುತ್ತಿರುವ ತೊಂದರೆಯಿಂದ ಮುಕ್ತಿ ನೀಡಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆಯು ವಿಶೇಷ ತಂಡವನ್ನು ನಿಯೋಜಿಸಬೇಕು. ಅಲ್ಲದೆ, ರೈತರ ಬೆಳೆಗಳ ರಕ್ಷಣೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೆಳೆ ನಷ್ಟದ ತಕ್ಷಣ ಪಂಚನಾಮೆ ನಡೆಸಿ ಪರಿಹಾರ ಒದಗಿಸಿ!…..
ಕಾಡಾನೆಗಳ ಹಿಂಡಿನಿಂದ ಹಾನಿಗೊಳಗಾದ ಎಲ್ಲಾ ರೈತರ ಜಮೀನುಗಳಿಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ನಷ್ಟದ ಪಂಚನಾಮೆ ಮಾಡಬೇಕು. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಎಂದು ಶಿರೋಳಿ ಪರಿಸರದ ರೈತರು ಒತ್ತಾಯಿಸಿದ್ದಾರೆ.
ಕೃಷಿಯನ್ನೇ ಜೀವನೋಪಾಯದ ಪ್ರಮುಖ ಆಧಾರವಾಗಿಸಿಕೊಂಡಿರುವ ರೈತರಿಗೆ ಪದೇಪದೇ ನಷ್ಟವಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೇವಲ ಪರಿಶೀಲನೆ ನಡೆಸಿ ಸುಮ್ಮನಾಗದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಡಾನೆಗಳ ಹೆಚ್ಚುತ್ತಿರುವ ಹಾವಳಿಯಿಂದಾಗಿ ರೈತರಿಗೆ ಕೃಷಿ ಮಾಡುವುದು ಕೂಡ ಕಷ್ಟಕರವಾಗಲಿದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.

