द मराठा लाईट इन्फंट्री रेजिमेंटल सेंटर तर्फे बेळगावात शौर्यवीर रन 2025 उत्साहात संपन्न..
बेळगाव (ता. 27): द मराठा लाईट इन्फंट्री रेजिमेंटल सेंटरतर्फे रविवारी ‘शौर्यवीर रन 2025’ या स्पर्धेचे भव्य आयोजन करण्यात आले. 79 व्या इन्फंट्री डे निमित्त हा उपक्रम राबविण्यात आला असून, शौर्यवीर रनचा प्रारंभ शिवाजी स्टेडियम येथून करण्यात आला.
मराठा लाईट इन्फंट्री रेजिमेंटल सेंटरचे कमांडंट ब्रिगेडियर जॉयदीप मुखर्जी यांनी ध्वज दाखवून स्पर्धेचा शुभारंभ केला. या स्पर्धेमध्ये बेळगावसह बाहेरील राज्यांमधील शेकडो धावपटूंनी उत्साहाने सहभाग नोंदविला होता.
स्पर्धा पाच किमी., सात किमी. आणि एकवीस किमी. अशा तीन विभागांमध्ये घेण्यात आली होती. यात विद्यार्थी, तरुण-तरुणी आणि माजी सैनिक सहभागी झाले. धावण्याच्या मार्गावर ठराविक अंतरावर पाण्याची व्यवस्था तसेच वैद्यकीय सुविधा उपलब्ध करून देण्यात आली होती.
विजेत्यांना रोख रक्कम, मेडल आणि प्रमाणपत्र देऊन गौरविण्यात आले. शिवाजी स्टेडियम येथे पार पडलेल्या पारितोषिक वितरण समारंभात ब्रिगेडियर जॉयदीप मुखर्जी यांच्या हस्ते बक्षिसे देण्यात आली.
या शौर्यवीर रन स्पर्धेला बेळगाव आणि परिसरातील तसेच बाहेरील धावपटूंनी उत्स्फूर्त प्रतिसाद दिला. देशासाठी आपले प्राण अर्पण केलेल्या शूर सैनिकांच्या स्मृतिप्रीत्यर्थ दरवर्षी २७ ऑक्टोबर रोजी ‘इन्फंट्री डे’ साजरा केला जातो.
या प्रसंगी बोलताना ब्रिगेडियर जॉयदीप मुखर्जी म्हणाले, “सैन्यदलातील शौर्य आणि तंदुरुस्ती ही देशाची ताकद आहे. प्रत्येकाने आपल्या दैनंदिन जीवनात तंदुरुस्त राहण्यासाठी नियमित धावणे आवश्यक आहे,” असे ते म्हणाले.
ಮರಾಠಾ ಲೈಟ್ ಇನ್ಫ್ಯಾನ್ಟ್ರಿ ರೆಜಿಮೆಂಟಲ್ ಸೆಂಟರ್ ವತಿಯಿಂದ ಬೆಳಗಾವಿಯಲ್ಲಿ “ಶೌರ್ಯವೀರ ರನ್ 2025” ಯಶಸ್ವಿಯಾಗಿ ನಡೆಯಿತು.
ಬೆಳಗಾವಿ (ತಾ. 27): ಮರಾಠಾ ಲೈಟ್ ಇನ್ಫ್ಯಾನ್ಟ್ರಿ ರೆಜಿಮೆಂಟಲ್ ಸೆಂಟರ್ ವತಿಯಿಂದ ಭಾನುವಾರ “ಶೌರ್ಯವೀರ ರನ್ 2025” ಎಂಬ ಭವ್ಯ ಸ್ಪರ್ಧೆಯು ಆಯೋಜಿಸಲಾಯಿತು. 79ನೇ ಇನ್ಫ್ಯಾನ್ಟ್ರಿ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶೌರ್ಯವೀರ ರನ್ ಸ್ಪರ್ಧೆಗೆ ಭಾನುವಾರ (ಅ. 26) ಶಿವಾಜಿ ಕ್ರೀಡಾಂಗಣದಿಂದ ಚಾಲನೆ ನೀಡಲಾಯಿತು.
ಮರಾಠಾ ಲೈಟ್ ಇನ್ಫ್ಯಾನ್ಟ್ರಿ ರೆಜಿಮೆಂಟಲ್ ಸೆಂಟರ್ನ ಕಮಾಂಡಂಟ್ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಅವರು ಧ್ವಜ ತೋರಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸ್ಪರ್ಧೆಯಲ್ಲಿ ಬೆಳಗಾವಿ ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಾರು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆ 5 ಕಿ.ಮೀ., 7 ಕಿ.ಮೀ. ಮತ್ತು 21 ಕಿ.ಮೀ. ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ವಿದ್ಯಾರ್ಥಿಗಳು, ಯುವಕರು, ಯುವತಿಯರು ಮತ್ತು ನಿವೃತ್ತ ಸೈನಿಕರು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಓಟದ ಮಾರ್ಗದಲ್ಲಿ ನಿರ್ದಿಷ್ಟ ಅಂತರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಅವರ ಹಸ್ತದಿಂದ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಈ ಶೌರ್ಯವೀರ ರನ್ ಸ್ಪರ್ಧೆಗೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಓಟಗಾರರಿಂದ ಭಾರೀ ಪ್ರತಿಕ್ರಿಯೆ ದೊರೆಯಿತು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶೂರ ಸೈನಿಕರ ಸ್ಮರಣಾರ್ಥವಾಗಿ ಪ್ರತೀ ವರ್ಷ ಅಕ್ಟೋಬರ್ 27ರಂದು “ಇನ್ಫ್ಯಾನ್ಟ್ರಿ ದಿನ”ವನ್ನು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ , “ಸೈನ್ಯದ ಶೌರ್ಯ ಮತ್ತು ದೇಹದಾರ್ಢ್ಯವೇ ದೇಶದ ಬಲವಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಓಡುವ ಅಭ್ಯಾಸ ಮಾಡಬೇಕು,” ಎಂದು ಸಲಹೆ ನೀಡಿದರು.

