राज्यस्तरीय व झोनल लेव्हल क्रीडा स्पर्धेत शांतिनिकेतन शाळेच्या विद्यार्थ्यांचे घवघवीत यश.
खानापूर ; विद्याभारती शिक्षण संस्था राज्यस्तरीय ॲथलेटिक्स स्पर्धा दिनांक 4 ऑक्टोंबर ते 7 आक्टोंबर बेंगलोर मधील जनसेवा विद्याकेंद्र याठिकाणी आयोजीत करण्यात आल्या होत्या. यामध्ये शांतीनिकेनन शाळेचे 30 विद्यार्थी सहभागी झाले होते. यास्पर्धा स्टेट लेव्हल आणी झोनल लेव्हल अशा दोन स्वरूपामध्ये खेळवल्या जातात. स्टेटलेव्हल मध्ये 14 जिल्हांचा सहभाग असतो. या स्पर्धेतील सर्व विजेत्या खेळाडूना झोनल लेव्हल मधील, आंध्रा, तेलंगाणा या राज्यातील विजेत्या खेळाडू बरोबर खेळवल्या जातात. त्यानंतर या स्पर्धेतील विजेत्याची राष्ट्रस्तरीय स्पर्धेसाठी निवड करण्यात येते.
स्टेटलेव्हल मध्ये झालेल्या स्पर्धेत शांतीनिकेतन शाळेचा विद्यार्थी श्रीलेश पाटील, याने हॅमर स्पर्धेत दुसरा क्रमांक पटकावून, झोनल लेव्हल साठी पात्र ठरला. त्याच प्रमाणे ट्रीपल जंप मध्ये परशुराम वाडकर यांने दुसरा क्रमांक पटकावून झोनल लेव्हलला पात्र ठरला. तर वैष्णवी पाटील हीने 3000 मिटर (3km) वॉक व खाली फेक स्पर्धेत दुसरा क्रमांक पटकावून झोनल लेव्हलला पात्र ठरली.
मैनुद्दीन धामनेकर यांने हॅमर थ्रो आणी थाळी फेक मध्ये तिसरा क्रमांक पटकावला, अलीना नंदगड 3 कि.मी वाँक स्पर्धेत निसरा क्रमांक मिळविला, तर अनिकेत कुंभार याने 800 मीटर आणी 400 मीटर रनिंग स्पर्धेत तिसरा क्रमांक पटकाविला, ओमकार गावडे याने 200 मीटर रनिंग स्पर्धेत तिसरा क्रमांक मिळविला.
झोनल स्पर्धेसाठी निवड झालेले परशुराम वाडकर ट्रीपल जंप मध्ये पहिला क्रमांक मिळविला. श्रीलेश पाटील हॅमर थ्रो मध्ये प्रथम क्रमांक. वैष्णवी पाटील 3000 मीटर रंनीग आणी 3 किलोमीटर वाँक स्पर्धेत दुसरा क्रमांक पटकावला. आणी अनिकेत कुंभार व परशुराम वाडकर 4×400 मीटर रिले स्पर्धेत सिलेक्ट ठरले. हे खेळाडू राष्ट्रस्तरीय सर्धेसाठी पात्र ठरले आहेत. ही स्पर्धा पुढच्या महिन्यात हासन मध्ये होणार आहे. या सर्व खेळाडूना महालक्ष्मी ग्रुप एजुकेशन ग्रुपचे संस्थापक व खानापूर तालुक्याचे आमदार विठ्ठल हालगेकर तसेच सेक्रेटरी व अन्य मॅनेजमेंट यांचे मार्गदर्शन लाभत आहे. तसेच शाळेच्या प्राचार्य स्वाती वाळवे व PRO मनिषा हलगेकर, शांतीनिकेतन शाळेचे क्रिडाशिक्षक ओमकार गावडे, सागर कोलेकर व स्वाती सावंत यांचे तसेच अन्य शिक्षकांचे मार्गदर्शन सातत्याने लाभत आहे.
ರಾಜ್ಯ ಹಾಗೂ ವಲಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳ ಅದ್ಭುತ ಯಶಸ್ಸು.
ಖಾನಾಪುರ : ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗಳು ಅಕ್ಟೋಬರ್ 4ರಿಂದ 7ರವರೆಗೆ ಬೆಂಗಳೂರು ಜನಸೇವಾ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದ್ದವು. ಈ ಸ್ಪರ್ಧೆಗಳಲ್ಲಿ ಶಾಂತಿನಿಕೇತನ ಶಾಲೆಯ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳು ರಾಜ್ಯ ಹಾಗೂ ವಲಯಮಟ್ಟ (ಝೋನಲ್) ಎಂಬ ಎರಡು ಹಂತಗಳಲ್ಲಿ ವಿಂಗಡಿಸಲಾಗಿತ್ತು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ 14 ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದರು. ಈ ಸ್ಪರ್ಧೆಯ ವಿಜೇತ ಆಟಗಾರರು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ವಿಜೇತರೊಂದಿಗೆ ವಲಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ನಂತರ, ವಲಯಮಟ್ಟದ ವಿಜೇತರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಅವಕಾಶ ಸಿಗುತ್ತದೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶಾಂತಿನಿಕೇತನ ಶಾಲೆಯ ಶ್ರೀಲೇಶ್ ಪಾಟೀಲ ಅವರು ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ವಲಯಮಟ್ಟಕ್ಕೆ ಅರ್ಹರಾಗಿದ್ದಾರೆ. ತ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪರಶುರಾಮ ವಾಡಕರ ಅವರು ಎರಡನೇ ಸ್ಥಾನ ಪಡೆದು ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಷ್ಣವಿ ಪಾಟೀಲ ಅವರು 3000 ಮೀಟರ್ ವಾಕ್ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ವಲಯಮಟ್ಟಕ್ಕೆ ಅರ್ಹರಾಗಿದ್ದಾರೆ.
ಮೈನುದ್ದೀನ್ ಧಾಮನೆಕರ್ ಅವರು ಹ್ಯಾಮರ್ ತ್ರೋ ಹಾಗೂ ಚಕ್ರ ಎಸೆತದಲ್ಲಿ ಮೂರನೇ ಸ್ಥಾನ, ಅಲೀನಾ ನಂದಗಡ್ ಅವರು 3 ಕಿಮೀ ವಾಕ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ಅನಿಕೇತ ಕುಂಭಾರ ಅವರು 800 ಮೀ. ಮತ್ತು 400 ಮೀ. ಓಟದಲ್ಲಿ ಮೂರನೇ ಸ್ಥಾನ, ಹಾಗೂ ಓಂಕಾರ್ ಗಾವಡೆ ಅವರು 200 ಮೀ. ಓಟದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.
ವಲಯಮಟ್ಟದ ಸ್ಪರ್ಧೆಯಲ್ಲಿ ಪರಶುರಾಮ ವಾಡಕರ ತ್ರಿಪಲ್ ಜಂಪ್ನಲ್ಲಿ ಪ್ರಥಮ ಸ್ಥಾನ, ಶ್ರೀಲೇಶ್ ಪಾಟೀಲ ಹ್ಯಾಮರ್ ತ್ರೋದಲ್ಲಿ ಪ್ರಥಮ ಸ್ಥಾನ, ವೈಷ್ಣವಿ ಪಾಟೀಲ 3000 ಮೀಟರ್ ಓಟ ಮತ್ತು 3 ಕಿಮೀ ವಾಕ್ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಅನಿಕೇತ ಕುಂಭಾರ ಮತ್ತು ಪರಶುರಾಮ ವಾಡಕರ ಅವರು 4×400 ಮೀಟರ್ ರಿಲೇ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ಆಟಗಾರರು ಈಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹರಾಗಿದ್ದು, ಈ ಸ್ಪರ್ಧೆ ಮುಂದಿನ ತಿಂಗಳು ಹಾಸನದಲ್ಲಿ ನಡೆಯಲಿವೆ.
ಈ ಎಲ್ಲ ಆಟಗಾರರಿಗೆ ಮಹಾಲಕ್ಷ್ಮಿ ಎಜುಕೇಶನ್ ಗ್ರೂಪ್ನ ಸಂಸ್ಥಾಪಕ ಹಾಗೂ ಖಾನಾಪುರ ಕ್ಷೇತ್ರದ ಜನ ಪ್ರಿಯ ಶಾಸಕ ವಿಠ್ಠಲ್ ಹಾಲಗೆಕರ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಇತರೆ ಆಡಳಿತ ಮಂಡಳಿಯವರ ಮಾರ್ಗದರ್ಶನ ದೊರಕಿದೆ. ಹಾಗೆಯೇ ಶಾಲೆಯ ಪ್ರಾಚಾರ್ಯೆ ಸ್ವಾತಿ ವಾಳವೆ, PRO ಮನೀಷಾ ಹಲಗೇಕರ, ಕ್ರೀಡಾ ಶಿಕ್ಷಕರು ಓಂಕಾರ್ ಗವಡೆ, ಸಾಗರ್ ಕೊಲೆಕರ, ಸ್ವಾತಿ ಸಾವಂತ ಹಾಗೂ ಇತರೆ ಶಿಕ್ಷಕರ ಮಾರ್ಗದರ್ಶನ ಈ ಯಶಸ್ಸಿಗೆ ಪೂರಕವಾಗಿದೆ.

