
शांतिनिकेतन पदवीपूर्व महाविद्यालयाचे तालुकास्तरीय क्रीडास्पर्धेत यश
खानापूर : शांतिनिकेतन पदवीपूर्व महाविद्यालयाच्या खेळाडूंनी तालुकास्तरीय क्रीडास्पर्धेत उल्लेखनीय कामगिरी करत घवघवीत यश संपादन केले. पदवीपूर्व शिक्षण खाते बेळगाव व के. एल. ई. कॉलेज, खानापूर यांच्या संयुक्त विद्यमाने आयोजित या स्पर्धेत शांतिनिकेतनच्या विद्यार्थ्यांनी सांघिक तसेच वैयक्तिक प्रकारात उत्तम कामगिरी केली.
सांघिक प्रकारात खोखो या खेळात शांतिनिकेतनच्या संघाने माऊली कॉलेजवर मात करत प्रथम क्रमांक मिळवून सुवर्णपदक पटकावले. यामुळे संघाची जिल्हास्तरीय स्पर्धेसाठी निवड झाली आहे. तसेच हॉलीबॉलमध्ये द्वितीय येत रजत पदक मिळविले असून, या खेळातील चार खेळाडूंची जिल्हास्तरीय स्पर्धेसाठी निवड झाली आहे.
वैयक्तिक प्रकारात अकरावीची विद्यार्थिनी कुमारी सौंदर्या हलगेकर हिने 400 मीटर धावण्यात प्रथम येत सुवर्णपदक मिळविले. मुलांच्या गटात कुमार समर्थ कदम याने 400 मीटर धावणे व 400 मीटर हर्डलमध्ये सुवर्णपदक तसेच 110 मीटर हर्डलमध्ये रजत पदक मिळविले. ट्रिपल जंपमध्ये कुमार शुभम चव्हाण व लांबउडीत कुमार रोहन चौगुले यांनी सुवर्णपदक पटकावले.
महाविद्यालयाच्या खेळाडूंनी रिले शर्यतीतही चमकदार कामगिरी करत 4×400 मीटर रिलेमध्ये सुवर्ण व 4×100 मीटर रिलेमध्ये रजत पदक मिळविले.
या घवघवीत यशाबद्दल खानापूर तालुक्याचे आमदार व श्री महालक्ष्मी ग्रुप सोसायटी तोपिनकट्टीचे संस्थापक-अध्यक्ष श्री विठ्ठलराव सोमान्ना हलगेकर यांनी सर्व विद्यार्थ्यांचे अभिनंदन केले व जिल्हास्तरीय स्पर्धेसाठी शुभेच्छा दिल्या. तसेच सेक्रेटरी आर. एस. पाटील, संचालक मंडळ व प्राचार्या सुवर्णा निलजकर यांनीही खेळाडूंचे कौतुक केले. महाविद्यालयाचे प्राध्यापकवर्गही सतत विद्यार्थ्यांना प्रोत्साहन देत आहेत.
ಶಾಂತಿನಿಕೇತನ ಪದವಿಪೂರ್ವ ಕಾಲೇಜಿನ, ತಾಲ್ಲೂಕು ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಭಾರಿ ಯಶಸ್ಸು
ಖಾನಾಪುರ : ಶಾಂತಿನಿಕೇತನ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು ತಾಲ್ಲೂಕು ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿ, ಘನಯಶಸ್ಸು ಗಳಿಸಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಕೆ.ಎಲ್.ಇ. ಕಾಲೇಜು, ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕ್ರೀಡಾಸ್ಪರ್ಧೆಯಲ್ಲಿ ಶಾಂತಿನಿಕೇತನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಂಘಿಕ ಕ್ರೀಡೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.
ಸಾಂಘಿಕ ವಿಭಾಗದಲ್ಲಿ ಖೋ-ಖೋ ಆಟದಲ್ಲಿ ಶಾಂತಿನಿಕೇತನ ತಂಡವ ಮಾವುಲಿ ಕಾಲೇಜು ಮೇಲೆ ಭರ್ಜರಿ ಜಯ ಸಾಧಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕವನ್ನು ಗಳಿಸಿದೆ. ಇದರೊಂದಿಗೆ ತಂಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದು, ಈ ಆಟದಲ್ಲಿ ನಾಲ್ಕು ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡಾಸ್ಪರ್ಧೆಗೆ ಆಯ್ಕೆಯಾದರು.
ವೈಯಕ್ತಿಕ ವಿಭಾಗದಲ್ಲಿ XI ತರಗತಿಯ ವಿದ್ಯಾರ್ಥಿನಿ ಸೌಂದರ್ಯ ಹಲಗೇಕರ್ 400 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಜಯಿಸಿದರು. ವಿದ್ಯಾರ್ಥಿ ಸಮರ್ಥ ಕದಮ 400 ಮೀ. ಓಟ ಹಾಗೂ 400 ಮೀ. ಹರ್ಡಲ್ಸ್ನಲ್ಲಿ ಬಂಗಾರದ ಪದಕ ಮತ್ತು 110 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿ ಪದಕ ಪಡೆದರು. ಟ್ರಿಪಲ್ ಜಂಪ್ ನಲ್ಲಿ ಶುಭಂ ಚವ್ಹಾಣ ಹಾಗೂ ಲಾಂಗ್ ಜಂಪ್ ನಲ್ಲಿ ರೋಹಣ ಚೌಗುಲೆ ತಲಾ ಬಂಗಾರದ ಪದಕ ಜಯಿಸಿದರು.
ರಿಲೇ ಓಟದಲ್ಲಿಯೂ ಶಾಂತಿನಿಕೇತನ ಕ್ರೀಡಾಪಟುಗಳು ಮಿಂಚಿ 4×400 ಮೀ. ರಿಲೇಯಲ್ಲಿ ಬಂಗಾರದ ಪದಕ ಹಾಗೂ 4×100 ಮೀ. ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿದರು.
ಈ ಘನಯಶಸ್ಸಿನ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಶಾಸಕರು ಹಾಗೂ ಶ್ರೀ ಮಹಾಲಕ್ಷ್ಮಿ ಗ್ರೂಪ್ ಸೊಸೈಟಿ ತೋಪಿಣಕಟ್ಟಿಯ ಸಂಸ್ಥಾಪಕಾಧ್ಯಕ್ಷರಾದ ವಿಠ್ಠಲರಾವ ಸೋಮಣ್ಣ ಹಲಗೇಕರ್ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಗಾಗಿ ಶುಭಹಾರೈಸಿದರು. ಅಲ್ಲದೇ ಸೆಕ್ರೆಟರಿ ಆರ್. ಎಸ್. ಪಾಟೀಲ, ಸಂಚಾಲಕ ಮಂಡಳಿ ಹಾಗೂ ಪ್ರಾಂಶುಪಾಲೆ ಸುವರ್ಣಾ ನಿಲಜ್ಕರ್ ಅವರೂ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕ ವರ್ಗವೂ ವಿದ್ಯಾರ್ಥಿಗಳನ್ನು ಸದಾ ಉತ್ತೇಜಿಸುತ್ತಿದ್ದಾರೆ.
