नंदगड परिसरात बससेवेचा गंभीर प्रश्न; विद्यार्थी व नागरिक त्रस्त- आमदारांनी लक्ष देणे गरजेचे.
खानापूर (ता. प्रतिनिधी) – शालेय व महाविद्यालयीन शिक्षणासाठी खानापूर, बेळगाव व हल्याळकडे जाणाऱ्या विद्यार्थ्यांना वेळेवर पोहोचणे अवघड झाले आहे. बसमध्ये जागा मिळवण्यासाठी रोज सकाळी मोठी गर्दी होत असून, अनेकदा विद्यार्थी दारावर लटकून किंवा छपरावर बसून प्रवास करत असल्याची दृश्ये समोर येत आहेत. ही परिस्थिती विद्यार्थ्यांच्या सुरक्षेला गंभीर धोका निर्माण करत आहे.
सागरे, निजिनकोडल, भुतेवाडी, कसबा नंदगड या भागातील विद्यार्थी व नागरिक या समस्येमुळे त्रस्त झाले आहेत. खानापूरचे आमदार विठ्ठल हलगेकर हे पूर्वी शिक्षक राहिलेले असल्याने त्यांनी विद्यार्थ्यांची अडचण ओळखून तातडीने पावले उचलावीत, अशी मागणी नागरिकांतून होत आहे.
फक्त विद्यार्थीच नव्हे, तर नोकरी, व्यवसाय तसेच रुग्णालयीन कामांसाठी प्रवास करणारे सामान्य नागरिकही बससेवेच्या गैरसोयीचा मोठा फटका सहन करत आहेत. वेळेवर बस न मिळाल्याने त्यांची महत्त्वाची कामे रखडत असून, अस्वस्थता वाढत आहे. याशिवाय काही बस चालक ठराविक थांब्यांवर न थांबता पुढे किंवा मागे वाहन थांबवतात, त्यामुळे प्रवाशांमध्ये गोंधळ निर्माण होतो.
“निव्वळ बस मिळावी म्हणून नागरिक जीव धोक्यात घालून प्रवास करत आहेत, पण प्रशासन डोळेझाक करत आहे,” अशी तीव्र भावना ग्रामस्थांनी व्यक्त केली. या पार्श्वभूमीवर वाहतूक विभागाने नंदगड परिसरातील बससेवा अधिक नियमित, वेळेवर व सुरक्षित करण्यासाठी तातडीने उपाययोजना कराव्यात, अशी जोरदार मागणी होत आहे.
ನಂದಗಡ ಭಾಗದಲ್ಲಿ ಬಸ್ ಸೇವೆಯ ಗಂಭೀರ ಸಮಸ್ಯೆ; ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾರಿ ಆಕ್ರೋಷ – ಶಾಸಕರ ತಕ್ಷಣ ಗಮನ ಹರಿಸುವ ಅಗತ್ಯ.
ಖಾನಾಪುರ (ತಾ. ಪ್ರತಿನಿಧಿ) – ಶಾಲೆ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ಖಾನಾಪುರ, ಬೆಳಗಾವಿ ಮತ್ತು ಹಳಿಯಾಳ ಕಡೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ತಲುಪುವುದು ಕಷ್ಟಸಾಧ್ಯವಾಗುತ್ತಿದೆ. ಬಸ್ನಲ್ಲಿ ಹತ್ತಲು ಪ್ರತಿದಿನ ಬೆಳಿಗ್ಗೆ ದೊಡ್ಡ ಮಟ್ಟದ ಕಸರತ್ತು ನಡೆಯುತ್ತಿದ್ದು, ಅನೇಕ ಬಾರಿ ವಿದ್ಯಾರ್ಥಿಗಳು ಬಾಗಿಲಿಗೆ ತೂಗಿ ಅಥವಾ ಬಸ್ಸಿನ ಚಾವಣಿ ಮೇಲೆ ಕೂತು ಪ್ರಯಾಣ ಮಾಡುವ ಘಟನೆಗಳು ಕಂಡುಬರುತ್ತಿವೆ. ಈ ಪರಿಸ್ಥಿತಿ ವಿದ್ಯಾರ್ಥಿಗಳ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ.
ಸಾಗರೆ, ನಂಜಿನಕೊಡ್ಲ ಭೂತೇವಾಡಿ, ಕಸಬಾ ನಂದಗಡ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಖಾನಾಪುರದ ಶಾಸಕ ವಿಠ್ಠಲ್ ಹಲಗೇಕರ ಅವರು ಈ ಮೂದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕಾರಣ, ವಿದ್ಯಾರ್ಥಿಗಳ ಸಮಸ್ಯೆಯನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಷ್ಟೇ ಅಲ್ಲದೆ, ಉದ್ಯೋಗ, ವ್ಯಾಪಾರ ಹಾಗೂ ಆಸ್ಪತ್ರೆಯ ಕೆಲಸಕ್ಕಾಗಿ ಪ್ರಯಾಣ ಮಾಡುವ ಸಾಮಾನ್ಯ ಜನರೂ ಬಸ್ ಸೇವೆಯ ಅಸಮರ್ಪಕತೆಯಿಂದಾಗಿ ದೊಡ್ಡ ಅನಾನುಕೂಲ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಬಸ್ ಸಿಗದ ಕಾರಣ ಅವರ ಪ್ರಮುಖ ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲ, ಇದರಿಂದ ಅಸಮಾಧಾನ ಹೆಚ್ಚುತ್ತಿದೆ. ಜೊತೆಗೆ, ಕೆಲ ಬಸ್ ಚಾಲಕರು ನಿಗದಿತ ನಿಲ್ದಾಣಗಳಲ್ಲಿ ನಿಲ್ಲದೇ ಬೇರೆ ಕಡೆ ವಾಹನ ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತಿದೆ.
“ಕೇವಲ ಬಸ್ ಸಿಗಬೇಕು ಎಂಬ ಕಾರಣಕ್ಕೆ ನಾಗರಿಕರು ಪ್ರಾಣಾಪಾಯದ ಪ್ರಯಾಣ ಮಾಡುತ್ತಿದ್ದಾರೆ, ಆದರೆ ಆಡಳಿತ ಮಾತ್ರ ಕುರುಡು ಜಾಣನಂತೆ ವರ್ತಿಸುತ್ತಿದ್ದಾರೆ ಕಾರಣ ತೀವ್ರ ಅಸಮಾಧಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ನಂದಗಡ ಭಾಗದಲ್ಲಿ ಬಸ್ ಸೇವೆಯನ್ನು ಹೆಚ್ಚು ನಿಯಮಿತ, ಸಮಯಪಾಲನೆ ಹಾಗೂ ಸುರಕ್ಷಿತಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

