संजय कुबल म्हणजे खानापूरातील भाजपाचा मजबूत आधारस्तंभ ; खासदार विश्वेश्वर हेगडे-कागेरी यांचे गौरवोद्गार. वाढदिवस सोहळा मोठ्या उत्साहात संपन्न.
खानापूर (ता. 6 नोव्हेंबर) : भारतीय जनता पक्षाचे माजी तालुकाध्यक्ष व ज्येष्ठ नेते संजय कुबल यांचा वाढदिवस भारतीय जनता पक्षाच्या वतीने मोठ्या उत्साहात साजरा करण्यात आला. या कार्यक्रमाचे आयोजन सार्वजनिक बांधकाम विभागाच्या विश्रामधाम येथे करण्यात आले होते.

या प्रसंगी कॅनरा क्षेत्राचे खासदार विश्वेश्वर हेगडे-कागेरी, खानापूरचे आमदार विठ्ठल हलगेकर, तसेच भाजपाचे जिल्हा उपाध्यक्ष प्रमोद कोचेरी यांच्या हस्ते संजय कुबल यांचा हार, शाल आणि श्रीफळ देऊन सत्कार करण्यात आला. यावेळी वातावरण उत्साहाने भारावून गेले होते.
कार्यक्रमाला भाजप तालुका अध्यक्ष बसवराज सानिकोप, बाबुराव देसाई, जनरल सेक्रेटरी गुंडू तोपिनकट्टी, मल्लाप्पा मारीहाळ, भाजप युवा मोर्चा जिल्हा उपाध्यक्ष पंडित ओगले, उपाध्यक्ष चेतन मनेरिकर, तसेच लैला शुगरचे एम.डी. सदानंद पाटील, धनंजय जाधव उपस्थित होते. सर्व मान्यवरांनीही हार व पुष्पगुच्छ देऊन संजय कुबल यांचा सत्कार केला.
या वेळी बोलताना खासदार विश्वेश्वर हेगडे-कागेरी म्हणाले, “संजय कुबल म्हणजे खानापूर तालुक्यातील भारतीय जनता पक्षाचा खरा आधारस्तंभ आहेत. एकेकाळी पक्षाकडे कार्यकर्तेही नव्हते, अशा कठीण काळात त्यांनी गावोगाव फिरून पक्षाची पायाभरणी केली. त्यांच्या मेहनतीमुळे आज भाजपाला तालुक्यात मजबूत स्थान मिळाले आहे.”
आमदार विठ्ठल हलगेकर यांनी आपल्या मनोगतात सांगितले, “संजय कुबल यांनी सुरुवातीच्या काळात पक्ष बांधणीसाठी अपार परिश्रम घेतले. त्यांच्या त्यागामुळेच प्रल्हाद रेमाणी हे तालुक्यातील पहिले भाजप आमदार म्हणून निवडून आले. मी सुद्धा त्यांच्या सहकार्यामुळे आमदार झालो, हे माझे भाग्य आहे.”
या कार्यक्रमाला जोतिबा रेमाणी, लक्ष्मणराव झांजरे, गजानन पाटील, माजी सभापती सयाजी पाटील, अशोक देसाई, मोहन पाटील, राजेंद्र रायका, पुंडलिक नाकाडी, मारुती पाटील, प्रकाश निलजकर, भूषण ठोंबरे तसेच खानापूर तालुक्यातील भाजपाचे अनेक पदाधिकारी व कार्यकर्ते मोठ्या संख्येने उपस्थित होते.
कार्यक्रमाच्या शेवटी सर्व कार्यकर्त्यांनी संजय कुबल यांना शुभेच्छा देत दीर्घायुष्य व यशस्वी राजकीय आयुष्याच्या कामना व्यक्त केल्या.
ಸಂಜಯ ಕುಬಲ ಅಂದರೆ ಖಾನಾಪೂರದ ಬಿಜೆಪಿ ಪಕ್ಷದ ಪ್ರಬಲ ಆಧಾರಸ್ತಂಭ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಶಂಸೆಯ ನುಡಿಗಳು. ಹುಟ್ಟುಹಬ್ಬ ಸಮಾರಂಭ ಅದ್ದೂರಿಯಾಗಿ ಆಚರಣೆ.
ಖಾನಾಪುರ (ತಾ. 6 ನವೆಂಬರ್) : ಭಾರತೀಯ ಜನತಾ ಪಕ್ಷದ ಮಾಜಿ ತಾಲ್ಲೂಕಾ ಅಧ್ಯಕ್ಷ ಹಾಗೂ ಹಿರಿಯ ನಾಯಕ ಸಂಜಯ ಕುಬಲ ಅವರ ಹುಟ್ಟುಹಬ್ಬವನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಾರ್ವಜನಿಕ ನಿರ್ಮಾಣ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕ್ಯಾನರಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಖಾನಾಪೂರ ಶಾಸಕರಾದ ವಿಠ್ಠಲ ಹಲಗೇಕರ್, ಹಾಗು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೊಚೇರಿ ಇವರ ಕೈಯಿಂದ ಸಂಜಯ ಕುಬಲ ಅವರಿಗೆ ಹಾರ, ಶಾಲು ಹಾಗೂ ಶ್ರೀಫಲ ನೀಡಿ ಸತ್ಕಾರ ಮಾಡಲಾಯಿತು. ಸತ್ಕಾರದ ಸಂದರ್ಭದಲ್ಲಿ ಸಭಾಂಗಣವು ಉತ್ಸಾಹದ ವಾತಾವರಣದಿಂದ ತುಂಬಿ ತುಳುಕಿತು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ, ಜನರಲ್ ಸೆಕ್ರೆಟರಿ ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿ ಹಾಳ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಒಗಲೆ, ಉಪಾಧ್ಯಕ್ಷ ಚೇತನ್ ಮನೇರಿಕರ್, ಹಾಗು ಲೈಲಾ ಶುಗರ್ನ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಉಪಸ್ಥಿತರಿದ್ದರು. ಎಲ್ಲ ಗಣ್ಯರು ಹೂಗುಚ್ಛ ಹಾಗೂ ಹಾರ ನೀಡಿ ಸಂಜಯ ಕುಬಲ ಅವರ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು – “ಸಂಜಯ ಕುಬಲ ಅಂದರೆ ಖಾನಾಪೂರ ತಾಲ್ಲೂಕಿನ ಭಾರತೀಯ ಜನತಾ ಪಕ್ಷದ ನಿಜವಾದ ಆಧಾರಸ್ತಂಭ. ಒಂದು ಕಾಲದಲ್ಲಿ ಪಕ್ಷಕ್ಕೆ ಕಾರ್ಯಕರ್ತರೂ ಇರಲಿಲ್ಲ, ಅಂತಹ ಕಠಿಣ ಪರಿಸ್ಥಿತಿಯಲ್ಲಿಯೇ ಅವರು ಹಳ್ಳಿಹಳ್ಳಿಗೆ ತೆರಳಿ ಪಕ್ಷದ ಬುನಾದಿ ಹಾಕಿದರು. ಅವರ ಶ್ರಮದ ಫಲವಾಗಿ ಇಂದು ಬಿಜೆಪಿ ಖಾನಾಪೂರ ತಾಲ್ಲೂಕಿನಲ್ಲಿ ಭದ್ರವಾದ ಸ್ಥಾನ ಪಡೆದಿದೆ.”
ಶಾಸಕ ವಿಠ್ಠಲ ಹಲಗೆಕರ್ ತಮ್ಮ ಮನೋಗತದಲ್ಲಿ ಹೇಳುತ್ತಾ – “ಸಂಜಯ ಕುಬಲ ಅವರು ಪಕ್ಷದ ಪ್ರಾರಂಭಿಕ ಹಂತದಲ್ಲಿ ಅಪಾರ ಪರಿಶ್ರಮ ಪಟ್ಟು ಸಂಘಟನೆ ಬಲಪಡಿಸಿದರು. ಅವರ ತ್ಯಾಗ ಮತ್ತು ಕಠಿಣ ಶ್ರಮದ ಫಲವಾಗಿ ಪ್ರಲ್ಹಾದ ರೆಮಾನಿ ಅವರು ತಾಲ್ಲೂಕಿನ ಮೊದಲ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. ನಾನೂ ಅವರ ಸಹಕಾರದಿಂದಲೇ ಶಾಸಕನಾದೆ; ಇದು ನನ್ನ ಭಾಗ್ಯ.” ಎಂದರು.
ಈ ಕಾರ್ಯಕ್ರಮಕ್ಕೆ ಜೋತಿಬಾ ರೆಮಾನಿ, ಲಕ್ಷ್ಮಣರಾವ್ ಝಾಂಜರೆ, ಗಜಾನನ ಪಾಟೀಲ, ಮಾಜಿ ಸಭಾಪತಿ ಸಯಾಜಿ ಪಾಟೀಲ, ಅಶೋಕ ದೇಸಾಯಿ, ಮೋಹನ್ ಪಾಟೀಲ, ರಾಜೇಂದ್ರ ರೈಕಾ, ಪುಂಡಲಿಕ ನಾಕಾಡಿ, ಪ್ರಕಾಶ ನಿಲಜಕರ್, ಭೂಷಣ ಠೋಂಬರೆ, ಹಾಗು ಖಾನಾಪೂರ ತಾಲ್ಲೂಕಿನ ಬಿಜೆಪಿ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ಕಾರ್ಯಕರ್ತರೂ ಸಂಜಯ ಕುಬಲ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಅರ್ಪಿಸಿ, ಅವರಿಗೆ ದೀರ್ಘಾಯುಷ್ಯ ಮತ್ತು ಯಶಸ್ವಿ ರಾಜಕೀಯ ಜೀವನದ ಹಾರೈಕೆಗಳು ಸಲ್ಲಿಸಿದರು.


