संगरगाळी येथे वृद्ध व विशेष सक्षम व्यक्तींना घरपोच रेशन धान्य देण्याची कदंबा फाउंडेशनची मागणी; जिल्हाधिकाऱ्यांना निवेदन.
खानापूर : खानापूर तालुक्यातील संगरगाळी ग्रामपंचायत हद्दीतील संगरगाळी परिसरात राहणाऱ्या वृद्ध व विशेष सक्षम (अपंग) नागरिकांना रेशन धान्य मिळवताना मोठ्या अडचणींचा सामना करावा लागत आहे. संबंधित नागरिकांना सुमारे 2 किलोमीटर अंतरावर जाऊन रेशन घ्यावे लागत असून, शारीरिक असमर्थतेमुळे गेल्या काही महिन्यांपासून त्यांना रेशन धान्य मिळू शकलेले नाही. त्यामुळे अनेक वृद्ध व अपंग नागरिकांवर उपासमारीची वेळ आली आहे.
या गंभीर विषयाची चौकशी करून संबंधितांना न्याय मिळवून द्यावा, अशी मागणी कदंबा फाउंडेशनच्या वतीने जिल्हाधिकारी मोहम्मद रोशन यांच्याकडे निवेदनाद्वारे करण्यात आली आहे. कदंबा फाउंडेशनचे अध्यक्ष जॉर्डन गोन्साल्विस यांनी बेळगाव येथे जिल्हाधिकाऱ्यांची प्रत्यक्ष भेट घेऊन हे निवेदन सादर केले.
या संदर्भात यापूर्वीच खानापूर तालुक्यातील अन्न निरीक्षक (फूड इन्स्पेक्टर) यांना पत्र देण्यात आले होते. मात्र त्यावर कोणतीही कार्यवाही करण्यात आली नसल्याचे निवेदनात नमूद करण्यात आले आहे. तसेच गुंजी येथील रेशन दुकान क्रमांक 146 चे वितरक सतीश कुलकर्णी यांनीही समाधानकारक उत्तर दिले नसल्याचा आरोप करण्यात आला आहे.
संगरगाळी परिसरातील 8 वृद्ध व विशेष सक्षम नागरिकांना घरपोच पद्धतीने रेशन धान्य पुरवठ्याची व्यवस्था करावी, तसेच संबंधित अन्न अधिकारी व रेशन वितरकावर योग्य ती कारवाई करावी, अशी ठाम मागणी कदंबा फाउंडेशनने केली आहे.
यावेळी फाउंडेशनचे उपाध्यक्ष एम.जी. कुमार, अॅड. आकाश अथनीकर, मायकल आंद्रादे, पिंटू साळुंखे, किशोर कलाल, कारु लिमा आदी उपस्थित होते.
ಸಂಗರಗಾಳಿ ಗ್ರಾಮದಲ್ಲಿ ವೃದ್ಧರು ಮತ್ತು ವಿಶೇಶ ವಿಕಲಚೇತನ ಹೊಂದಿರುವ ವ್ಯಕ್ತಿಗಳಿಗೆ ಮನೆಗೆ ರೇಷನ್ ಧಾನ್ಯ ಒದಗಿಸುವಂತೆ ಕದಂಬ ಫೌಂಡೇಶನ್ ವತಿಯಿಂದ ಬೇಡಿಕೆ; ಜಿಲ್ಲಾಧಿಕಾರಿಗಳಿಗೆ ಮನವಿ..
ಖಾನಾಪುರ: ಖಾನಾಪುರ ತಾಲ್ಲೂಕಿನ ಸಂಗರಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗರಗಾಳಿ ಪ್ರದೇಶದಲ್ಲಿ ವಾಸಿಸುವ ವೃದ್ಧರು ಮತ್ತು ವಿಶೇಷ ಅಂಗವಿಕಲ ನಾಗರಿಕರು ರೇಷನ್ ಧಾನ್ಯ ಪಡೆಯುವಲ್ಲಿ ದೊಡ್ಡ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಂಬಂಧಿತ ನಾಗರಿಕರು ಸುಮಾರು 2 ಕಿಲೋಮೀಟರ್ ದೂರದ ವರೆಗೆ ಹೋಗಿ ರೇಷನ್ ಪಡೆಯಬೇಕಾಗಿದ್ದು, ದೈಹಿಕ ಅಸಮರ್ಥತೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಅವರಿಗೆ ರೇಷನ್ ಧಾನ್ಯ ದೊರಕಿಲ್ಲ. ಪರಿಣಾಮವಾಗಿ ಅನೇಕ ವೃದ್ಧರು ಮತ್ತು ಅಂಗವಿಕಲ ನಾಗರಿಕರು ಉಪವಾಸಕ್ಕೆ ಒಳಗಾಗುವ ಪರಿಸ್ಥಿತಿ ಉಂಟಾಗಿದೆ.
ಈ ಗಂಭೀರ ವಿಷಯವನ್ನು ಪರಿಶೀಲಿಸಿ ಸಂಬಂಧಿತರಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯನ್ನು ಕದಂಬ ಫೌಂಡೇಶನ್ ವತಿಯಿಂದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರಿಗೆ ಮನವಿಪತ್ರದ ಮೂಲಕ ಸಲ್ಲಿಸಲಾಗಿದೆ. ಕದಂಬ ಫೌಂಡೇಶನ್ ಅಧ್ಯಕ್ಷ ಜೋರ್ಡನ್ ಗೋನ್ಸಾಲ್ವಿಸ್ ಅವರು ಬೆಳಗಾವಿಯಲ್ಲಿ ಜಿಲ್ಲಾಧಿಕಾರರನ್ನು ನೇರವಾಗಿ ಭೇಟಿ ಮಾಡಿ ಈ ಮನವಿಯನ್ನು ಸಲ್ಲಿಸಿದರು.
ಈ ಕುರಿತು ಈಗಾಗಲೇ ಖಾನಾಪುರ ತಾಲ್ಲೂಕಿನ ಆಹಾರ ನಿರೀಕ್ಷಕರಿಗೆ (ಫುಡ್ ಇನ್ಸ್ಪೆಕ್ಟರ್) ಮನವಿ ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಗುಂಜಿ ರೇಷನ್ ಅಂಗಡಿ ಸಂಖ್ಯೆ 146 ರ ವಿತರಕ ಸತೀಶ ಕುಲಕರ್ಣಿ ಅವರು ಸಹ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಸಂಗರಗಾಳಿ ಪ್ರದೇಶದ 8 ವೃದ್ಧರು ಮತ್ತು ವಿಶೇಷ ಅಂಗವಿಕಲ ಸಾಮರ್ಥ್ಯ ಹೊಂದಿರುವ ನಾಗರಿಕರಿಗೆ ಮನೆಗೆ ರೇಷನ್ ಧಾನ್ಯ ಪೂರೈಕೆ ವ್ಯವಸ್ಥೆ ಮಾಡಬೇಕು, ಹಾಗೂ ಸಂಬಂಧಿತ ಆಹಾರ ಅಧಿಕಾರಿಗಳು ಮತ್ತು ರೇಷನ್ ವಿತರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಕದಂಬ ಫೌಂಡೇಶನ್ ಮಾಡಿದೆ.
ಈ ವೇಳೆ ಫೌಂಡೇಶನ್ನ ಉಪಾಧ್ಯಕ್ಷ ಎಂ.ಜಿ. ಕುಮಾರ್, ಅಡ್ವೊ. ಆಕಾಶ ಅಥಣಿಕರ್, ಮೈಕಲ್ ಅಂದ್ರಾದೆ, ಪಿಂಟು ಸಾಳುಂಖೆ, ಕಿಶೋರ ಕಲಾಲ್, ಕಾರು ಲಿಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.



