खानापूरात मराठा समाजाच्या जनगणना मार्गदर्शनासाठी बैठक.
खानापूर : सकल मराठा समाज, खानापूर तालुका यांच्या वतीने मंगळवार, दिनांक 16 सप्टेंबर 2025 रोजी सकाळी 11 वाजता राजा शिवछत्रपती स्मारक येथे महत्त्वपूर्ण बैठक आयोजित करण्यात आली आहे.
लवकरच कर्नाटक राज्यात होणाऱ्या जनगणनेच्या पार्श्वभूमीवर मराठा समाजाने आपली नोंद कोणत्या पद्धतीने करावी, कोणत्या रकान्यापुढे नोंद करणे आवश्यक आहे याबाबत मार्गदर्शन करण्यात येणार आहे. तसेच खानापूर शहर व तालुका परिसरातील मराठा समाज बांधवांमध्ये या संदर्भात जनजागृती करून योग्य नोंदणी सुनिश्चित करण्यासाठी या बैठकीत निर्णय घेण्यात येणार आहे.
समाजातील तरुणाईच्या हितासंबंधी जनजागृती करणे ही काळाची गरज असल्याने ही बैठक अत्यंत महत्त्वपूर्ण ठरणार आहे. त्यामुळे मराठा समाजातील सर्व घटकांनी मोठ्या संख्येने उपस्थित राहावे, असे आवाहन करण्यात आले आहे.
या बैठकीसाठी सकल मराठा समाज, खानापूर तालुका यांच्यामार्फत विद्यमान आमदार श्री. विठ्ठलराव हलगेकर, माजी आमदार श्री. दिगंबरराव पाटील, माजी आमदार श्री. अरविंद पाटील, माजी आमदार सौ. अंजली निंबाळकर, श्री. गोपाळराव देसाई, ॲड. आय. आर. घाडी, ॲड. एच. एन. देसाई, श्री. मुरलीधर पाटील, श्री. आबासाहेब दळवी, श्री. प्रकाश चव्हाण, श्री. दिलीप पवार, श्री. संजय कुबल, श्री. महेश गुरव आदींनी आवाहन केले आहे.
ಖಾನಾಪುರದಲ್ಲಿ ಮರಾಠಾ ಸಮಾಜದ ಜನಗಣತಿ ಮಾರ್ಗದರ್ಶನಕ್ಕಾಗಿ ಸಭೆ
ಖಾನಾಪುರ : ಸಕಲ ಮರಾಠಾ ಸಮಾಜ, ಖಾನಾಪುರ ತಾಲ್ಲೂಕು ವತಿಯಿಂದ ಮಂಗಳವಾರ, ದಿನಾಂಕ 16 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 11 ಗಂಟೆಗೆ ರಾಜಾ ಶಿವಛತ್ರಪತಿ ಸ್ಮಾರಕದಲ್ಲಿ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ.
ಶೀಘ್ರದಲ್ಲೇ ಕರ್ನಾಟಕ ರಾಜ್ಯದಲ್ಲಿ ನಡೆಯಲಿರುವ ಜನಗಣತಿಯ ಹಿನ್ನಲೆಯಲ್ಲಿ ಮರಾಠಾ ಸಮಾಜವು ತನ್ನ ದಾಖಲೆ ಯಾವ ವಿಧಾನದಲ್ಲಿ ಮಾಡಿಸಿಕೊಳ್ಳಬೇಕು, ಯಾವ ಖಾನೆಯ ಮುಂದೆ ಹೆಸರು ನೋಂದಣಿ ಮಾಡಿಸಬೇಕು ಎಂಬ ಕುರಿತು ಈ ಸಭೆಯಲ್ಲಿ ಮಾರ್ಗದರ್ಶನ ನೀಡಲಾಗುವುದು. ಅಲ್ಲದೇ ಖಾನಾಪುರ ನಗರ ಮತ್ತು ತಾಲ್ಲೂಕು ಪ್ರದೇಶದ ಮರಾಠಾ ಸಮಾಜದ ಬಂಧುಗಳ ನಡುವೆ ಜಾಗೃತಿ ಮೂಡಿಸಿ ಸರಿಯಾದ ದಾಖಲೆ ಖಚಿತಪಡಿಸಿಕೊಳ್ಳುವ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗುವುದು.
ಸಮಾಜದ ಯುವಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಕಾಲದ ಅವಶ್ಯಕತೆಯಾಗಿರುವುದರಿಂದ ಈ ಸಭೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಮರಾಠಾ ಸಮಾಜದ ಎಲ್ಲಾ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಆಹ್ವಾನಿಸಲಾಗಿದೆ.
ಈ ಸಭೆಗೆ ಸಕಲ ಮರಾಠಾ ಸಮಾಜ, ಖಾನಾಪುರ ತಾಲ್ಲೂಕು ವತಿಯಿಂದ ವಿಧಾನಸಭಾ ಸದಸ್ಯ ಶ್ರೀ. ವಿಠ್ಠಲ್ ರಾವ್ ಹಲಗೇಕರ, ಮಾಜಿ ಶಾಸಕರುರಾದ ಶ್ರೀ. ದಿಗಂಬರ್ ಪಾಟೀಲ, ಶ್ರೀ. ಅರವಿಂದ ಪಾಟೀಲ, ಶ್ರೀಮತಿ ಅಂಜಲಿ ನಿಂಬಾಳ್ಕರ್, ಶ್ರೀ. ಗೋಪಾಲರಾವ ದೇಶಾಯಿ, ಅಡ್ವೊ. ಐ. ಆರ್. ಘಾಡಿ, ಅಡ್ವೊ. ಎಚ್. ಎನ್. ದೇಶಾಯಿ, ಶ್ರೀ. ಮುರಳೀಧರ ಪಾಟೀಲ, ಶ್ರೀ. ಆಬಾಸಾಹೇಬ ದಳವಿ, ಶ್ರೀ. ಪ್ರಕಾಶ ಚವಾಣ, ಶ್ರೀ. ದಿಲೀಪ ಪವಾರ್, ಶ್ರೀ. ಸಂಜಯ ಕುಬಲ್, ಶ್ರೀ. ಮಹೇಶ್ ಗುರುವ್ ಮತ್ತಿತರರು ಆಹ್ವಾನ ಮಾಡಿದ್ದಾರೆ.

