
कर्नाटक-महाराष्ट्र मुख्यमंत्र्यांची बैठक बोलवावी – खासदार धैर्यशील माने यांची केंद्रीय गृहमंत्र्यांकडे मागणी
खानापूर – कर्नाटक-महाराष्ट्र सीमा प्रश्नावर तोडगा काढण्यासाठी दोन्ही राज्यांच्या मुख्यमंत्र्यांची बैठक तातडीने बोलवावी, अशी मागणी हातकणंगले (जि. कोल्हापूर)चे खासदार धैर्यशील माने यांनी केंद्रीय गृहमंत्री अमित शहा यांना पत्राद्वारे केली आहे.
महाराष्ट्र शासनाने माने यांची कर्नाटक-महाराष्ट्र सीमा प्रश्नी तज्ञ समितीच्या अध्यक्षपदी पुन्हा नियुक्ती केल्यानंतर त्यांनी हा विषय पुढे सरकवला आहे. पत्रात त्यांनी नमूद केले आहे की, बेळगावसह सीमाभागात सध्या कन्नड सक्तीचा दबाव वाढला आहे. तसेच, मराठी भाषिकांवर भाषिक अल्पसंख्यांक कायद्यानुसार अन्याय होत आहे. सीमा प्रश्न मागील 21 वर्षांपासून सर्वोच्च न्यायालयात प्रलंबित असला तरी सुनावणीच्या तारखा मिळत नसल्याने हा प्रश्न कोर्टाबाहेरच सोडवण्याची गरज असल्याचे माने यांनी स्पष्ट केले.
माने यांनी सुचवले की, आसाम-मेघालय सीमावाद ज्या पद्धतीने निकाली काढला, त्याच धर्तीवर कर्नाटक-महाराष्ट्र प्रश्नही सोडवता येईल. यासाठी केंद्रीय गृहमंत्र्यांनी मध्यस्थी करून दोन्ही राज्यांच्या मुख्यमंत्र्यांची बैठक घडवून आणावी.
गेल्या चार वर्षांपूर्वी दिल्ली येथे अमित शहा यांच्या उपस्थितीत मुख्यमंत्र्यांची बैठक झाल्यानंतर समन्वय मंत्र्यांची नियुक्ती करण्यात आली होती, मात्र त्यानंतर एकदाही बैठक झाली नाही. त्यामुळे पुन्हा एकदा बैठक घेणे आवश्यक असल्याचे माने यांनी अधोरेखित केले.
विशेष म्हणजे, 28 जुलै रोजी माने यांनी हे पत्र लिहिले असून, 11 ऑगस्ट रोजी बेळगाव मध्यवर्ती महाराष्ट्र एकीकरण समितीच्या मोर्चाला पोलिसांनी नकार दिल्यानंतर या पत्राला अधिक महत्त्व प्राप्त झाले आहे.
ಕರ್ನಾಟಕ–ಮಹಾರಾಷ್ಟ್ರ ಮುಖ್ಯಮಂತ್ರಿ ಸಭೆ ನಡೆಸಿ ಗಡಿ ಸಮಸ್ಯೆ ನ್ಯಾಯಲಯದ ಹೊರಗೆ ಪರಿಹರಿಸಲು ಒತ್ತಾಯ – ಸಂಸದ ಧೈರ್ಯಶೀಲ ಮಾನೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ
ಖಾನಾಪುರ – ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ತುರ್ತಾಗಿ ನಡೆಸುವಂತೆ ಹಾತಕಣಂಗಲೆ (ಜಿಲ್ಲಾ ಕೊಲ್ಹಾಪುರ) ಸಂಸದ ಧೈರ್ಯಶೀಲ ಮಾನೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಗಡಿ ಪ್ರಶ್ನೆಯ ತಜ್ಞ ಸಮಿತಿಯ ಅಧ್ಯಕ್ಷರಾಗಿ ಮಾನೆ ಅವರ ಪುನರ್ ನೇಮಕ ಮಾಡಿದ ಬಳಿಕ ಅವರು ಈ ವಿಷಯವನ್ನು ಮತ್ತೊಮ್ಮೆ ಗಂಭೀರವಾಗಿ ಪರಿಗಣಿಸಿ ತಮ್ಮ ಕಾರ್ಯ ಮುಂದಿರಿಸಿದ್ದಾರೆ. ತಮ್ಮ ಪತ್ರದಲ್ಲಿ ಅವರು, ಬೆಳಗಾವಿ ಸೇರಿದಂತೆ ಗಡಿ ಭಾಗದಲ್ಲಿ ಪ್ರಸ್ತುತ ಕನ್ನಡದ ಕಡ್ಡಾಯ ಹೆಚ್ಚಾಗಿದ್ದು, ಮರಾಠಿ ಭಾಷಿಕರ ಮೇಲೆ ಭಾಷಾ ಅಲ್ಪಸಂಖ್ಯಾತ ಕಾಯ್ದೆಯಡಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಗಡಿ ವಿವಾದವು ಕಳೆದ 21 ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿ ಬಾಕಿಯಿದ್ದರೂ, ವಿಚಾರಣೆಯ ದಿನಾಂಕವೇ ಸಿಗದ ಕಾರಣ ಈ ಪ್ರಶ್ನೆಯನ್ನು ನ್ಯಾಯಾಲಯದ ಹೊರಗೇ ಬಗೆಹರಿಸುವ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅವರು, ಅಸ್ಸಾಂ–ಮೆಘಾಲಯ ಗಡಿ ವಿವಾದವನ್ನು ಬಗೆಹರಿಸಿಧ ತರಹವೇ, ಅದೇ ಮಾದರಿಯಲ್ಲಿ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನೂ ಬಗೆಹರಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ಕೇಂದ್ರ ಗೃಹ ಸಚಿವರು ಮಧ್ಯಸ್ಥಿಕೆ ವಹಿಸಿ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ಅಮಿತ್ ಶಾ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ಬಳಿಕ ಸಂಯೋಜನಾ ಮಂತ್ರಿಗಳನ್ನು ನೇಮಕ ಮಾಡಲಾಗಿತ್ತು. ಆದರೆ ಅದಾದ ಬಳಿಕ ಒಂದೂ ಸಭೆ ನಡೆದಿಲ್ಲ. ಆದ್ದರಿಂದ ಮತ್ತೊಮ್ಮೆ ಸಭೆ ನಡೆಸುವುದು ಅಗತ್ಯವಾಗಿದೆ ಎಂದು ಮಾನೆ ತಿಳಿಸಿದ್ದಾರೆ.
ಗಮನಾರ್ಹವಾಗಿ, ಜುಲೈ 28ರಂದು ಅವರು ಈ ಪತ್ರ ಬರೆದಿದ್ದು, ಆಗಸ್ಟ್ 11ರಂದು ಬೆಳಗಾವಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ ಬಳಿಕ ಈ ಪತ್ರದ ಮಹತ್ವ ಹೆಚ್ಚಾಗಿದೆ.
