साहित्यविश्वात शोककळा : प्रसिद्ध कानडी लेखक एस.एल. भैरप्पा यांचे निधन
बेळगाव/बंगळूर : कन्नड साहित्यातील अत्यंत लोकप्रिय, वाचकप्रिय व विचारप्रवर्तक लेखक डॉ. एस.एल. भैरप्पा यांचे निधन झाले आहे. त्यांच्या निधनाने संपूर्ण साहित्यविश्वावर शोककळा पसरली आहे.
भैरप्पा यांचा जन्म 20 जुलै 1934 रोजी कर्नाटकातील हासन जिल्ह्यातील सांतेशिवारा या गावी झाला. बालपणापासूनच वाचन आणि लेखनाची आवड असलेल्या भैरप्पांनी 1958 साली कादंबरी लेखनाला सुरुवात केली. 1962 मध्ये त्यांची पहिली कादंबरी ‘वंशवृक्ष’ प्रसिद्ध झाली आणि त्यांच्या साहित्य प्रवासाची प्रभावी सुरुवात झाली.

गेल्या पाच दशकांहून अधिक काळ त्यांनी अखंड लेखन केले. सखोल अभ्यास, संशोधन व समाजाच्या मनोभूमीचा अचूक वेध घेणारे वास्तववादी लेखन ही त्यांची खास शैली मानली जाते. त्यांच्या २२ गंभीर कादंबऱ्या आजवर प्रकाशित झाल्या असून, त्या सर्वाधिक विक्री झालेल्या साहित्यकृतींपैकी मानल्या जातात.
विशेष म्हणजे त्यांच्या ‘आवरण’ या कादंबरीने वाचकप्रियतेचे विक्रम मोडले. या कादंबरीच्या अवघ्या चार वर्षांत तब्बल ३४ आवृत्त्या निघाल्या – जे भारतीय कादंबरीविश्वात दुर्मिळ मानले जाते.
1987 मध्ये ‘वंशवृक्ष’ या कादंबरीचा मराठी अनुवाद प्रसिद्ध झाला. त्यानंतर मराठी वाचकवर्गातही त्यांचे साहित्य लोकप्रिय झाले. मराठीबरोबरच त्यांच्या कादंबऱ्यांचे हिंदी, संस्कृत, इंग्रजी तसेच इतर अनेक भारतीय भाषांमध्ये अनुवाद झाले आहेत. त्यामुळे त्यांची साहित्यकृती संपूर्ण भारतभर पोहोचली.
साहित्य विश्वात त्यांच्या लेखणीतून समाजशास्त्र, तत्त्वज्ञान, मानवी नातेसंबंध, इतिहास आणि सांस्कृतिक मूल्यांचा सखोल अभ्यास झळकतो. भैरप्पा यांच्या निधनाने भारतीय साहित्यविश्वाने एक प्रगल्भ, संशोधक आणि दूरदर्शी लेखक गमावला आहे.
ಸಾಹಿತ್ಯ ಲೋಕದಲ್ಲಿ ಶೋಕ ಕವಿದ ವಾತಾವರಣ : ಖ್ಯಾತ ಕನ್ನಡ ಸಾಹಿತ್ಯಿಕ ಡಾ. ಎಸ್.ಎಲ್. ಭೈರಪ್ಪ ಅವರ ವಿಧಿವಶ.
ಬೆಳಗಾವಿ/ಬೆಂಗಳೂರು : ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ಜನಪ್ರಿಯ, ಚಿಂತಕ ಹಾಗೂ ವಾಚಕರ ಹೃದಯ ಗೆದ್ದಿರುವ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಅಗಲಿದ್ದಾರೆ. ಅವರ ನಿಧನದಿಂದ ಸಮಗ್ರ ಸಾಹಿತ್ಯ ಲೋಕದಲ್ಲಿ ಶೋಕ ಕವಿದ ವಾತಾವರಣ ನಿರ್ಮಾಣವಾಗಿದೆ.
ಭೈರಪ್ಪ ಅವರು 1934ರ ಜುಲೈ 20ರಂದು ಹಾಸನ ಜಿಲ್ಲೆಯ ಸಂತೇಶಿವರ ಎಂಬ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಓದು-ಬರಹದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು 1958ರಲ್ಲಿ ಕಾದಂಬರಿ ಬರೆಯಲು ಪ್ರಾರಂಭಿಸಿದರು. 1962ರಲ್ಲಿ ಪ್ರಕಟವಾದ “ವಂಶವೃಕ್ಷ” ಅವರ ಮೊದಲ ಕಾದಂಬರಿಯಾಗಿತ್ತು ಮತ್ತು ಅಲ್ಲಿಂದಲೇ ಅವರ ಸಾಹಿತ್ಯ ಪ್ರಯಾಣಕ್ಕೆ ಶಕ್ತಿಶಾಲಿಯಾಗಿ ಆರಂಭವಾಯಿತು.
ಐದು ದಶಕಗಳಿಗೂ ಹೆಚ್ಚು ಕಾಲ ಅವರು ನಿರಂತರವಾಗಿ ಸಾಹಿತ್ಯ ಸೇವೆ ಸಲ್ಲಿಸಿದರು. ಆಳವಾದ ಅಧ್ಯಯನ, ಸಂಶೋಧನೆ ಮತ್ತು ಸಮಾಜದ ಮನೋಭಾವದ ಸೂಕ್ಷ್ಮ ಚಿತ್ರಣ ನೀಡುವ ವಾಸ್ತವಶೈಲಿಯೇ ಅವರ ಬರಹದ ವೈಶಿಷ್ಟ್ಯ. ಇತ್ತಿಚೆಗೆ ಪ್ರಕಟವಾಗಿರುವ ಅವರ 22 ಕಾದಂಬರಿಗಳು ಅತಿ ಹೆಚ್ಚು ಮಾರಾಟವಾದ ಸಾಹಿತ್ಯಕೃತಿಗಳಲ್ಲಿ ಸ್ಥಾನ ಪಡೆದಿವೆ.
ಅವರ ಪ್ರಸಿದ್ಧ ಕಾದಂಬರಿ “ಆವರಣ” ಅಪಾರ ಜನಪ್ರಿಯತೆ ಗಳಿಸಿತು. ಈ ಕಾದಂಬರಿಯು ಕೇವಲ ನಾಲ್ಕು ವರ್ಷಗಳಲ್ಲಿ 34 ಮುದ್ರಣಗಳನ್ನು ಕಂಡಿದ್ದು, ಭಾರತೀಯ ಕಾದಂಬರಿಗಳ ಇತಿಹಾಸದಲ್ಲಿ ಅಪರೂಪವಾಗಿದೆ.
1987ರಲ್ಲಿ “ವಂಶವೃಕ್ಷ” ಕಾದಂಬರಿಯು ಮೊದಲ ಬಾರಿಗೆ ಮರಾಠಿ ಭಾಷೆಗೆ ಅನುವಾದಗೊಂಡಿತು. ನಂತರ ಮರಾಠಿ ಓದುಗರಲ್ಲಿಯೂ ಅವರು ಅಷ್ಟೇ ಜನಪ್ರಿಯರಾದರು. ಕನ್ನಡದ ಜೊತೆಗೆ ಅವರ ಕಾದಂಬರಿಗಳು ಹಿಂದಿ, ಸಂಸ್ಕೃತ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡು ದೇಶದಾದ್ಯಂತ ಪಸರಿಸಿವೆ.
ಸಮಾಜಶಾಸ್ತ್ರ, ತತ್ತ್ವಶಾಸ್ತ್ರ, ಮಾನವ ಸಂಬಂಧಗಳು, ಇತಿಹಾಸ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಆಳವಾದ ಅಧ್ಯಯನವು ಅವರ ಪ್ರತಿಯೊಂದು ಸಾಹಿತ್ಯ ಕೃತಿಯಲ್ಲೂ ಪ್ರತಿಬಿಂಬಿತವಾಗಿದೆ. ಭೈರಪ್ಪ ಅವರ ನಿಧನದಿಂದ ಭಾರತೀಯ ಸಾಹಿತ್ಯ ಲೋಕವು ಒಬ್ಬ ಪ್ರೌಢ, ಸಂಶೋಧಕ ಹಾಗೂ ದೂರದೃಷ್ಟಿಯ ಲೇಖಕನನ್ನು ಕಳೆದುಕೊಂಡಿದೆ. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ನಡೆಯಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ.

