बैलूर–बेळगाव रस्त्यावरील अतिक्रमण हटवा ; युवा वर्गाचा इशारा – PWD व ग्रामपंचायत झोपेत आहे का?
बैलूर (ता. खानापूर) : जांबोटी परिसरातील बैलूर–बेळगाव रस्त्यावर एका शेतीमालकाने गटारीवर अतिक्रमण करून इमारत उभी केल्याचा प्रकार उघडकीस आला आहे. ग्रामपंचायत तसेच सार्वजनिक बांधकाम खात्याच्या (PWD) अधिकाऱ्यांना याबाबत पूर्ण माहिती असतानाही सर्वांनी मौन बाळगल्याचा आरोप स्थानिक युवकांनी केला आहे.
बैलूर ग्रामपंचायत व सार्वजनिक बांधकाम खात्याने तत्काळ कारवाई न केल्यास आंदोलनात्मक पवित्रा घेण्याचा इशारा सामाजिक कार्यकर्ते व बैलूर कृषी पत्तीन सोसायटीचे संचालक दामोदर नाकाडी यांनी गावातील युवक संघ व युवा वर्गाच्या वतीने दिला आहे.
अतिक्रमणामुळे भविष्यात वाहतुकीला धोका.
मिळालेल्या माहितीनुसार बेळगाव–बैलूर मार्गावर, बैलूर गावाच्या अलीकडे सुमारे एक किलोमीटर अंतरावर संबंधित शेतीमालकाने रस्त्याच्या गटारीवरच फार्महाऊस बांधले आहे.
यामुळे भविष्यात या मार्गावरील वाहतुकीस गंभीर अडथळा होण्याची शक्यता आहे. त्यासाठी, बेकायदेशीर बांधकाम त्वरित हटवावे, अशी मागणी बैलूर गावातील युवक संघटना, युवा वर्ग तसेच नागरिकांनी केली आहे.
तत्काळ कारवाईचा इशारा..
गावकऱ्यांनी स्पष्ट केले आहे की,
PWD खाते व ग्रामपंचायत अधिकाऱ्यांनी प्रत्यक्ष जागेवर येऊन, प्रत्यक्ष पाहणी करून, गटारीवर झालेले हे अनधिकृत बांधकाम तात्काळ हटवावे, अन्यथा तीव्र आंदोलन छेडले जाईल. असा इशारा सामाजिक कार्यकर्ते दामोदर नाकाडी व बैलूर येथील युवा वर्गाने दिला आहे.
ಬೈಲೂರು–ಬೆಳಗಾವಿ ರಸ್ತೆಯ ಮೇಲಿನ ಅತಿಕ್ರಮಣ ಕಟ್ಟಡ ತೆರವುಗೊಳಿಸಿ; ಯುವ ವರ್ಗದ ಎಚ್ಚರಿಕೆ – PWD ಮತ್ತು ಗ್ರಾಮಪಂಚಾಯತ್ ನಿರ್ಲಕ್ಷ್ಯವೇ?
ಬೈಲೂರು (ತಾ. ಖಾನಾಪುರ) : ಜಾಂಬೋಟಿ ಪ್ರದೇಶದ ಬೈಲೂರು–ಬೆಳಗಾವಿ ಮಾರ್ಗದಲ್ಲಿ ರೈತನೊಬ್ಬ ರಸ್ತೆ ಬದಿಯ ಗಟಾರಿನ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಘಟನೆ ಬಯಲಾಗಿದೆ. ಈ ಬಗ್ಗೆ ಗ್ರಾಮಪಂಚಾಯತ್ ಹಾಗೂ ಸಾರ್ವಜನಿಕ ನಿರ್ಮಾಣ ಇಲಾಖೆಯ (PWD) ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದರೂ ಎಲ್ಲರೂ ಮೌನ ವಹಿಸಿದ್ದಾರೆಯೆಂಬ ಆರೋಪ ಸ್ಥಳೀಯ ಯುವಕರಿಂದ ಕೇಳಿಬಂದಿದೆ. ಬೈಲೂರು ಗ್ರಾಮಪಂಚಾಯತ್ ಮತ್ತು ಸಾರ್ವಜನಿಕ ನಿರ್ಮಾಣ ಇಲಾಖೆಯವರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಆಂದೋಲನಾತ್ಮಕ ಹೋರಾಟಕ್ಕೆ ಇಳಿಯುವ ಎಚ್ಚರಿಕೆಯನ್ನು ಸಮಾಜ ಸೇವಕರು ಹಾಗೂ ಬೈಲೂರು ಕೃಷಿ ಪತ್ತೀನಿ ಸೋಸೈಟಿಯ ನಿರ್ದೇಶಕ ದಾಮೋದರ ನಾಕಾಡಿ ಅವರು ಗ್ರಾಮ ಯುವಕರ ಪರವಾಗಿ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ನಿರ್ಮಾಣದಿಂದ ಭವಿಷ್ಯದಲ್ಲಿ ಸಂಚಾರಕ್ಕೆ ಅಪಾಯ
ಮಾಹಿತಿಯ ಪ್ರಕಾರ ಬೆಳಗಾವಿ–ಬೈಲೂರು ಮಾರ್ಗದಲ್ಲಿ, ಬೈಲೂರು ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಸಂಬಂಧಿಸಿದ ಕೃಷಿ ಮಾಲೀಕರು ರಸ್ತೆಯ ಗಟಾರಿನ ಮೇಲೆಯೇ ಫಾರ್ಮ್ಹೌಸ್ ನಿರ್ಮಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಈ ಮಾರ್ಗದ ಸಂಚಾರಕ್ಕೆ ಗಂಭೀರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಆದ್ದರಿಂದ ಈ ಅಕ್ರಮ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಬೈಲೂರು ಗ್ರಾಮದ ಯುವ ಸಂಘಟನೆ, ಯುವ ವರ್ಗ ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.
ತಕ್ಷಣ ಕ್ರಮಕ್ಕೆ ಎಚ್ಚರಿಕೆ
ಗ್ರಾಮಸ್ಥರು ಸ್ಪಷ್ಟಪಡಿಸಿರುವುದೇನಂದರೆ PWD ಹಾಗೂ ಗ್ರಾಮಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಂದು, ಖುದ್ದು ಪರಿಶೀಲನೆ ನಡೆಸಿ, ಗಟಾರಿನ ಮೇಲೆ ನಿರ್ಮಾಣವಾಗಿರುವ ಈ ಅನಧಿಕೃತ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ತೀವ್ರ ಆಂದೋಲನ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಸಮಾಜ ಸೇವಕ ದಾಮೋದರ ನಾಕಾಡಿ ಹಾಗೂ ಬೈಲೂರು ಯುವ ವರ್ಗ ನೀಡಿದೆ.


