खानापुरात 15 रोजी रेल्वे स्थानक विकास कामांचे भूमिपूजन, केंद्रीय मंत्री व्ही. सोमन्ना व खासदार विश्वेश्वर हेगडे कागेरी यांच्या हस्ते.
खानापूर : खानापूर रेल्वे स्थानकाचा विकास करण्यासाठी तब्बल तीन कोटी रुपयांचा निधी मंजूर झाला असून, येत्या सोमवार, 15 सप्टेंबर रोजी सायंकाळी 4 वाजता केंद्रीय रेल्वे राज्यमंत्री व्ही. सोमन्ना व खासदार विश्वेश्वर हेगडे कागेरी यांच्या उपस्थितीत विविध विकासकामांचे भूमिपूजन होणार आहे. यावेळी हुबळी–दादर रेल्वेला हिरवा कंदील दाखवून थांब्याचा शुभारंभही करण्यात येणार आहे.
या कार्यक्रमाला तालुक्यातील नागरिक व पदाधिकारी मोठ्या संख्येने उपस्थित राहावेत, असे आवाहन आमदार विठ्ठल हलगेकर व जिल्हा भाजप उपाध्यक्ष प्रमोद कोचेरी यांनी शुक्रवारी खानापूर येथे घेतलेल्या पत्रकार परिषदेत केले.
पत्रकार परिषदेत भाजपाचे जनरल सेक्रेटरी मल्लाप्पा मारीहाळ यांनी प्रास्ताविक व स्वागत केले. यावेळी आमदार हलगेकर म्हणाले की, मंजूर निधीतून स्थानकावरील प्रतिक्षालयाचा विस्तार, स्वच्छतागृहे, प्रवासी शेड उभारणी तसेच परिसराचे सौंदर्यीकरण करण्यात येणार आहे. खासदार विश्वेश्वर हेगडे कागेरी हे त्याच दिवशी हल्याळ येथील कार्यक्रम आटोपून खानापूरातील रवळनाथ मंदिरातील पारायण सोहळ्यात सहभागी होऊन त्यानंतर भूमिपूजन कार्यक्रमास उपस्थित राहणार असल्याचे त्यांनी सांगितले.
पत्रकार परिषदेत तालुका अध्यक्ष बसवराज सानिकोप, जनरल सेक्रेटरी गुंडू तोपिनकट्टी, संजय कुबल, चेतन मनेरीकर, बाबुराव देसाई, श्रीकांत इटगी, प्रशांत लक्केबैलकर, मोहन पाटील, हणमंत पाटील, शीतल बाबरर्डे, सुंदर कुलकर्णी यांच्यासह भाजप नेते उपस्थित होते.
वारकरी संप्रदायासाठी मागण्या..
खानापूर तालुक्यात वारकरी संप्रदायाचे प्रमाण मोठे असल्याने पंढरपूरला जाणाऱ्या भाविकांच्या सोयीसाठी वास्को–पंढरपूर पॅसेंजर सेवा कायमस्वरूपी उपलब्ध करून द्यावी, तसेच बेळगाव–बंगळूर माजी खासदार अंगडी रेल्वेलाही खानापूर येथे थांबा द्यावा, यासाठी केंद्रीय मंत्र्यांना निवेदन देण्यात येणार असल्याचे भाजप नेत्यांनी स्पष्ट केले.
ಕೇಂದ್ರ ಸಚಿವ ವಿ. ಸೋಮನ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಖಾನಾಪುರ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮ ಇದೆ 15 ರಂದು.
ಖಾನಾಪುರ : ಖಾನಾಪುರ ರೈಲು ನಿಲ್ದಾಣದ ಅಭಿವೃದ್ಧಿಗಾಗಿ ಮೂರು ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಇದೆ ಸೋಮವಾರ (ಸೆ. 15) ರಂದು ಸಂಜೆ 4 ಗಂಟೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮನಾ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಾನಿಧ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಲಿದೆ. ಈ ವೇಳೆ ಹುಬ್ಬಳ್ಳಿ–ದಾದರ್ ರೈಲಿಗೆ ಹಸಿರು ನಿಶಾನೆ ತೋರಿಸಿ ಖಾನಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಚಾಲನೆ ನೀಡಲಾಗುವುದು.
ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ನಾಗರಿಕರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಕೋರಿಕೆಯನ್ನು ಜನ ಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೊದ್ ಕೊಚೇರಿ ಅವರು ಖಾನಾಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಪ್ಪ ಮಾರಿಹಾಳ ಅವರು ಪ್ರಾಸ್ತಾವಿಕ ಹಾಗೂ ಸ್ವಾಗತ ಮಾಡಿದರು. ಶಾಸಕರಾದ ಹಲಗೇಕರ ಮಾತನಾಡಿ, ಮಂಜೂರಾದ ನಿಧಿಯಿಂದ ನಿಲ್ದಾಣದ ತಂಗುದಾಣ ವಿಸ್ತರಣೆ, ಶೌಚಾಲಯಗಳ ನಿರ್ಮಾಣ, ಪ್ರಯಾಣಿಕರ ಶೆಡ್ ಹಾಗೂ ಪರಿಸರದ ಸೌಂದರ್ಯವರ್ಧನೆ ಕೈಗೊಳ್ಳಲಾಗುವುದು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅದೇ ದಿನ ಹಳಿಯಾಳ ಕಾರ್ಯಕ್ರಮ ಮುಗಿಸಿಕೊಂಡು, ಖಾನಾಪುರದ ರವಳನಾಥ ದೇವಸ್ಥಾನದ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಭೂಮಿಪೂಜೆ ಸಮಾರಂಭದಲ್ಲಿ ಹಾಜರಾಗಲಿದ್ದಾರೆ ಎಂದೂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ, ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಸಂಜಯ ಕುಬಲ, ಚೇತನ್ ಮನೇರಿಕರ, ಬಾಬುರಾವ ದೇಸಾಯಿ, ಶ್ರೀಕಾಂತ ಇಟಗಿ, ಪ್ರಶಾಂತ ಲಕ್ಕೇಬೈಲಕರ, ಮೋಹನ ಪಾಟೀಲ, ಹನುಮಂತ ಪಾಟೀಲ, ಶೀತಲ್ ಬಬರಡೆ, ಸುಂದರ ಕುಲಕರ್ಣಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ವಾರ್ಕರಿ ಸಂಪ್ರದಾಯಕ್ಕಾಗಿ ಬೇಡಿಕೆಗಳು….
ಖಾನಾಪುರ ತಾಲೂಕಿನಲ್ಲಿ ವಾರ್ಕರಿ ಸಂಪ್ರದಾಯದ ಭಕ್ತರ ಸಂಖ್ಯೆ ಹೆಚ್ಚು ಇರುವುದರಿಂದ ಪಂಡರಪುರಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ವಾಸ್ಕೋ–ಪಂಡರಪುರ ಪ್ಯಾಸೆಂಜರ್ ಸೇವೆಯನ್ನು ಶಾಶ್ವತವಾಗಿ ಲಭ್ಯವಾಗುವಂತೆ ಮಾಡಬೇಕು ಹಾಗೂ ಬೆಳಗಾವಿ–ಬೆಂಗಳೂರು ಮಾಜಿ ಸಂಸದ ಅಂಗಡಿ ರೈಲಿಗೂ ಖಾನಾಪುರದಲ್ಲಿ ನಿಲುಗಡೆ ಸೌಲಭ್ಯ ನೀಡಬೇಕು ಎಂಬ ಬೇಡಿಕೆಗಳನ್ನು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದರು.

