खानापूरमध्ये विद्यार्थ्यांसाठी मार्गदर्शन व गुणवंतांचा सत्कार सोहळा 10 ऑगस्ट रोजी लोकमान्य भवनात भव्य कार्यक्रमाचे आयोजन
खानापूर (ता. 10 ऑगस्ट 2025): येत्या रविवार, दिनांक १० ऑगस्ट 2025 रोजी सकाळी १० वाजता, लोकमान्य भवन, खानापूर येथे दहावी ते पंधरावीपर्यंतच्या विद्यार्थ्यांसाठी विशेष मार्गदर्शन कार्यक्रमाचे आयोजन करण्यात आले आहे.

या कार्यक्रमासाठी पुण्याहून खास निमंत्रित वक्ते श्री. गीतन गिंडे मार्गदर्शनासाठी उपस्थित राहणार असून विद्यार्थ्यांनी या सुवर्णसंधीचा लाभ घ्यावा, असे आवाहन आयोजकांनी केले आहे.
कार्यक्रमाच्या निमित्ताने खानापूर तालुक्यातील 2024 व 2025 च्या परीक्षांमध्ये उच्च टक्केवारी मिळवलेल्या गुणवंत विद्यार्थ्यांचा सन्मान करण्यात येणार आहे. त्याचप्रमाणे, क्रीडा क्षेत्रात उल्लेखनीय कामगिरी करणाऱ्या टॉप खेळाडूंना आणि विश्वभारती कला क्रीडा संघटनेच्या कार्यात विशेष योगदान देणाऱ्या व्यक्तींनाही मानसन्मान प्रदान केला जाणार आहे.
कार्यक्रमास प्रमुख पाहुणे, वक्ते, शिक्षकवृंद तसेच पत्रकार मंडळी उपस्थित राहणार असून हा कार्यक्रम अधिक संस्मरणीय बनवणार आहेत. सर्व विद्यार्थ्यांनी, पालकांनी आणि नागरिकांनी वेळेवर उपस्थित राहून कार्यक्रमाची शोभा वाढवावी, असे आवाहन आयोजकांकडून करण्यात आले आहे.
ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಗುಣವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ – ಆಗಸ್ಟ್ 10 ರಂದು ಲೋಕಮಾನ್ಯ ಭವನದಲ್ಲಿ ಭವ್ಯ ಕಾರ್ಯಕ್ರಮದ ಆಯೋಜನೆ
ಖಾನಾಪುರ (ತಾ. 10 ಆಗಸ್ಟ್ 2025): ಭಾನುವಾರ, ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಗೆ ಖಾನಾಪುರದ ಲೋಕಮಾನ್ಯ ಭವನದಲ್ಲಿ 10ನೇ ತರಗತಿಯಿಂದ 15ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತ ವ್ಯಕ್ತಿಯಾಗಿ ಪುಣೆಯಿಂದ ಆಗಮಿಸುವ ಶ್ರೀ ಗೀತನ್ ಗಿಂಡೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಅಪೂರ್ವ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಆಯೋಜಕರು ಕೋರಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಖಾನಾಪುರ ತಾಲೂಕಿನಲ್ಲಿ 2024 ಮತ್ತು 2025 ಸಾಲಿನ ಪರೀಕ್ಷೆಗಳಲ್ಲಿ ಹೆಚ್ಚಿನ ಶೇಕಡಾವಾರು ಅಂಕ ಗಳಿಸಿದ ಗುಣವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಆಯೋಜನೆ ಮಾಡಲಾಗುವುದು. ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಉಲ್ಲೇಖನೀಯ ಸಾಧನೆ ಮಾಡಿದ ಆಟಗಾರರು ಹಾಗೂ ವಿಶ್ವಭಾರತೀ ಕಲಾ ಕ್ರೀಡಾ ಸಂಸ್ಥೆಯ ಕಾರ್ಯದಲ್ಲಿ ವಿಶೇಷ ಕೊಡುಗೆ ನೀಡಿದ ವ್ಯಕ್ತಿಗಳಿಗೆ ವಿಶೇಷ ಸನ್ಮಾನ ನೀಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳು, ಉಪನ್ಯಾಸಕರು, ಶಿಕ್ಷಕರ ವರ್ಗ ಹಾಗೂ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರು ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ಆಯೋಜಕರಿಂದ ಮನವಿ ಮಾಡಲಾಗಿದೆ.

