
खासदार ई. तुकाराम यांच्या अपात्रतेसाठी मुख्य निवडणूक आयुक्तांकडे याचिका : बी. वाय. विजयेंद्र
बेंगळुरू: बळ्ळारीचे खासदार ई. तुकाराम यांनी सर्व कायदे झुगारून बेकायदेशीरपणे निवडणूक जिंकली आहे. भाजपचे प्रदेशाध्यक्ष बी.वाय. विजयेंद्र म्हणाले की, आम्ही मुख्य निवडणूक आयुक्तांना अपात्र ठरवण्याची विनंती केली असल्याचे विजयेंद्र म्हणाले. आज दिल्लीत प्रसारमाध्यमांच्या प्रतिनिधींशी बोलताना ते म्हणाले, मी, विधानसभेतील विरोधी पक्षनेते आर. अशोक, विधान परिषदेतील विरोधी पक्षनेते चलवादी नारायणस्वामी, प्रदेश सरचिटणीस पी. राजीव यांनी आज मुख्य निवडणूक आयुक्तांची भेट घेतली. त्यांनी स्पष्ट केले की त्यांनी ई. तुकाराम यांच्या अपात्रतेबाबत याचिका सादर केली आहे.
वाल्मिकी विकास महामंडळाबाबत अनेकदा चर्चा झाली आहे. या महामंडळ घोटाळ्याविरोधात भाजपने जोरदार प्रचार केला आहे. त्यानंतर गेल्या महिन्यात तपासाच्या आधारे ई.डी. कडून याबाबतची प्रेस नोटही प्रसिद्ध करण्यात आली आहे. ते म्हणाले की, काँग्रेस सरकारने वाल्मिकी विकास महामंडळात 187 कोटींची लूट केली आहे.
या संदर्भात नागेंद्र यांनी मंत्रिपदाचा राजीनामाही दिला होता. अनुसूचित जमातींच्या विकासासाठी राखून ठेवलेले 187 कोटी रुपये काँग्रेस सरकारने लुटले आणि त्या पैशांचा गैरवापर केला. हा पैसा बेल्लारी आणि इतर लोकसभा मतदारसंघांसाठी वापरण्यात आल्याचे समोर आले आहे. याकडे त्यांनी लक्ष वेधले.
सांदूर, चन्नापट्टणम, शिग्गावी पोटनिवडणूक होत आहे. आदर्श आचारसंहिता लागू करण्यात आली आहे. असे असतानाही राज्य सरकार बेकायदेशीरपणे आजच्या जाहिराती देऊन सर्व आदर्श आचारसंहितेचे उल्लंघन करत असल्याचा आक्षेप त्यांनी घेतला. याप्रकरणी आम्ही राज्य सरकारवर कारवाई करण्याची मागणी केली आहे, असे ते म्हणाले.
राहुल गांधी, सिद्धरामय्या, डीके शिवकुमार हे संविधानाविषयी दीर्घ भाषण करणार आहेत. ते म्हणाले की, पोटनिवडणुकीत सांदूरमधील अनियमितता आणि कायद्याची पायमल्ली पाहिली तर लक्षात येईल की, काँग्रेस पक्ष संविधानाला किती मान देतो.
EDU ने बेल्लारी लोकसभा मतदारसंघातील बेकायदेशीरतेची माहिती दिली आहे. आमच्याकडे मिळालेल्या माहितीनुसार, बेल्लारी, रायचूर आणि कोप्पलमध्ये वाल्मिकी महामंडळाच्या पैशांचा गैरवापर झाला आहे. त्या मतदारसंघातील विजयी उमेदवारांना अपात्र ठरवण्याबाबतच्या अपीलकडे लक्ष देणार असल्याचे त्यांनी या प्रश्नाला उत्तर दिले.
येत्या काही दिवसांत इतर क्षेत्रेही उघड होतील. बेल्लारी लोकसभा मतदारसंघाबाबत आज आम्ही मुख्य निवडणूक आयुक्तांची भेट घेतली. त्यांनी तुकारामांना अपात्र ठरवण्याची विनंती केली आहे, असे दुसऱ्या प्रश्नाचे उत्तर येताना त्यांनी सांगितले.
चन्नापट्टणममधील उमेदवाराबाबत विचारलेल्या प्रश्नाला उत्तर देताना ते म्हणाले की, योगेश्वर यांनी स्वत: चन्नापट्टणममध्ये निवडणूक लढवावी; आपल्याला संधी मिळेल, अशी आशा त्यांनी व्यक्त केली. यावेळी विधानसभेतील विरोधी पक्षनेते आर.अशोक, विधान परिषदेतील विरोधी पक्षनेते चलवादी नारायणस्वामी, प्रदेश सरचिटणीस पी.राजीव उपस्थित होते.
ಸಂಸದ ಇ.ತುಕಾರಾಂ ಅನರ್ಹತೆಗೆ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಬಳ್ಳಾರಿಯ ಸಂಸದ ಇ.ತುಕಾರಾಂ ಅವರು ಎಲ್ಲ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇವತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಅವರಿಗೆ ಇ.ತುಕಾರಾಂ ಅನರ್ಹತೆ ಸಂಬಂಧ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಬಿಜೆಪಿ, ಈ ನಿಗಮದ ಹಗರಣವನ್ನು ಮುಂದಿಟ್ಟು ಹೋರಾಟಗಳನ್ನು ನಡೆಸಿದೆ. ನಂತರ ತನಿಖೆ ಆಧಾರದಲ್ಲಿ ಕಳೆದ ತಿಂಗಳು ಇ.ಡಿ. ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾಗಿ ತಿಳಿಸಿದ್ದಾರೆ ಎಂದರು.
ಈ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವು ಆ ಹಣವನ್ನು ದುರ್ಬಳಕೆ ಮಾಡಿಕೊಂಡಿತ್ತು. ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಕ್ಕೆ ಆ ಹಣವನ್ನು ಬಳಸಿದ್ದು ಬೆಳಕಿಗೆ ಬಂದಿದೆ ಎಂದು ಗಮನ ಸೆಳೆದರು.
ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ಉಪ ಚುನಾವಣೆ ನಡೆಯುತ್ತಿದೆ. ಮಾದರಿ ನೀತಿಸಂಹಿತೆ ಅನುಷ್ಠಾನಗೊಂಡಿದೆ. ಇದರ ನಡುವೆಯೂ ರಾಜ್ಯ ಸರಕಾರವು ಅಕ್ರಮವಾಗಿ ಇವತ್ತು ಜಾಹೀರಾತುಗಳನ್ನು ನೀಡುವುದರ ಮೂಲಕ ಎಲ್ಲ ಮಾದರಿ ನೀತಿಸಂಹಿತೆಯನ್ನು ಗಾಳಿಗೆ ತೂರುತ್ತಿದೆ ಎಂದು ಆಕ್ಷೇಪಿಸಿದರು. ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಕ್ರಮ ಜರುಗಿಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಸಂಡೂರಿನಲ್ಲಿ ಆದ ಅಕ್ರಮಗಳು, ಉಪ ಚುನಾವಣೆ ಸಂದರ್ಭದಲ್ಲಿ ಕಾನೂನನ್ನು ಗಾಳಿಗೆ ತೂರುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಎಷ್ಟು ಗೌರವ ಕೊಡುತ್ತದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಇ.ಡಿ.ಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಕ್ರಮ ಕುರಿತು ತಿಳಿಸಿದೆ. ನಮಗಿರುವ ಮಾಹಿತಿ ಪ್ರಕಾರ ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲೂ ವಾಲ್ಮೀಕಿ ನಿಗಮದ ಅವ್ಯವಹಾರದ ಹಣ ದುರ್ಬಳಕೆ ಆಗಿದೆ ಎಂಬ ವಿಚಾರಗಳು ಗಮನಕ್ಕೆ ಬರುತ್ತಿವೆ. ಆ ಕ್ಷೇತ್ರಗಳಲ್ಲಿ ಗೆದ್ದವರ ಅನರ್ಹತೆ ಕುರಿತು ಮನವಿ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಮುಂದಿನ ದಿನಗಳಲ್ಲಿ ಇತರ ಕ್ಷೇತ್ರಗಳ ವಿಚಾರವೂ ಬಹಿರಂಗ ಆಗಲಿದೆ. ಇವತ್ತು ನಾವು ಬಳ್ಳಾರಿ ಲೋಕಸಭಾ ಕ್ಷೇತ್ರದ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ತುಕಾರಾಂ ಅವರನ್ನು ಅನರ್ಹಗೊಳಿಸಲು ಕೋರಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಚನ್ನಪಟ್ಟಣದಲ್ಲಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರೇ ಸ್ಪರ್ಧೆ ಮಾಡಬೇಕು; ಅವರಿಗೆ ಅವಕಾಶ ಸಿಗಬೇಕು ಎಂದು ಆಶಿಸುವುದಾಗಿ ಹೇಳಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇದ್ದರು.
