खानापूर तालुक्यात प्री-पेड मीटर योजनेची सुरुवात. तालुक्यातील पहिला प्री-पेड मीटर नवरात्र उत्सव मंडळाला.
खानापूर : खानापूर हेस्कॉम उपविभागात आजपासून प्री-पेड मीटर योजनेचा शुभारंभ करण्यात आला. तालुक्यातील पहिला प्री-पेड मीटर अर्बन बँक चौक येथे नवरात्रोत्सव साजरा करणाऱ्या श्री दुर्गादेवी नवरात्र उत्सव मंडळाला तात्पुरत्या वीज जोडणीसाठी बसविण्यात आला.
या उपक्रमाचा उद्देश वीजपुरवठा पारदर्शक आणि अखंडित ठेवण्याचा असून, मोबाईलप्रमाणे रिचार्ज पद्धतीने वीज वापरण्याची ही नवी सेवा नागरिकांना उपलब्ध होणार आहे. विजेचे बिल अगोदर भरावे लागणार असून, रिचार्ज संपल्यानंतर वीजपुरवठा आपोआप खंडित होणार आहे. परंतु रिचार्ज करताच विद्युत पुरवठा पुन्हा सुरू होणार आहे.
या प्रसंगी हेस्कॉमचे स्थानिक अधिकारी लक्ष्मी रंगनाथ (AE), ब्रेन धर्मदास (AAO), भरतेश नागनूर (AE), सिद्धू अंगडी (JE), दुर्गादेवी नवरात्र उत्सव मंडळाचे संस्थापक व माजी नगरसेवक दिनकर मरगाळे, कंत्राटदार रंजीत जाधव, राजू पारकर, अश्पाक तिगडी तसेच हेस्कॉमचे इतर कर्मचारी उपस्थित होते.
👉 प्री-पेड मीटर योजनेमुळे ग्राहकांना वीज वापराबाबत पारदर्शक माहिती मिळणार असून, वेळेत बिल भरण्याची सवय लागेल अशी अपेक्षा हेस्कॉमचे AEE जगदीश मोहिते यांनी व्यक्त केली आहे. तसेच रिचार्ज संपल्यास मोबाईल वरून रिचार्ज करता येणार आहे.
ಖಾನಾಪುರ ತಾಲೂಕಿನಲ್ಲಿ ವಿದ್ಯುತ್ ಪ್ರಿ–ಪೇಡ್ ಮೀಟರ್ ಯೋಜನೆಗೆ ಚಾಲನೆ ತಾಲೂಕಿನ ಮೊದಲ ವಿದ್ಯುತ್ ಪ್ರಿ–ಪೇಡ್ ಮೀಟರ್ ನವರಾತ್ರಿ ಉತ್ಸವ ಮಂಡಳಿಗೆ ಜೋಡಣೆ.
ಖಾನಾಪುರ : ಖಾನಾಪುರ ಹೇಸ್ಕಾಂ ಉಪವಿಭಾಗದಲ್ಲಿ ಇಂದು ಪ್ರಿ–ಪೇಡ್ ಮೀಟರ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ತಾಲ್ಲೂಕಿನಲ್ಲಿ ಮೊದಲ ಪ್ರಿ–ಪೇಡ್ ವಿದ್ಯುತ್ ಮೀಟರ್ ಖಾನಾಪುರ ಅರ್ಬನ್ ಬ್ಯಾಂಕ್ ಚೌಕದಲ್ಲಿರುವ ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಮಂಡಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಅಳವಡಿಸಲಾಯಿತು.
ಈ ಯೋಜನೆಯ ಉದ್ದೇಶ ವಿದ್ಯುತ್ ಸರಬರಾಜು ಪಾರದರ್ಶಕ ಹಾಗೂ ನಿರಂತರವಾಗಿಡುವುದು. ಮೊಬೈಲ್ ರೀಚಾರ್ಜ್ ಮಾದರಿಯಲ್ಲಿ ವಿದ್ಯುತ್ ಬಳಸುವ ಈ ಹೊಸ ಸೇವೆ ಇದೀಗ ನಾಗರಿಕರಿಗೆ ಲಭ್ಯವಾಗಲಿದೆ. ವಿದ್ಯುತ್ ಬಿಲ್ ಮೊದಲು ಪಾವತಿಸಬೇಕಾಗಿದ್ದು, ರೀಚಾರ್ಜ್ ಮುಗಿದ ಬಳಿಕ ವಿದ್ಯುತ್ ಪೂರೈಕೆ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳಲಿದೆ.
ಈ ಸಂದರ್ಭದಲ್ಲಿ ಹೇಶ್ಕಾಂನ ಸ್ಥಳೀಯ ಅಧಿಕಾರಿಗಳಾದ ಲಕ್ಷ್ಮಿ ರಂಗನಾಥ (AE), ಬ್ರೇನ್ ಧರ್ಮದಾಸ್ (AAO), ಭರತೇಶ್ ನಾಗನೂರ (AE), ಸಿದ್ದು ಅಂಗಡಿ (JE), ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಮಂಡಳದ ಸಂಸ್ಥಾಪಕ ಮತ್ತು ಮಾಜಿ ಕಾರ್ಪೊರೇಟ ರ್ದಿನಕರ ಮರಗಾಳೆ, ಕಾನ್ಟ್ರಾಕ್ಟರ್ ರಂಜಿತ್ ಜಾಧವ, ರಾಜು ಪಾರ್ಕರ್, ಅಶ್ಪಾಕ್ ತಿಗಡಿ ಹಾಗೂ ಹೆಸ್ಕಾಂ ಸಿಬ್ಬಂದಿಗಳು ಹಾಜರಿದ್ದರು.
👉 ಪ್ರಿ–ಪೇಡ್ ಮೀಟರ್ ಯೋಜನೆಯಿಂದ ಗ್ರಾಹಕರಿಗೆ ವಿದ್ಯುತ್ ಬಳಕೆಯ ಬಗ್ಗೆ ಪಾರದರ್ಶಕ ಮಾಹಿತಿ ದೊರೆಯಲಿದ್ದು, ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುವ ಅಭ್ಯಾಸ ಬೆಳೆಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಶ್ಕಾಂ AEE ಜಗದೀಶ ಮೊಹಿತೆ ಹೇಳಿದರು. ಜೊತೆಗೆ ರೀಚಾರ್ಜ್ ಮುಗಿದರೆ ಮೊಬೈಲ್ ಮೂಲಕವೇ ಮರುರೀಚಾರ್ಜ್ ಮಾಡುವ ವ್ಯವಸ್ಥೆಯಿದೆ ಎಂದು ಅವರು ತಿಳಿಸಿದರು.

