भाजप जिल्हा उपाध्यक्ष प्रमोद कोचेरी यांचा आज वाढदिवस; जनसामान्यांच्या प्रश्नांसाठी सतत कार्यरत असलेला नेता.
खानापूर : भारतीय जनता पार्टीचे बेळगाव जिल्हा उपाध्यक्ष प्रमोद कोचेरी यांचा आज शुक्रवार, दि. 2 जानेवारी 2026 रोजी वाढदिवस असून, या निमित्ताने भारतीय जनता पार्टीच्या वतीने सार्वजनिक बांधकाम विभागाच्या विश्रामगृहात सकाळी 11 वाजता वाढदिवस साजरा करण्यात येणार आहे.
सर्वसामान्य नागरिकांना सोबत घेऊन काम करणारा, जनतेच्या अडीअडचणींसाठी सदैव धावून जाणारा नेता अशी प्रमोद कोचेरी यांची संपूर्ण खानापूर तालुक्यात ओळख आहे. त्यांनी आपल्या राजकीय जीवनाची सुरुवात रामरथ यात्रेत सहभाग तसेच राष्ट्रीय स्वयंसेवक संघाचे एक सामान्य कार्यकर्ते म्हणून केली. सातत्यपूर्ण मेहनत, संघटन कौशल्य आणि लोकसंपर्काच्या बळावर त्यांनी खानापूर तालुका अध्यक्ष ते बेळगाव जिल्हा उपाध्यक्ष पदापर्यंत मजल मारली आहे.
विधान परिषदेचे माजी सदस्य महांतेश कवटगीमठ, माजी खासदार अनंत कुमार हेगडे, भाजपाचे माजी आमदार कै. प्रल्हाद रेमाणी तसेच विद्यमान आमदार विठ्ठल हलगेकरव विद्यमान खासदार विश्वेश्वर हेगडे-कागेरी यांच्या सहकार्याने त्यांनी खानापूर तालुक्यातील विविध विकासात्मक कामांसाठी निधी मंजूर करून घेण्यासाठी मोलाचे प्रयत्न केले आहेत.
त्यांच्या मूळ गावी कोडचवाड (ता. खानापूर) येथे उभारण्यात येत असलेले 110 के.व्ही. विद्युत उपकेंद्र अंतिम टप्प्यात असून, त्यांच्या अथक प्रयत्नातूनच हे महत्त्वाचे उपकेंद्र साकार होत आहे. या उपकेंद्रामुळे परिसरातील 40 पेक्षा अधिक गावांतील शेतकरी व ग्रामस्थांची वीज समस्या कायमस्वरूपी मार्गी लागणार आहे.
तसेच केंद्र सरकारच्या वतीने सुरू असलेल्या बेळगाव–गोवा राष्ट्रीय महामार्ग प्रकल्पात जमीन गेलेल्या शेतकऱ्यांना योग्य नुकसानभरपाई मिळावी, अपूर्ण असलेले सर्व्हिस रस्ते पूर्ण व्हावेत तसेच महामार्गावरील पुलांबाबतच्या अडचणी दूर व्हाव्यात यासाठी ते सातत्याने पाठपुरावा करत आहेत. या कामांसाठी विद्यमान खासदार विश्वेश्वर हेगडे-कागेरी यांच्या सहकार्याने या समस्या नक्कीच मार्गी लागतील, असा विश्वास नुकसानग्रस्त शेतकरी व नागरिक व्यक्त करत आहेत.
खानापूर तालुक्यातील दुर्गम भागात संपर्क व्यवस्था सक्षम व्हावी यासाठी त्यांनी माजी खासदार अनंत कुमार हेगडे व विद्यमान खासदार विश्वेश्वर हेगडे कागेरी यांच्या सहाय्याने अनेक ठिकाणी बीएसएनएल टॉवर उभारण्यासाठी पुढाकार घेतला आहे. नुकताच जांबोटी भागातील अतिदुर्गम चापोली गावात बीएसएनएल टॉवर उभारण्यात आला असून, त्यामुळे येथील नागरिकांना दळणवळण व संपर्क सुविधांचा मोठा लाभ झाला आहे.
याच भागातील चापोली, कापोली व इतर गावांतील रस्त्यांच्या डांबरीकरणासाठी वन खात्याच्या अडचणी निर्माण झाल्या होत्या. मात्र या अडचणींचा सखोल अभ्यास करून त्यांनी योग्य पद्धतीने प्रश्न हाताळल्याने येथे रस्त्यांचे डांबरीकरण शक्य झाले आणि नागरिकांचा दैनंदिन त्रास कमी झाला.
संपूर्ण खानापूर तालुक्याची भौगोलिक माहिती आणि प्रत्येक भागातील समस्यांची जाण असल्यामुळे ते आमदार विठ्ठल हलगेकर व खासदार विश्वेश्वर हेगडे-कागेरी यांच्या साह्याने नागरिकांच्या प्रश्नांचे निराकरण करण्यासाठी नेहमीच प्रयत्नशील असतात. राज्यस्तरावर व केंद्रस्तरावर असलेल्या चांगल्या ओळखीचा उपयोग करून तालुक्यात विविध योजना राबविण्यासाठी ते प्रामाणिकपणे कार्यरत आहेत.
राजकारणासोबतच सामाजिक, धार्मिक व अध्यात्मिक कार्यातही ते सक्रिय असून, खानापूर तालुक्यातील देव-देवस्थाने, निसर्गसंपन्न व प्रेक्षणीय स्थळे यांचा विकास करून खानापूर तालुका पर्यटन केंद्र म्हणून विकसित करण्याचा त्यांचा मानस आहे. यासाठीही ते आमदार व खासदारांच्या सहकार्याने प्रयत्न करणार आहेत. खानापुर तालुक्यातील जनता, त्यांच्याकडे सर्वसामान्यांचे नेतृत्व म्हणून पहात आहेत.
अशा या जनसामान्यांचा नेता म्हणून ओळख असलेल्या प्रमोद कोचेरी यांना “आपलं खानापूर” न्यूज पोर्टल व फेसबुक ग्रुपच्या वतीने त्यांच्या सामाजिक व राजकीय कार्यास शुभेच्छा. तसेच त्यांना त्यांच्या वाढदिवसाच्या ही हार्दिक हार्दिक शुभेच्छा!
ಜನಸಾಮಾನ್ಯರ ನಾಯಕ ಭಾಜಪ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ ಯವರ ಇಂದು ಜನ್ಮದಿನ; ಸಮಸ್ಯೆಗಳಿಗೆ ಸದಾ ಸ್ಪಂದಿಸುಲು ಮುಂಚೂಣಿಯಲ್ಲಿ ಕಾಣುವ ನಾಯಕರೆಂದೆ ಗುರುತಿಸಲ್ಪಟ್ಟವರ ನಾಯಕರೆ ಇವರು.
ಖಾನಾಪುರ : ಭಾರತೀಯ ಜನತಾ ಪಕ್ಷದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಮೋದ್ ಕೊಚೇರಿ ಯವರ ಇಂದು ಶುಕ್ರವಾರ, ದಿನಾಂಕ 2 ಜನವರಿ 2026 ರಂದು ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸಾರ್ವಜನಿಕ ನಿರ್ಮಾಣ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಬೆಳಿಗ್ಗೆ 11 ಗಂಟೆಗೆ ಜನ್ಮದಿನಾಚರಣೆ ಆಯೋಜಿಸಲಾಗಿದೆ.
ಸಾಮಾನ್ಯ ಜನರನ್ನು ಜೊತೆಗೂಡಿಸಿಕೊಂಡು ಕೆಲಸ ಮಾಡುವ, ಜನರ ಸಮಸ್ಯೆ–ಕಷ್ಟಗಳಿಗೆ ಸದಾ ಧಾವಿಸುವ ನಾಯಕ ಎಂಬ ಹೆಸರನ್ನು ಪ್ರಮೋದ್ ಕೊಚೇರಿ ಅವರು ಸಂಪೂರ್ಣ ಖಾನಾಪುರ ತಾಲ್ಲೂಕಿನಲ್ಲಿ ಗಳಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಜೀವನವನ್ನು ಅವರು ರಾಮರಥ ಯಾತ್ರೆಯಲ್ಲಿ ಭಾಗವಹಿಸುವುದರಿಂದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಆರಂಭಿಸಿದ್ದರು. ನಿರಂತರ ಶ್ರಮ, ಸಂಘಟನೆ ಸಾಮರ್ಥ್ಯ ಮತ್ತು ಜನಸಂಪರ್ಕದ ಬಲದಿಂದ ಅವರು ಖಾನಾಪುರ ತಾಲ್ಲೂಕು ಅಧ್ಯಕ್ಷ ಸ್ಥಾನದಿಂದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಹುದ್ದೆಯವರೆಗೆ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಭಾಜಪ ಮಾಜಿ ಶಾಸಕರಾದ ದಿವಂಗತ ಪ್ರಲ್ಹಾದ್ ರೆಮಾಣಿ, ಹಾಗೂ ಪ್ರಸ್ತುತ ಶಾಸಕರಾದ ವಿಠ್ಠಲ್ ಹಲಗೇಕರ್ ಮತ್ತು ಪ್ರಸ್ತುತ ಸಂಸದ ವಿಶ್ವೇಶ್ವರ ಹೆಗಡೆ–ಕಾಗೇರಿ ಅವರ ಸಹಕಾರದಿಂದ ಖಾನಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗುವಂತೆ ಮಹತ್ವದ ಪ್ರಯತ್ನಗಳನ್ನು ಮಾಡಿದ್ದಾರೆ.
ಅವರ ಮೂಲ ಗ್ರಾಮವಾದ ಕೋಡಚವಾಡ (ತಾ. ಖಾನಾಪುರ) ನಲ್ಲಿ ನಿರ್ಮಾಣವಾಗುತ್ತಿರುವ 110 ಕೆ.ವಿ. ವಿದ್ಯುತ್ ಉಪಕೇಂದ್ರ ಈಗ ಅಂತಿಮ ಹಂತದಲ್ಲಿದ್ದು, ಅವರ ಆತಕ ಪರಿಶ್ರಮ ಮತ್ತು ಪ್ರಯತ್ನದಿಂದಲೇ ಈ ಮಹತ್ವದ ಯೋಜನೆ ಸಾಕಾರಗೊಳ್ಳುತ್ತಿದೆ. ಈ ಉಪಕೇಂದ್ರದಿಂದ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಗ್ರಾಮಗಳ ರೈತರು ಮತ್ತು ಗ್ರಾಮಸ್ಥರ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಪರಿಹಾರ ದೊರಕಿಸಲು, ಅಪೂರ್ಣವಾಗಿರುವ ಸರ್ವೀಸ್ ರಸ್ತೆಗಳು ಪೂರ್ಣಗೊಳ್ಳಬೇಕು, ಹಾಗೂ ಹೆದ್ದಾರಿಯ ಮೇಲಿನ ಸೇತುವೆಗಳ ಕುರಿತು ಉಂಟಾಗಿರುವ ಸಮಸ್ಯೆಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ಅವರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಸಮಸ್ಯೆಗಳು ಪ್ರಸ್ತುತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರದಿಂದ ಪ್ರಮೋದ್ ಕೊಚೇರಿಯವರು ಖಂಡಿತವಾಗಿ ಪರಿಹಾರ ದೊರಕಿಸುತ್ತಾರೆ ಎಂಬ ವಿಶ್ವಾಸವನ್ನು ಭೂನಷ್ಟ ಅನುಭವಿಸಿದ ರೈತರು ಹಾಗೂ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.
ಖಾನಾಪುರ ತಾಲ್ಲೂಕಿನ ದುರ್ಗಮ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸಲು ಅವರು ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ಪ್ರಸ್ತುತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಾಯದಿಂದ ಅನೇಕ ಕಡೆಗಳಲ್ಲಿ ಬಿಎಸ್ಎನ್ಎಲ್ ಟವರ್ಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇತ್ತೀಚೆಗೆ ಜಾಂಬೋಟಿ ಭಾಗದ ಅತಿದುರ್ಗಮ ಚಾಪೋಲಿ ಗ್ರಾಮದಲ್ಲಿ ಬಿಎಸ್ಎನ್ಎಲ್ ಟವರ್ ಸ್ಥಾಪನೆಯಾಗಿದ್ದು, ಇದರಿಂದ ಅಲ್ಲಿನ ನಾಗರಿಕರಿಗೆ ಸಂಚಾರ ಹಾಗೂ ಸಂಪರ್ಕ ಸೌಲಭ್ಯಗಳಲ್ಲಿ ಮಹತ್ವದ ಲಾಭವಾಗಿದೆ.
ಇದೇ ಪ್ರದೇಶದ ಚಾಪೋಲಿ, ಕಾಪೋಲಿ ಮತ್ತು ಇತರ ಗ್ರಾಮಗಳ ರಸ್ತೆ ಡಾಂಬರೀಕರಣಕ್ಕೆ ಅರಣ್ಯ ಇಲಾಖೆಯ ಅಡಚಣೆಗಳು ಎದುರಾಗಿದ್ದವು. ಆದರೆ ಈ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಸಮರ್ಪಕವಾಗಿ ನಿರ್ವಹಿಸಿದ ಪರಿಣಾಮ ರಸ್ತೆ ಡಾಂಬರೀಕರಣ ಸಾಧ್ಯವಾಗಿ, ನಾಗರಿಕರ ದಿನನಿತ್ಯದ ತೊಂದರೆ ಕಡಿಮೆಯಾಗಿದೆ.
ಸಂಪೂರ್ಣ ಖಾನಾಪುರ ತಾಲ್ಲೂಕಿನ ಭೌಗೋಳಿಕ ಸ್ಥಿತಿ ಮತ್ತು ಪ್ರತಿ ಭಾಗದ ಸಮಸ್ಯೆಗಳ ಅರಿವು ಹೊಂದಿರುವ ಅವರು, ಶಾಸಕರಾದ ವಿಠ್ಠಲ್ ಹಲಗೇಕರ್ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ–ಕಾಗೇರಿ ಅವರ ಸಹಕಾರದಿಂದ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹೊಂದಿರುವ ಉತ್ತಮ ಸಂಪರ್ಕಗಳನ್ನು ಬಳಸಿಕೊಂಡು ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯದ ಜೊತೆಗೆ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲೂ ಅವರು ಸಕ್ರಿಯರಾಗಿದ್ದು, ಖಾನಾಪುರ ತಾಲ್ಲೂಕಿನ ದೇವಾಲಯಗಳು, ನೈಸರ್ಗಿಕ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಯ ಮೂಲಕ ಖಾನಾಪುರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ಸಂಕಲ್ಪ ಹೊಂದಿದ್ದಾರೆ. ಈ ದಿಕ್ಕಿನಲ್ಲಿ ಶಾಸಕರು ಮತ್ತು ಸಂಸದರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯತ್ನಗಳನ್ನು ಕೈಗೊಳ್ಳಲಿದ್ದಾರೆ.
ಖಾನಾಪುರ ತಾಲ್ಲೂಕಿನ ಜನತೆ, ಅವರನ್ನು ಸಾಮಾನ್ಯ ಜನರ ಪ್ರತಿನಿಧಿ ನಾಯಕನಾಗಿ ನೋಡುವುದು ವಿಶೇಷ.
ಇಂತಹ ಜನಸಾಮಾನ್ಯರ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಮೋದ್ ಕೊಚೇರಿ ಅವರಿಗೆ “ನಮ್ಮ ಖಾನಾಪುರ” ಸುದ್ದಿ ಪೋರ್ಟಲ್ ಮತ್ತು ಫೇಸ್ಬುಕ್ ಗ್ರೂಪ್ ವತಿಯಿಂದ ಅವರ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಗಳಿಗೆ ಹಾರ್ದಿಕ ಶುಭಾಶಯಗಳು. ಹಾಗೆಯೇ ಅವರ ಜನ್ಮದಿನದ ಅಂಗವಾಗಿ ಹೃದಯಪೂರ್ವಕ ಶುಭಾಶಯಗಳು!


