जांबोटी परिसरातील पिण्याच्या पाण्याचा प्रश्न ऐरणीवर; कुसमळीतील मलप्रभा नदीच्या पाणीउपशाला नागरिकांचा आक्षेप.

जांबोटी : प्रतिनिधी
जांबोटी येथे शनिवारी, 3 ऑक्टोबर 2026 रोजी आयोजित करण्यात आलेल्या प्रजा सेवा आंदोलनादरम्यान जांबोटी ग्रामपंचायत कार्यक्षेत्रातील नागरिकांच्या वतीने माजी ग्रामपंचायत सदस्य सुनील शंकर देसाई यांनी कुसमळी येथील मलप्रभा नदीतून बेळगाव ग्रामीण भागासाठी सुरू करण्यात आलेल्या मोठ्या पाणीपुरवठा प्रकल्पाबाबत निवेदन सादर केले.
कुसमळी येथील मलप्रभा नदी ही जांबोटी परिसरातील अनेक गावांसाठी पिण्याच्या पाण्याचा महत्त्वाचा स्रोत आहे. मात्र, यावर्षी या नदीतून मोठ्या प्रमाणावर पाणी बेळगाव ग्रामीण भागासाठी वळविण्याची व्यवस्था करण्यात आल्याने स्थानिक गावांच्या पिण्याच्या पाण्यावर त्याचा परिणाम होण्याची शक्यता असल्याची चिंता नागरिकांनी व्यक्त केली आहे.
‘बेळगाव ग्रामीण भागाला पाणी देण्यास आमचा विरोध नाही; मात्र स्थानिक गावांच्या पिण्याच्या पाण्याची गरज प्रथम भागवावी,’ अशी भूमिका नागरिकांनी निवेदनातून स्पष्ट केली आहे.

जांबोटी ग्रामपंचायत कार्यक्षेत्रातील चापोली वगळता इतर अनेक गावांतील नागरिक मलप्रभा नदीतील पाण्यावर अवलंबून आहेत. दरवर्षी जानेवारीपासूनच या भागात पिण्याच्या पाण्याची टंचाई जाणवू लागते. फेब्रुवारी-मार्चमध्ये नदीपात्रातील पाण्याची पातळी कमी होत असून उन्हाळ्यात परिस्थिती आणखी गंभीर बनते. त्यामुळे मोठ्या प्रमाणावर पाणीउपसा सुरू राहिल्यास स्थानिक गावांसमोर भविष्यात गंभीर पाणीटंचाई निर्माण होण्याची शक्यता नागरिकांनी व्यक्त केली.
शासनाने तातडीने पाहणी करावी….
कुसमळी येथील मलप्रभा नदीतून सुरू असलेल्या पाणीपुरवठा प्रकल्पाचा स्थानिक पाणीसाठ्यावर नेमका किती परिणाम होत आहे, याची तातडीने शासकीय पातळीवर तपासणी करण्यात यावी. तसेच प्रकल्प राबविताना जांबोटी ग्रामपंचायत व स्थानिक ग्रामस्थांना विश्वासात घेण्यात आले होते का, याची चौकशी करावी, अशी मागणी करण्यात आली.
नदीतील पाणी कमी होत असताना बेळगाव ग्रामीण भागासाठी होणारा पाणीउपसा मर्यादित करावा किंवा आवश्यकतेनुसार तात्पुरता थांबवावा, अशी मागणीही निवेदनात करण्यात आली आहे.
जांबोटीसाठी स्वतंत्र कायमस्वरूपी पाणीपुरवठा योजनेची मागणी….
जांबोटी ग्रामपंचायत कार्यक्षेत्रातील गावांसाठी स्वतंत्र मोठी व कायमस्वरूपी पाणीपुरवठा योजना मंजूर करून ती तातडीने कार्यान्वित करावी. भविष्यात स्थानिक जलस्रोतांवर आधारित कोणताही मोठा पाणीपुरवठा प्रकल्प राबविताना संबंधित ग्रामपंचायत व ग्रामस्थांना विश्वासात घेऊन प्रथम स्थानिक गावांच्या पिण्याच्या पाण्याची गरज निश्चित करावी, अशी मागणी करण्यात आली.
तसेच मलप्रभा नदीतील पाणीसाठा, पाणीउपसा आणि दोन्ही भागांची पिण्याच्या पाण्याची गरज याबाबत संयुक्त पाहणी व सर्वेक्षण करण्यात यावे, अशी मागणी नागरिकांनी केली आहे.
या निवेदनाच्या माध्यमातून मुख्यमंत्री, कर्नाटक सरकार, तहसीलदार खानापूर तसेच आमदार विठ्ठल सोमण्णा हलगेकर यांच्याकडे तातडीने हस्तक्षेप करून जांबोटी परिसरातील पिण्याच्या पाण्याचा प्रश्न कायमस्वरूपी सोडविण्याची मागणी करण्यात आली.
निवेदनावर सुनील शंकर देसाई, माजी उपाध्यक्ष, ग्रामपंचायत जांबोटी तसेच जांबोटी ग्रामपंचायत क्षेत्रातील ग्रामस्थांच्या वतीने स्वाक्षऱ्या करण्यात आल्या.
ಜಾಂಬೋಟಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಮುನ್ನೆಲೆಗೆ; ಕುಸಮಳ್ಳಿಯ ಮಲಪ್ರಭಾ ನದಿಯಿಂದ ನೀರು ಎತ್ತುವುದಕ್ಕೆ ನಾಗರಿಕರ ಆಕ್ಷೇಪ.
ಜಾಂಬೋಟಿ : ಪ್ರತಿನಿಧಿ
ಜಾಂಬೋಟಿಯಲ್ಲಿ ಶನಿವಾರ, 3 ಅಕ್ಟೋಬರ್ 2026 ರಂದು ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನದ ಸಂದರ್ಭದಲ್ಲಿ, ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರ ಪರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀಲ್ ಶಂಕರ ದೇಸಾಯಿ ಅವರು ಕುಸಮಳಿ ಗ್ರಾಮದ ಮಲಪ್ರಭಾ ನದಿಯಿಂದ ಬೆಳಗಾವಿ ಗ್ರಾಮೀಣ ಪ್ರದೇಶಕ್ಕೆ ಆರಂಭಿಸಲಾಗಿರುವ ಬೃಹತ್ ಕುಡಿಯುವ ನೀರು ಪೂರೈಕೆ ಯೋಜನೆ ಕುರಿತು ಮನವಿ ಸಲ್ಲಿಸಿದರು.
ಕುಸಮಳಿ ಗ್ರಾಮದ ಮಲಪ್ರಭಾ ನದಿಯು ಜಾಂಬೋಟಿ ಪ್ರದೇಶದ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಆದರೆ ಈ ವರ್ಷ ಈ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಬೆಳಗಾವಿ ಗ್ರಾಮೀಣ ಪ್ರದೇಶಕ್ಕೆ ಹರಿಸುವ ವ್ಯವಸ್ಥೆ ಮಾಡಲಾಗಿರುವುದರಿಂದ, ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.
‘ಬೆಳಗಾವಿ ಗ್ರಾಮೀಣ ಪ್ರದೇಶಕ್ಕೆ ನೀರು ನೀಡುವುದಕ್ಕೆ ನಮ್ಮ ವಿರೋಧವಿಲ್ಲ; ಆದರೆ ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಅಗತ್ಯವನ್ನು ಮೊದಲು ಪೂರೈಸಬೇಕು,’ ಎಂಬ ನಿಲುವನ್ನು ನಾಗರಿಕರು ಮನವಿಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಪೋಲಿ ಹೊರತುಪಡಿಸಿ, ಇತರ ಅನೇಕ ಗ್ರಾಮಗಳ ನಾಗರಿಕರು ಮಲಪ್ರಭಾ ನದಿಯ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿವರ್ಷ ಜನವರಿ ತಿಂಗಳಿನಿಂದಲೇ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಫೆಬ್ರವರಿ-ಮಾರ್ಚ್ ವೇಳೆಗೆ ನದಿಪಾತ್ರದಲ್ಲಿನ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಬೇಸಿಗೆ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ.
ಹೀಗಾಗಿ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಎತ್ತುವಿಕೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾಮಗಳು ಗಂಭೀರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಸಕರು ಹಾಗೂ ಸರ್ಕಾರ ತಕ್ಷಣ ಪರಿಶೀಲನೆ ನಡೆಸಬೇಕು….
ಕುಸಮಳಿ ಗ್ರಾಮದ ಮಲಪ್ರಭಾ ನದಿಯಿಂದ ನಡೆಯುತ್ತಿರುವ ನೀರು ಪೂರೈಕೆ ಯೋಜನೆಯಿಂದ ಸ್ಥಳೀಯ ನೀರಿನ ಸಂಗ್ರಹದ ಮೇಲೆ ನಿಖರವಾಗಿ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ತುರ್ತಾಗಿ ಸರ್ಕಾರಿ ಮಟ್ಟದಲ್ಲಿ ಪರಿಶೀಲಿಸಬೇಕು. ಅಲ್ಲದೆ, ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಜಾಂಬೋಟಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಪ್ರದೇಶಕ್ಕೆ ಮಾಡಲಾಗುತ್ತಿರುವ ನೀರು ಎತ್ತುವಿಕೆಯನ್ನು ಮಿತಿಗೊಳಿಸಬೇಕು ಅಥವಾ ಅಗತ್ಯವಿದ್ದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಾಂಬೋಟಿಗೆ ಪ್ರತ್ಯೇಕ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ ಆಗ್ರಹ….
ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗಾಗಿ ಪ್ರತ್ಯೇಕವಾದ ಬೃಹತ್ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಮಂಜೂರು ಮಾಡಿ, ಅದನ್ನು ತುರ್ತಾಗಿ ಕಾರ್ಯಗತಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸ್ಥಳೀಯ ಜಲಮೂಲಗಳನ್ನು ಆಧರಿಸಿ ಯಾವುದೇ ಬೃಹತ್ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮೊದಲು ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಅಗತ್ಯವನ್ನು ನಿರ್ಧರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅದೇ ರೀತಿ, ಮಲಪ್ರಭಾ ನದಿಯಲ್ಲಿನ ನೀರಿನ ಸಂಗ್ರಹ, ನೀರು ಎತ್ತುವಿಕೆಯ ಪ್ರಮಾಣ ಹಾಗೂ ಜಾಂಬೋಟಿ ಮತ್ತು ಬೆಳಗಾವಿ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯದ ಕುರಿತು ಜಂಟಿ ಪರಿಶೀಲನೆ ಮತ್ತು ಸಮೀಕ್ಷೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಈ ಮನವಿಯ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಖಾನಾಪುರ ತಹಶೀಲ್ದಾರ್ ಹಾಗೂ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರು ತಕ್ಷಣ ಮಧ್ಯಪ್ರವೇಶಿಸಿ, ಜಾಂಬೋಟಿ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಮನವಿಗೆ ಜಾಂಬೋಟಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಸುನೀಲ್ ಶಂಕರ ದೇಸಾಯಿ ಹಾಗೂ ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಪರವಾಗಿ ಸಹಿ ಮಾಡಲಾಗಿದೆ.




