
मार्कंडेयनगर येथील वसतिगृहातील विद्यार्थ्यांना विषबाधा.
बेळगाव ; मार्कंडेयनगर येथील एका वसतिगृहामधील सुमारे 30 शालेय विद्यार्थ्यांना अन्नातून विषबाधा झाल्याची गंभीर घटना घडली आहे. या मुलांना उलट्या आणि जुलाबाचा त्रास सुरू झाल्याने तातडीने वैद्यकीय उपचारासाठी मच्छे येथील एका खासगी रुग्णालयात दाखल करण्यात आले आहे. तसेच, काही गंभीर अवस्थेतील विद्यार्थ्यांना जिल्हा रुग्णालयात हलवण्यात आले आहे.
मिळालेल्या माहितीनुसार, वसतिगृहातील भोजनामध्ये पाल पडल्याने मुलांना उलट्या आणि जुलाब सुरू झाले. या घटनेची माहिती मिळताच पालकांनी आणि नागरिकांनी मुलांच्या आरोग्यासाठी वसतिगृहाकडे धाव घेतली.
सध्या सर्व बाधित विद्यार्थ्यांवर तातडीने उपचार सुरू असून, त्यांची प्रकृती स्थिर असल्याचे डॉक्टरांनी सांगितले आहे. परिस्थिती नियंत्रणाखाली असल्याचेही डॉक्टरांनी स्पष्ट केले आहे.
ಮಾರ್ಕಂಡೇಯನಗರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಷ ಬಾಧೆ ಫುಡ್ ಪಾಯಿಸನ್.
ಬೆಳಗಾವಿ ;ಮಾರ್ಕಂಡೇಯ ನಗರದಲ್ಲಿರುವ ಹಾಸ್ಟೆಲ್ನ ಸುಮಾರು 30 ಶಾಲಾ ವಿದ್ಯಾರ್ಥಿಗಳಿಗೆ ವಿಷ ಬಾಧೆ ಫುಡ್ ಪಾಯಿಸನ್ ಆದ ಗಂಭೀರ ಘಟನೆ ನಡೆದಿದೆ. ಮಕ್ಕಳಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಮಚ್ಚೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ, ಕೆಲವು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸಿಕ್ಕ ಮಾಹಿತಿ ಪ್ರಕಾರ, ಹಾಸ್ಟೆಲ್ ಊಟದಲ್ಲಿ ಹಲ್ಲಿ ಬಿದ್ದಿದ್ದರಿಂದ ಮಕ್ಕಳಿಗೆ ವಾಂತಿ ಮತ್ತು ಭೇದಿ ಶುರುವಾಗಿದೆ. ಈ ಘಟನೆಯ ಮಾಹಿತಿ ಸಿಕ್ಕ ಕೂಡಲೇ ಪೋಷಕರು ಮತ್ತು ನಾಗರಿಕರು ಮಕ್ಕಳ ರಕ್ಷಣೆಗಾಗಿ ಹಾಸ್ಟೆಲ್ ಕಡೆಗೆ ಧಾವಿಸಿದ್ದಾರೆ.
ಪ್ರಸ್ತುತ, ಎಲ್ಲಾ ಬಾಧಿತ ವಿದ್ಯಾರ್ಥಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೂಡ ವೈದ್ಯರು ಸ್ಪಷ್ಟಪಡಿಸಿದ್ದಾರೆ.
