खानापूर तालुका पंचायतमध्ये पाच गॅरंटी योजनांचा आढावा.
खानापूर : तालुका पंचायत खानापूर येथे आज पाच गॅरंटी योजनांच्या अंमलबजावणीचा आढावा घेण्यासाठी बैठक घेण्यात आली. या बैठकीच्या अध्यक्षस्थानी गॅरंटी योजना समितीचे अध्यक्ष सूर्यकांत कुलकर्णी होते. बैठकीस तालुका पंचायतचे कार्यकारी अधिकारी रमेश मैत्री तसेच गॅरंटी योजना समितीचे सदस्य व विविध विभागांचे अधिकारी उपस्थित होते.
बैठकीमध्ये पाचही गॅरंटी योजनांच्या प्रगतीचा संबंधित अधिकाऱ्यांकडून सविस्तर आढावा घेण्यात आला. योजनांच्या अंमलबजावणीदरम्यान येणाऱ्या अडचणींबाबत समितीच्या सदस्यांनी प्रश्न उपस्थित करून त्यावर सविस्तर चर्चा केली.
शक्ती योजनेचा आढावा
खानापूर आगाराचे डेपो व्यवस्थापक संतोष बेनकनकोप यांनी शक्ती योजनेची माहिती दिली. सप्टेंबर महिन्यात शक्ती योजनेअंतर्गत महिलांनी तब्बल 6,72,495 प्रवास केले असून, या मोफत प्रवासाची एकूण रक्कम ₹1,90,19,188 इतकी असल्याची माहिती त्यांनी दिली.
यावेळी गुंजी येथील माऊली देवी जत्रा तसेच कक्केरी जत्रेसाठी प्रवाशांची गैरसोय होऊ नये म्हणून जास्तीत जास्त बसफेऱ्या सोडण्याची सूचना करण्यात आली.
तसेच नांदगड येथे एक्सप्रेस बस जात नसल्याची तक्रार करण्यात आली. माळ अंकले येथे सायंकाळच्या वेळेत बससेवा सुरू करावी, अशी मागणी करण्यात आली. हेमडगा–डोंगरगाव–अनमोड मार्गावरील बसमध्ये मोठ्या प्रमाणात गर्दी होत असल्याने सायंकाळी ५ वाजता अतिरिक्त बस सोडावी, अशी मागणी सदस्यांनी केली.
संगरगाळी गावासाठी सकाळी व सायंकाळी बससेवा उपलब्ध करून द्यावी, अशीही मागणी करण्यात आली. बससेवेअभावी विद्यार्थ्यांची मोठी गैरसोय होत असल्याने या मागण्यांची तातडीने पूर्तता करावी, असा ठराव बैठकीत मांडण्यात आला.
गृहज्योती योजनेचा आढावा
हेस्कॉम सहाय्यक अभियंता लक्ष्मण रंगनाथ यांनी गृहज्योती योजनेची माहिती दिली. तालुक्यात 63,743 लाभार्थी असून सप्टेंबर महिन्यात लाभार्थ्यांना ₹2,12,37,000 इतक्या रकमेची वीज बिलात सवलत/माफी मिळाल्याची माहिती देण्यात आली.
गृहज्योती योजनेच्या पुनर्पडताळणीचे 1,115 प्रकरणे अद्याप बाकी असून, संबंधित लाभार्थ्यांनी या महिन्याच्या अखेरपर्यंत पुनर्पडताळणी करून घ्यावी, असे आवाहन करण्यात आले.
यावेळी सदस्यांनी कुठीनोनगर येथे गेल्या तीन वर्षांपासून वीजेचा खांब पडलेल्या अवस्थेत असल्याचा मुद्दा उपस्थित केला. त्यामुळे शेतकऱ्यांचे नुकसान होत असून हा खांब तातडीने बसवावा, अशी मागणी करण्यात आली.
तसेच एका हेस्कॉम विभागीय अधिकाऱ्याकडे किती ग्रामपंचायतींची जबाबदारी आहे, याची माहिती पुढील बैठकीत लेखी स्वरूपात द्यावी, अशी मागणी करण्यात आली. मागील बैठकीत विभागीय अधिकारी चकलीमठ यांच्याबाबत कारवाईची मागणी करण्यात आली होती. त्या संदर्भात काय कारवाई करण्यात आली, याची लेखी माहिती द्यावी, अशी मागणी सदस्यांनी केली.
जंगल परिसरातील वीज खांबे बदलण्याबाबत यापूर्वी मागविलेली माहिती अद्याप देण्यात आलेली नसल्याने ती माहिती समितीला तातडीने उपलब्ध करून द्यावी, असा ठरावही करण्यात आला.
अन्नभाग्य योजनेवर सदस्यांचे प्रश्न
अन्नभाग्य योजनेची माहिती उप तहसीलदार (आहार विभाग) शरणाप्पा बागेवाडी यांनी दिली. तालुक्यात 6,471 अंत्योदय कार्ड, 56,151 बीपीएल कार्ड आणि 2,085 एपीएल कार्ड असल्याची माहिती त्यांनी दिली.
यावेळी सदस्य प्रकाश मादार यांनी मागील बैठकीला अधिकारी का उपस्थित नव्हते, असा प्रश्न उपस्थित केला. तसेच गॅरंटी योजना समितीचे सदस्य ज्या रेशन दुकानांची पाहणी करतात, त्या ठिकाणी समितीच्या सदस्यांना का बोलावले जात नाही, असा सवालही करण्यात आला.
समितीच्या सदस्यांनी उपस्थित केलेल्या प्रश्नांना समाधानकारक माहिती न दिल्याचा आरोप करत संबंधित अधिकाऱ्यांवर कारवाई करण्याचा ठराव मांडण्यात आला.
रेशन कार्डच्या ई-केवायसीची अंतिम तारीख 20 सप्टेंबर असल्याचे अधिकाऱ्यांनी सांगितले. मात्र, याबाबत शासनाचा लेखी आदेश आहे का, असा प्रश्न सदस्यांनी उपस्थित केला. आदेश दाखविण्याची मागणी केली असता संबंधित अधिकाऱ्यांकडे लेखी शासन आदेश उपलब्ध नसल्याचे बैठकीत स्पष्ट झाले.
यावेळी विवेक तडकोड यांनी हिरेहट्टीहोळी गावातील रेशन दुकानात लाभार्थ्यांना तीन किलो तांदूळ कमी दिला जात असल्याची तक्रार यापूर्वी करण्यात आली होती. त्यावर अद्याप कोणती कारवाई करण्यात आली, तसेच संबंधित दुकानाची तपासणी केली का, असा सवाल त्यांनी केला. तक्रारदाराला तपासणीच्या वेळी का बोलावण्यात आले नाही, असा प्रश्नही त्यांनी उपस्थित केला. यावर संबंधित अधिकाऱ्यांकडून समाधानकारक उत्तर मिळाले नसल्याचा आरोप करण्यात आला.
गृहलक्ष्मी योजनेचा आढावा
एसीडीपीओ शारदा मराठे यांनी गृहलक्ष्मी योजनेची माहिती दिली. तालुक्यात 67,432 महिला लाभार्थी असून त्यांच्या खात्यावर दर महिन्याला सुमारे ₹13,48,64,000 जमा होत असल्याची माहिती देण्यात आली.
आत्तापर्यंत जून महिन्यापर्यंतचे पैसे जमा झाले असून, तीन महिन्यांची रक्कम अद्याप जमा होणे बाकी आहे. ही रक्कम चालू महिन्यात जमा होईल, असे त्यांनी सांगितले.
यावेळी सदस्यांनी गृहलक्ष्मी योजनेच्या लाभार्थ्यांना स्वतःच्या नावावर सिमकार्ड असणे आवश्यक आहे का, असा प्रश्न उपस्थित केला. त्यावर सिमकार्ड दुसऱ्याच्या नावावरून पोर्ट केले तरी चालते, अशी माहिती देण्यात आली.
मात्र, याबाबत शासनाचा लेखी आदेश आहे का, असा प्रश्न सदस्यांनी केला असता, अधिकाऱ्यांनी बैठकीमध्ये तोंडी सूचना देण्यात आल्याचे सांगितले; मात्र याबाबत अद्याप कोणताही लेखी शासन आदेश प्राप्त झालेला नसल्याचे स्पष्ट झाले.
युवा निधी योजनेबाबत अधिकारी अनुपस्थित
युवा निधी योजनेचा आढावा घेण्यासाठी संबंधित विभागाचा कोणताही अधिकारी बैठकीस उपस्थित नव्हता. मात्र विभागाकडून प्राप्त अहवालानुसार तालुक्यात सुमारे 4,300 युवक युवा निधीचा लाभ घेत असल्याची माहिती देण्यात आली.
बैठकीदरम्यान विविध योजनांच्या अंमलबजावणीमध्ये येणाऱ्या अडचणी तातडीने दूर कराव्यात आणि लाभार्थ्यांना योजनांचा योग्य लाभ मिळावा, यासाठी संबंधित अधिकाऱ्यांनी जबाबदारीने काम करावे, अशी सूचना समितीच्या अध्यक्षांनी केली.
या बैठकीस प्रकाश मादार, रुद्राप्पा पाटील, जगदीश पाटील, प्रियांका गावकर, शांताराम गुरव, गोविंद पाटील, युसुफ हारगी, बाबू अत्तरवाड, विवेक तडकोड, संजय गावडे यांच्यासह गॅरंटी योजना समितीचे सदस्य, विविध विभागांचे अधिकारी आणि तालुका पंचायतचे कार्यकारी अधिकारी रमेश मैत्री उपस्थित होते.
ಖಾನಾಪುರ ತಾಲೂಕು ಪಂಚಾಯಿತಿಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ.
ಖಾನಾಪುರ: ಖಾನಾಪುರ ತಾಲೂಕು ಪಂಚಾಯಿತಿಯಲ್ಲಿ ಇಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಸಭೆ ನಡೆಯಿತು. ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೈತ್ರಿ, ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಸವಿಸ್ತಾರ ಮಾಹಿತಿ ಪಡೆಯಲಾಯಿತು. ಯೋಜನೆಗಳ ಅನುಷ್ಠಾನದ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಮಿತಿ ಸದಸ್ಯರು ಪ್ರಶ್ನೆಗಳನ್ನು ಎತ್ತಿ, ಅವುಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಶಕ್ತಿ ಯೋಜನೆಯ ಪರಿಶೀಲನೆ
ಖಾನಾಪುರ ಕೆಎಸ್ಆರ್ಟಿಸಿ ಘಟಕದ ಡಿಪೋ ವ್ಯವಸ್ಥಾಪಕ ಸಂತೋಷ ಬೆನಕನಕೋಪ ಅವರು ಶಕ್ತಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಸೆಪ್ಟೆಂಬರ್ ತಿಂಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು 6,72,495 ಬಾರಿ ಪ್ರಯಾಣಿಸಿದ್ದು, ಈ ಉಚಿತ ಪ್ರಯಾಣದ ಒಟ್ಟು ಮೌಲ್ಯ ₹1,90,19,188 ಆಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಂಜಿ ಗ್ರಾಮದ ಮೌಲಿ ದೇವಿ ಜಾತ್ರೆ ಹಾಗೂ ಕಕ್ಕೇರಿ ಜಾತ್ರೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಯಿತು.
ನಾಂದಗಡ ಊರಿಗೆ ಎಕ್ಸ್ಪ್ರೆಸ್ ಬಸ್ ಸಂಚಾರವಿಲ್ಲ ಎಂಬ ದೂರು ಸಭೆಯಲ್ಲಿ ಕೇಳಿಬಂತು. ಮಾಳ ಅಂಕಲೆ ಗ್ರಾಮಕ್ಕೆ ಸಂಜೆ ವೇಳೆಯಲ್ಲಿ ಬಸ್ ಸೇವೆ ಆರಂಭಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಹೆಮ್ಮಡಗಾ–ಡೊಂಗರಗಾಂವ–ಅನಮೋಡ ಮಾರ್ಗದಲ್ಲಿ ಬಸ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅದೇ ರೀತಿ ಸಂಗರಗಾಳಿ ಗ್ರಾಮಕ್ಕೆ ಬೆಳಗ್ಗೆ ಹಾಗೂ ಸಂಜೆ ಬಸ್ ಸೇವೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಬಸ್ ಸೇವೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸದಸ್ಯರು ತಿಳಿಸಿದರು. ಈ ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವಂತೆ ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.
ಗೃಹಜ್ಯೋತಿ ಯೋಜನೆಯ ಪರಿಶೀಲನೆ
ಹೆಸ್ಕಾಂ ಸಹಾಯಕ ಎಂಜಿನಿಯರ್ ಲಕ್ಷ್ಮಣ ರಂಗನಾಥ ಅವರು ಗೃಹಜ್ಯೋತಿ ಯೋಜನೆಯ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ 63,743 ಫಲಾನುಭವಿಗಳಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ನಲ್ಲಿ ಒಟ್ಟು ₹2,12,37,000 ಮೊತ್ತದ ರಿಯಾಯಿತಿ/ವಿದ್ಯುತ್ ಬಿಲ್ ಮನ್ನಾ ಸೌಲಭ್ಯ ದೊರೆತಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಗೆ ಸಂಬಂಧಿಸಿದಂತೆ 1,115 ಪ್ರಕರಣಗಳು ಇನ್ನೂ ಬಾಕಿ ಇದ್ದು, ಸಂಬಂಧಿಸಿದ ಫಲಾನುಭವಿಗಳು ಈ ತಿಂಗಳ ಅಂತ್ಯದೊಳಗೆ ಮರುಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಈ ವೇಳೆ ಕೂಟಿನೋನಗರದಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯುತ್ ಕಂಬವೊಂದು ಬಿದ್ದ ಸ್ಥಿತಿಯಲ್ಲಿದೆ ಎಂಬ ವಿಷಯವನ್ನು ಸದಸ್ಯರು ಪ್ರಸ್ತಾಪಿಸಿದರು. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ವಿದ್ಯುತ್ ಕಂಬವನ್ನು ತಕ್ಷಣವೇ ಸರಿಪಡಿಸಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಒಬ್ಬ ಹೆಸ್ಕಾಂ ವಿಭಾಗೀಯ ಅಧಿಕಾರಿಯ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಇದೆ ಎಂಬ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಲಿಖಿತ ರೂಪದಲ್ಲಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಹಿಂದಿನ ಸಭೆಯಲ್ಲಿ ವಿಭಾಗೀಯ ಅಧಿಕಾರಿ ಚಕಲಿಮಠ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಈ ಕುರಿತು ಇದುವರೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಅರಣ್ಯ ಪ್ರದೇಶದಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕುರಿತು ಈ ಹಿಂದೆ ಕೇಳಲಾಗಿದ್ದ ಮಾಹಿತಿಯನ್ನು ಇನ್ನೂ ನೀಡದಿರುವುದರಿಂದ, ಆ ಮಾಹಿತಿಯನ್ನು ಸಮಿತಿಗೆ ತುರ್ತಾಗಿ ಒದಗಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಅನ್ನಭಾಗ್ಯ ಯೋಜನೆ ಕುರಿತು ಸದಸ್ಯರ ಪ್ರಶ್ನೆಗಳು
ಅನ್ನಭಾಗ್ಯ ಯೋಜನೆಯ ಕುರಿತು ಉಪ ತಹಶೀಲ್ದಾರ್ (ಆಹಾರ ಇಲಾಖೆ) ಶರಣಪ್ಪ ಬಾಗೇವಾಡಿ ಅವರು ಮಾಹಿತಿ ನೀಡಿದರು. ತಾಲೂಕಿನಲ್ಲಿ 6,471 ಅಂತ್ಯೋದಯ ಕಾರ್ಡ್ಗಳು, 56,151 ಬಿಪಿಎಲ್ ಕಾರ್ಡ್ಗಳು ಹಾಗೂ 2,085 ಎಪಿಎಲ್ ಕಾರ್ಡ್ಗಳು ಇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಪ್ರಕಾಶ ಮಾದಾರ ಅವರು ಹಿಂದಿನ ಸಭೆಗೆ ಸಂಬಂಧಿಸಿದ ಅಧಿಕಾರಿ ಏಕೆ ಹಾಜರಾಗಿರಲಿಲ್ಲ ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಪರಿಶೀಲನೆ ನಡೆಸುವ ಪಡಿತರ ಅಂಗಡಿಗಳಿಗೆ ಪರಿಶೀಲನೆ ವೇಳೆ ಸಮಿತಿ ಸದಸ್ಯರನ್ನು ಏಕೆ ಕರೆಯಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಮಿತಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಣಯ ಮಂಡಿಸಲಾಯಿತು.
ಪಡಿತರ ಚೀಟಿಗಳ ಇ-ಕೆವೈಸಿಗೆ ಸೆಪ್ಟೆಂಬರ್ 20 ಕೊನೆಯ ದಿನಾಂಕ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ಈ ಕುರಿತು ಸರ್ಕಾರದ ಲಿಖಿತ ಆದೇಶವಿದೆಯೇ ಎಂದು ಸದಸ್ಯರು ಪ್ರಶ್ನಿಸಿದರು. ಆದೇಶವನ್ನು ತೋರಿಸುವಂತೆ ಒತ್ತಾಯಿಸಿದಾಗ, ಸಂಬಂಧಿಸಿದ ಅಧಿಕಾರಿಗಳ ಬಳಿ ಯಾವುದೇ ಲಿಖಿತ ಸರ್ಕಾರಿ ಆದೇಶ ಲಭ್ಯವಿಲ್ಲ ಎಂಬುದು ಸಭೆಯಲ್ಲಿ ಸ್ಪಷ್ಟವಾಯಿತು.
ಸದಸ್ಯ ವಿವೇಕ ತಡಕೋಡ ಅವರು ಹಿರೇಹಟ್ಟಿಹೊಳಿ ಗ್ರಾಮದ ಪಡಿತರ ಅಂಗಡಿಯಲ್ಲಿ ಫಲಾನುಭವಿಗಳಿಗೆ ಮೂರು ಕೆ.ಜಿ. ಅಕ್ಕಿ ಕಡಿಮೆ ನೀಡಲಾಗುತ್ತಿದೆ ಎಂಬ ದೂರು ಈ ಹಿಂದೆ ನೀಡಲಾಗಿತ್ತು. ಈ ದೂರಿನ ಮೇಲೆ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಹಾಗೂ ಸಂಬಂಧಿಸಿದ ಅಂಗಡಿಯನ್ನು ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಅಲ್ಲದೆ, ಪರಿಶೀಲನೆ ನಡೆಸುವ ಸಂದರ್ಭದಲ್ಲಿ ದೂರುದಾರರನ್ನು ಏಕೆ ಕರೆಯಲಾಗಿಲ್ಲ ಎಂದು ಪ್ರಶ್ನಿಸಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ ಎಂದು ಅವರು ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆ
ಎಸಿಡಿಪಿಒ ಶಾರದಾ ಮರಾಠೆ ಅವರು ಗೃಹಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ 67,432 ಮಹಿಳಾ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಅವರ ಖಾತೆಗಳಿಗೆ ಸುಮಾರು ₹13,48,64,000 ಹಣ ಜಮೆಯಾಗುತ್ತಿದೆ ಎಂದು ತಿಳಿಸಿದರು.
ಇದುವರೆಗೆ ಜೂನ್ ತಿಂಗಳವರೆಗೆ ಹಣ ಜಮೆಯಾಗಿದ್ದು, ಇನ್ನೂ ಮೂರು ತಿಂಗಳ ಹಣ ಬಾಕಿ ಇದೆ. ಈ ಬಾಕಿ ಮೊತ್ತವನ್ನು ಪ್ರಸಕ್ತ ತಿಂಗಳಲ್ಲಿ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮದೇ ಹೆಸರಿನಲ್ಲಿ ಸಿಮ್ ಕಾರ್ಡ್ ಹೊಂದಿರಬೇಕೇ ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು, ಮತ್ತೊಬ್ಬರ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಪೋರ್ಟ್ ಮಾಡಿಕೊಂಡಿದ್ದರೂ ಬಳಸಬಹುದು ಎಂದು ಮಾಹಿತಿ ನೀಡಿದರು.
ಆದರೆ ಈ ಕುರಿತು ಸರ್ಕಾರದ ಲಿಖಿತ ಆದೇಶವಿದೆಯೇ ಎಂದು ಸದಸ್ಯರು ಪ್ರಶ್ನಿಸಿದರು. ಅಧಿಕಾರಿಗಳು ಸಭೆಯಲ್ಲಿ ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರೂ, ಈ ಕುರಿತು ಯಾವುದೇ ಲಿಖಿತ ಸರ್ಕಾರಿ ಆದೇಶ ಇದುವರೆಗೆ ಬಂದಿಲ್ಲ ಎಂಬುದು ಸ್ಪಷ್ಟವಾಯಿತು.
ಯುವ ನಿಧಿ ಯೋಜನೆ ಪರಿಶೀಲನೆಗೆ ಅಧಿಕಾರಿ ಗೈರು
ಯುವ ನಿಧಿ ಯೋಜನೆಯ ಪರಿಶೀಲನೆಗಾಗಿ ಸಂಬಂಧಿಸಿದ ಇಲಾಖೆಯ ಯಾವುದೇ ಅಧಿಕಾರಿ ಸಭೆಗೆ ಹಾಜರಾಗಿರಲಿಲ್ಲ. ಆದರೆ ಇಲಾಖೆಯಿಂದ ಬಂದಿರುವ ವರದಿಯ ಪ್ರಕಾರ ತಾಲೂಕಿನಲ್ಲಿ ಸುಮಾರು 4,300 ಯುವಕರು ಯುವ ನಿಧಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೇಳೆ ಎದುರಾಗುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಸಮರ್ಪಕವಾಗಿ ದೊರೆಯುವಂತೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಸೂಚಿಸಿದರು.
ಸಭೆಯಲ್ಲಿ ಪ್ರಕಾಶ ಮಾದಾರ, ರುದ್ರಪ್ಪ ಪಾಟೀಲ, ಜಗದೀಶ ಪಾಟೀಲ, ಪ್ರಿಯಾಂಕಾ ಗಾವಕರ, ಶಾಂತಾರಾಮ್ ಗುರುವ್, ಗೋವಿಂದ ಪಾಟೀಲ, ಯೂಸೂಫ್ ಹಾರಗಿ, ಬಾಬು ಅತ್ತರಾವಾಡ, ವಿವೇಕ ತಡಕೋಡ, ಸಂಜಯ ಗಾವಡೆ ಸೇರಿದಂತೆ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೈತ್ರಿ ಉಪಸ್ಥಿತರಿದ್ದರು.

