खानापूरात किरकोळ वादातून तरुणावर चाकू हल्ला ; गुन्हा दाखल-दोघ आरोपी पोलिसांच्या ताब्यात.
खानापूर ; खानापूर शहरातील विद्यानगर परिसरात किरकोळ वादातून एका तरुणावर चाकूने जीवघेणा हल्ला केल्याची घटना शनिवारी 11 एप्रिल रोजी सायंकाळी सुमारे 7.00 वाजण्याच्या सुमारास घडली. या प्रकरणी खानापूर पोलिस ठाण्यात गुन्हा क्रमांक 120/2026 अंतर्गत भारतीय न्याय संहिता कलम 118, 109, 351, 352 अन्वये गुन्हा दाखल करण्यात आला आहे. याप्रकरणी दोघा जणांना अटक करण्यात आले आहे.
पोलिसांकडून मिळालेल्या माहितीनुसार, फीर्यादी श्रेयस धनंजय देसाई (वय 21, रा. विद्यानगर, खानापूर) याला गेल्या महिनाभरापासून ऋषांत राजेश पुजारी या आरोपीकडून फोनवरून धमक्या दिल्या जात होत्या. “अमितचे लग्न रद्द केलेस, माझे नाव घेतलास, तुला सोडणार नाही,” अशी धमकी देत आरोपीने वारंवार त्रास दिल्याचे फिर्यादीत नमूद करण्यात आले आहे.
दि. 11 एप्रिल रोजी सकाळपासूनच आरोपीने पुन्हा फोन करून विद्यानगर येथील जुंजवाडकर यांच्या घराजवळील वडाच्या झाडाजवळ येण्यास सांगितले. त्यामुळे संध्याकाळी सुमारे 7.00 वाजता फिर्यादी श्रेयश धनंजय देसाई आपला मित्र आदर्श नागराज कोलेकर (वय 25 वर्ष , रा. विद्यानगर) व इतर मित्रासह तेथे गेला असता आरोपीने शिवीगाळ करत मारहाण करण्याचा प्रयत्न केला.
दरम्यान, आदर्श कोलेकर यांनी मध्यस्थी करण्याचा प्रयत्न केला असता आरोपीने संतापून सोबत आणलेल्या चाकूने आदर्श यांच्यावर हल्ला केला. त्यांच्या डाव्या छातीखाली, उजव्या कानाजवळ मानेवर तसेच डाव्या हातावर गंभीर वार करण्यात आले. या हल्ल्यात ते गंभीर जखमी झाले असून त्यांच्यावर बेळगाव येथील खाजगी रुग्णालयात उपचार सुरू आहेत.
या घटनेप्रकरणी खानापूर पोलिसांनी खुनाचा प्रयत्न केल्याचा गुन्हा दाखल करून आरोपी ऋषांत राजेश पुजारी व अन्य एका आरोपीला ताब्यात घेण्यात आले आहे.
ಖಾನಾಪೂರದಲ್ಲಿ ಸಣ್ಣ ವಿಷಯದ ವಾಗ್ವಾದಕ್ಕೆ ತಿರುಗಿ ಯುವಕನ ಮೇಲೆ ಚಾಕು ಹಲ್ಲೆ ; ಪ್ರಕರಣ ದಾಖಲು – ಇಬ್ಬರು ಶಂಕಿತ ಆರೋಪಿಗಳು ಪೊಲೀಸ್ ವಶಕ್ಕೆ.
ಖಾನಾಪೂರ : ಖಾನಾಪೂರ ನಗರದ ವಿದ್ಯಾನಗರ ಪ್ರದೇಶದಲ್ಲಿ ಸಣ್ಣ ವಿಷಯದ ವಾಗ್ವಾದ ವಿಕೋಪಕ್ಕೆ ತಿರುಗಿ ಒಬ್ಬ ಯುವಕನ ಮೇಲೆ ಚಾಕುವಿನಿಂದ ಇರಿದು ಜೀವಘಾತಕ ಹಲ್ಲೆ ನಡೆಸಿದ ಘಟನೆ ಶನಿವಾರ, ಏಪ್ರಿಲ್ 11 ರಂದು ಸಂಜೆ ಸುಮಾರು 7.00 ಗಂಟೆಯ ಸುಮಾರಿಗೆ ನಡೆದಿದೆ. ಈ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 120/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 118, 109, 351, 352 ಅನ್ವಯ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ದೂರುದಾರ ಶ್ರೇಯಸ್ ಧನಂಜಯ ದೇಶಾಯಿ (ವಯಸ್ಸು 21, ವಾಸ: ವಿದ್ಯಾನಗರ, ಖಾನಾಪೂರ) ಅವರಿಗೆ ಕಳೆದ ಒಂದು ತಿಂಗಳಿನಿಂದ ಋಷಾಂತ್ ರಾಜೇಶ್ ಪೂಜಾರಿ ಎಂಬ ಆರೋಪಿ ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದನು. “ಅಮಿತನ ಮದುವೆ ರದ್ದು ಮಾಡಿದ್ದೀಯ, ನನ್ನ ಹೆಸರನ್ನು ತೆಗೆದುಕೊಂಡಿದ್ದೀಯ, ನಿನ್ನನ್ನು ಬಿಡುವುದಿಲ್ಲ,” ಎಂದು ಬೆದರಿಕೆ ಹಾಕಿ ಆರೋಪಿ ಪದೇಪದೇ ಕಿರುಕುಳ ನೀಡುತ್ತಿದ್ದಾನೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.
ಏಪ್ರಿಲ್ 11 ರಂದು ಬೆಳಿಗ್ಗೆಯಿಂದಲೇ ಆರೋಪಿ ಮತ್ತೆ ಕರೆ ಮಾಡಿ ವಿದ್ಯಾನಗರದಲ್ಲಿರುವ ಜುಂಜವಾಡ್ಕರ್ ಅವರ ಮನೆಯ ಬಳಿಯ ಅಲದ ಮರದ ಸಮೀಪ ಬರಲು ಹೇಳಿದ್ದನು. ಅದರಂತೆ ಸಂಜೆ ಸುಮಾರು 7.00 ಗಂಟೆಗೆ ದೂರುದಾರ ಶ್ರೇಯಸ್ ಧನಂಜಯ ದೇಶಾಯಿ ತಮ್ಮ ಸ್ನೇಹಿತ ಆದರ್ಶ ನಾಗರಾಜ ಕೊಲೇಕರ್ (ವಯಸ್ಸು 25, ವಾಸ: ವಿದ್ಯಾನಗರ) ಹಾಗೂ ಇತರ ಸ್ನೇಹಿತರೊಂದಿಗೆ ಅಲ್ಲಿಗೆ ತೆರಳಿದಾಗ, ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದನು.
ಈ ವೇಳೆ ಆದರ್ಶ ಕೊಲೇಕರ್ ಮಧ್ಯಸ್ಥಿಕೆ ಮಾಡಲು ಪ್ರಯತ್ನಿಸಿದಾಗ, ಆರೋಪಿ ಕೋಪಗೊಂಡು ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಆದರ್ಶ ಅವರ ಮೇಲೆ ಹಲ್ಲೆ ನಡೆಸಿದನು. ಅವರ ಎಡಬದಿಯ ಎದೆಕೆಳಗೆ, ಬಲ ಕಿವಿಯ ಬಳಿಯ ಕುತ್ತಿಗೆಯಲ್ಲಿ ಹಾಗೂ ಎಡ ಕೈ ಮೇಲೆ ಗಂಭೀರವಾಗಿ ಇರಿತ ಮಾಡಲಾಗಿದೆ. ಈ ಹಲ್ಲೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಖಾನಾಪೂರ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿ ಆರೋಪಿ ಋಷಾಂತ್ ರಾಜೇಶ್ ಪೂಜಾರಿ ಹಾಗೂ ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ಹ ತನಿಖೆ ನಡೆಸುತ್ತಿದ್ದಾರೆ.


