श्री चिदंबरेश्वर जन्मोत्सवानिमित्त विविध धार्मिक कार्यक्रमांचे आयोजन ; भक्तिमय वातावरणाची तयारी पूर्ण.
खानापूर (ता. 4 नोव्हेंबर) : चिदंबरनगर येथील श्री चिदंबर देवस्थानात सोमवार दि. 10 नोव्हेंबर रोजी श्री चिदंबरेश्वरांचा जन्मोत्सव मोठ्या श्रद्धा व भक्तिभावाने साजरा करण्यात येणार असून या निमित्ताने तीन दिवस विविध धार्मिक, सांस्कृतिक व कीर्तन कार्यक्रमांचे आयोजन करण्यात आले आहे.
या कार्यक्रमांची सुरुवात रविवार दि. 9 नोव्हेंबर रोजी होणार आहे. सकाळी लघुरुद्राभिषेक, श्री मल्हारी होम यांसारखे धार्मिक विधी पार पडतील. त्यानंतर दुपारी तीन वाजता गोवावेस येथील श्री राजाराम मंदिरापासून दिंडीयात्रेला सुरुवात होईल. ही दिंडीयात्रा भक्तांच्या जयघोषात आणि टाळ-चिपळ्यांच्या गजरात चिदंबरनगर येथील श्री चिदंबर देवस्थान येथे सांगता होईल.
मुख्य जन्मोत्सव सोहळा सोमवार दि. 10 नोव्हेंबर रोजी सकाळी आयोजित करण्यात आला आहे. सकाळी लघुरुद्र, महापूजा आणि ललिता सहस्त्रनाम पठणासह सामूहिक कुंकुमार्चन होईल. सकाळी अकरा ते दुपारी एक या वेळेत प्रा. संजीव कुलकर्णी यांचे कीर्तन आणि पाळणा कार्यक्रम पार पडणार आहेत.
भक्तांसाठी दुपारी 1.00 ते रात्री 8.00 वाजेपर्यंत महाप्रसादाचे आयोजन करण्यात आले असून, संध्याकाळी सहा वाजता सुप्रसिद्ध गायक श्री महेश कुलकर्णी आणि श्री उदय देशपांडे यांची भक्तिसंगीत सेवा रंगणार आहे.
मंगळवार दि. 11 नोव्हेंबर रोजी दुपारी श्री रुद्रस्वाहाकार होम, तसेच सायंकाळी कार्तिक उत्सव, आरती आणि समारोप सोहळा होणार आहे.
देवस्थान समितीने सर्व भक्तांना आवाहन केले आहे की, सर्व कार्यक्रमांना तन-मन-धनाने सहभागी होऊन श्री चिदंबरेश्वरांच्या कृपेचे पात्र व्हावे. तसेच, सेवा अथवा देणगी देण्याची इच्छा असलेल्या भक्तांनी मंदिरात संपर्क साधावा, असे आवाहन आयोजकांच्या वतीने करण्यात आले आहे.
👉 कार्यक्रमांचा मुख्य सारांश:
दि. 9 नोव्हेंबर: लघुरुद्राभिषेक, मल्हारी होम, दिंडीयात्रा
दि. 10 नोव्हेंबर: लघुरुद्र, महापूजा, कुंकुमार्चन, कीर्तन, पाळणा, महाप्रसाद, संगीत सेवा
दि. 11 नोव्हेंबर: रुद्रस्वाहाकार होम, कार्तिक उत्सव, आरती, समारोप
🕉️ श्री चिदंबरेश्वरांच्या जन्मोत्सवाच्या निमित्ताने संपूर्ण परिसरात भक्तिमय वातावरण पसरले असून मोठ्या उत्साहाने तयारी सुरू आहे.
ಶ್ರೀ ಚಿದಂಬರೇಶ್ವರ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ — ಭಕ್ತಿಯುತ ಕಾರ್ಯಕ್ರಮಕ್ಕೆ ಪೂರ್ಣ ಸಜ್ಜು.
ಖಾನಾಪುರ (ತಾ. 4 ನವೆಂಬರ್) : ಚಿದಂಬರನಗರದ ಶ್ರೀ ಚಿದಂಬರ ದೇವಸ್ಥಾನದಲ್ಲಿ ಸೋಮವಾರ ದಿ. 10 ನವೆಂಬರ್ರಂದು ಶ್ರೀ ಚಿದಂಬರೇಶ್ವರರ ಜಯಂತಿ ಭಕ್ತಿ ಹಾಗೂ ಶ್ರದ್ಧಾಭಾವದಿಂದ ಆಚರಿಸಲಾಗುವುದು. ಈ ಪ್ರಯುಕ್ತ ಮೂರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೀರ್ತನ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮಗಳ ಆರಂಭ ಭಾನುವಾರ ದಿ. 9 ನವೆಂಬರ ರಿಂದ ಆರಂಭವಾಗಲಿದೆ. ಬೆಳಿಗ್ಗೆ ಲಘು ರುದ್ರಾಭಿಷೇಕ, ಶ್ರೀ ಮಲ್ಹಾರಿ ಹೋಮ ಮುಂತಾದ ಧಾರ್ಮಿಕ ವಿಧಿಗಳು ನಡೆಯಲಿವೆ. ನಂತರ ಮಧ್ಯಾಹ್ನ ಮೂರು ಗಂಟೆಗೆ ಗೋವಾವೇಸ್ನ ಶ್ರೀ ರಾಜಾರಾಮ ದೇವಸ್ಥಾನದಿಂದ ದಿಂಡಿ ಯಾತ್ರೆ ಆರಂಭವಾಗುತ್ತದೆ. ಭಕ್ತರ ಜಯಘೋಷ, ತಾಳ- ಘೋಷದಲ್ಲಿ ಈ ದಿಂಡಿ ಯಾತ್ರೆ ಚಿದಂಬರನಗರದ ಶ್ರೀ ಚಿದಂಬರ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ.
ಮುಖ್ಯ ಜಯಂತಿ ಉತ್ಸವ ಸೋಮವಾರ ದಿ. 10 ನವೆಂಬರ ರಂದು ಬೆಳಿಗ್ಗೆ ನಡೆಯಲಿದೆ. ಬೆಳಿಗ್ಗೆ ಲಘು ರುದ್ರಾಭಿಷೇಕ, ಮಹಾಪೂಜೆ ಹಾಗೂ ಲಲಿತಾ ಸಹಸ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರಾ. ಸಂಜೀವ ಕುಲಕರ್ಣಿ ಅವರ ಕೀರ್ತನ ಕಾರ್ಯಕ್ರಮ ನಡೆಯಲಿದೆ.
ಭಕ್ತರಿಗೆ ಮಧ್ಯಾಹ್ನ 1.00 ರಿಂದ ರಾತ್ರಿ 8.00ರವರೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಆರು ಗಂಟೆಗೆ ಪ್ರಸಿದ್ಧ ಗಾಯಕರಾದ ಶ್ರೀ ಮಹೇಶ್ ಕುಲಕರ್ಣಿ ಮತ್ತು ಶ್ರೀ ಉದಯ ದೇಶಪಾಂಡೆ ಅವರ ಭಕ್ತಿ ಸಂಗೀತ ಸೇವೆ ನಡೆಯಲಿದೆ.
ಮಂಗಳವಾರ ದಿ. 11 ನವೆಂಬರ್ರಂದು ಮಧ್ಯಾಹ್ನ ಶ್ರೀ ರುದ್ರಸ್ವಾಹಕಾರ ಹೋಮ, ಹಾಗೂ ಸಂಜೆ ಕಾರ್ತಿಕ ಉತ್ಸವ, ಆರತಿ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನ ಸಮಿತಿಯವರು ಭಕ್ತರನ್ನು “ಎಲ್ಲಾ ಕಾರ್ಯಕ್ರಮಗಳಲ್ಲಿ ತನು-ಮನ-ಧನದಿಂದ ಭಾಗವಹಿಸಿ ಶ್ರೀ ಚಿದಂಬರೇಶ್ವರರ ಕೃಪೆಗೆ ಪಾತ್ರರಾಗಿರಿ” ಎಂದು ಮನವಿ ಮಾಡಿದ್ದಾರೆ. ಸೇವೆ ಅಥವಾ ದೇಣಿಗೆ ನೀಡುವ ಇಚ್ಛೆ ಇರುವ ಭಕ್ತರು ದೇವಸ್ಥಾನವನ್ನು ಸಂಪರ್ಕಿಸಬಹುದು ಎಂದು ಆಯೋಜಕರ ಪರವಾಗಿ ತಿಳಿಸಲಾಗಿದೆ.
ಕಾರ್ಯಕ್ರಮಗಳ ಮುಖ್ಯ ಸಾರಾಂಶ:
ದಿ. 9 ನವೆಂಬರ್: ಲಘು ರುದ್ರಾಭಿಷೇಕ, ಮಲ್ಹಾರಿ ಹೋಮ, ದಿಂಡಿ ಯಾತ್ರೆ
ದಿ. 10 ನವೆಂಬರ್: ಲಘು ರುದ್ರಾಭಿಷೇಕ , ಮಹಾಪೂಜೆ, ಕುಂಕುಮಾರ್ಚನೆ, ಕೀರ್ತನ, ಪಾಳಣಾ, ಮಹಾಪ್ರಸಾದ, ಸಂಗೀತ ಸೇವೆ
ದಿ. 11 ನವೆಂಬರ್: ರುದ್ರಸ್ವಾಹಕಾರ ಹೋಮ, ಕಾರ್ತಿಕ ಉತ್ಸವ, ಆರತಿ, ಸಮಾರೋಪ
🕉️ ಶ್ರೀ ಚಿದಂಬರೇಶ್ವರರ ಜಯಂತಿಯ ಪ್ರಯುಕ್ತ ಸರ್ವತ್ರ ಭಕ್ತಿಯ ವಾತಾವರಣ ಹರಡಿದ್ದು, ಭಕ್ತರು ಉತ್ಸಾಹದಿಂದ ಸಿದ್ಧತೆ ನಡೆಸುತ್ತಿದ್ದಾರೆ.


