निट्टूर गावात प्रथमच KSRTC बससेवेचा शुभारंभ; विद्यार्थी, महिला व ज्येष्ठ नागरिकांची प्रवासाची सोय!.
खानापूर : प्रतिनिधी
खानापूर तालुक्यातील निट्टूर गावासाठी ऐतिहासिक आणि आनंदाची बातमी असून, गावात पहिल्यांदाच कर्नाटक राज्य परिवहन महामंडळाच्या (KSRTC) बससेवेचा शुभारंभ करण्यात आला आहे. खानापूर ते निट्टूर आणि निट्टूर ते खानापूर या मार्गावर बससेवा सुरू झाल्याने ग्रामस्थांची अनेक दिवसांची मागणी पूर्ण झाली आहे.
या बससेवेचा सर्वाधिक फायदा गावातील विद्यार्थी-विद्यार्थिनींना होणार आहे. कन्नड, मराठी आणि इंग्रजी माध्यमांच्या शाळांमध्ये शिक्षण घेण्यासाठी जाणाऱ्या विद्यार्थ्यांचा प्रवास आता अधिक सोयीस्कर होणार आहे. तसेच महिला, ज्येष्ठ नागरिक, नोकरदार वर्ग आणि सर्वसामान्य प्रवाशांनाही या बससेवेचा लाभ मिळणार आहे.
गावाच्या विकासाच्या दृष्टीने ही बससेवा महत्त्वपूर्ण ठरणार असून, ग्रामीण भागातील सार्वजनिक वाहतूक व्यवस्था अधिक सक्षम होण्यास मदत होणार आहे. अनेक दिवसांपासून ग्रामस्थांकडून बससेवा सुरू करण्याची मागणी केली जात होती. अखेर ही मागणी पूर्ण झाल्याने निट्टूर ग्रामस्थांमध्ये आनंदाचे वातावरण आहे.
या बससेवेसाठी प्रयत्न करणारे खानापूर तालुक्याचे आमदार विठ्ठल सोमनाथ हालगेकर, सर्व लोकप्रतिनिधी, कर्नाटक परिवहन महामंडळाचे अधिकारी व संबंधित कर्मचाऱ्यांचे निट्टूर ग्रामस्थांच्या वतीने मनःपूर्वक आभार व्यक्त करण्यात आले.
निट्टूर गावाच्या विकासाच्या वाटचालीत KSRTC बससेवेच्या रूपाने एक नवा अध्याय सुरू झाला असून, या सुविधेमुळे गावाचा खानापूरशी संपर्क अधिक सुलभ होणार आहे.
ನಿಟ್ಟೂರು ಗ್ರಾಮಕ್ಕೆ ಮೊದಲ ಬಾರಿ KSRTC ಬಸ್ ಸೇವೆ ಆರಂಭ; ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಪ್ರಯಾಣಕ್ಕೆ ಅನುಕೂಲ!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ನಿಟ್ಟೂರು ಗ್ರಾಮಕ್ಕೆ ಐತಿಹಾಸಿಕ ಹಾಗೂ ಸಂತಸದ ಸುದ್ದಿಯಾಗಿದ್ದು, ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಖಾನಾಪುರದಿಂದ ನಿಟ್ಟೂರು ಹಾಗೂ ನಿಟ್ಟೂರಿನಿಂದ ಖಾನಾಪುರ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿರುವುದರಿಂದ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಈ ಬಸ್ ಸೇವೆಯಿಂದ ಗ್ರಾಮದಲ್ಲಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕನ್ನಡ, ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ತೆರಳುವ ವಿದ್ಯಾರ್ಥಿಗಳ ಪ್ರಯಾಣ ಇನ್ನು ಮುಂದೆ ಹೆಚ್ಚು ಸುಗಮವಾಗಲಿದೆ. ಅಲ್ಲದೆ ಮಹಿಳೆಯರು, ಹಿರಿಯ ನಾಗರಿಕರು, ಉದ್ಯೋಗಸ್ಥರು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೂ ಈ ಬಸ್ ಸೇವೆಯ ಪ್ರಯೋಜನ ದೊರೆಯಲಿದೆ.
ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಈ ಬಸ್ ಸೇವೆಯು ಮಹತ್ವದ ಪಾತ್ರ ವಹಿಸಲಿದ್ದು, ಗ್ರಾಮೀಣ ಪ್ರದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ. ಕಳೆದ ಹಲವು ದಿನಗಳಿಂದ ಗ್ರಾಮಸ್ಥರು ನಿಟ್ಟೂರು ಗ್ರಾಮಕ್ಕೆ ಬಸ್ ಸೇವೆ ಆರಂಭಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದರು. ಇದೀಗ ಅವರ ಬೇಡಿಕೆ ಈಡೇರಿರುವುದರಿಂದ ನಿಟ್ಟೂರು ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಈ ಬಸ್ ಸೇವೆ ಆರಂಭಿಸಲು ಪ್ರಯತ್ನಿಸಿದ ಖಾನಾಪುರ ತಾಲ್ಲೂಕಿನ ಜನ ಪ್ರಿಯ ಶಾಸಕರಾದ ವಿಠ್ಠಲ ಸೋಮನ್ನಾ ಹಲಗೇಕರ, ಎಲ್ಲಾ ಜನಪ್ರತಿನಿಧಿಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳಿಗೆ ನಿಟ್ಟೂರು ಗ್ರಾಮಸ್ಥರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ನಿಟ್ಟೂರು ಗ್ರಾಮದ ಅಭಿವೃದ್ಧಿಯ ಪಯಣದಲ್ಲಿ KSRTC ಬಸ್ ಸೇವೆಯ ರೂಪದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಈ ಸೌಲಭ್ಯದಿಂದ ಗ್ರಾಮ ಹಾಗೂ ಖಾನಾಪುರ ಪಟ್ಟಣದ ನಡುವಿನ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಅಲ್ಲದೆ ಗ್ರಾಮಸ್ಥರ ದೈನಂದಿನ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

