 
 
सीईटी परीक्षेत ब्राह्मण विद्यार्थ्यांना जानवे काढण्यास लावणाऱ्या घटनेचा खासदार हेगडे यांच्याकडून निषेध! बेळगाव येथे सोमवारी ब्राह्मण समाज जिल्हाधिकाऱ्यांना निवेदन देणार!
खानापूर ; नुकताच सीईटी परीक्षा घेण्यात आली परंतु अनेक सीईटी परीक्षा केंद्रावर ब्राह्मण समाजातील विद्यार्थ्यांना त्यांचे जानवे काढण्यास सांगण्यात आले. त्यामुळे काही विद्यार्थ्यांनी परीक्षा दिली तर काही विद्यार्थ्यांनी जानवी काढण्यास स्पष्ट नकार देऊन परीक्षेला बहिष्कार टाकला. या संपूर्ण घटनेचा निषेध कॅनरा लोकसभा क्षेत्राचे खासदार व कर्नाटक विधानसभेचे माजी सभापती आणि माजी शिक्षण मंत्री विश्वेश्वर हेगडे कागेरी यांनी निषेध केला असून सदर अधिकाऱ्याला निलंबित करण्यात यावेत. तसेच सदर विद्यार्थ्यांची पुन्हा परीक्षा घेण्यात यावी अशी मागणी त्यांनी मुख्यमंत्री सिद्धरामया यांच्याकडे केली आहे. दरम्यान, बेळगाव जिल्ह्यातील ब्राह्मण समाज उद्या सोमवारी 21 एप्रिल रोजी सकाळी 10.30 वाजता बिदर व शिमोगा येथे घडलेल्या या निंदनीय घटनेचा निषेध करून मोर्चाद्वारे जिल्हाधिकाऱ्यांना निवेदन देणार आहे.
खासदार विश्वेश्वर हेगडे-कागेरी यांनी दिलेल्या प्रसिद्धी पत्रकात खालील प्रमाणे मागणी केली आहे. सीईटी परीक्षा केंद्रांवर विद्यार्थ्यांना त्यांचे जानवे काढून परीक्षा कक्षात प्रवेश करण्यास सांगण्यात आलेल्या अलिकडच्या घटनेचा मी तीव्र निषेध करतो. ही कृती केवळ धक्कादायकच नाही, तर भारतीय संविधानाने आपल्या सनातन धर्माला दिलेल्या मूलभूत अधिकारांचे स्पष्ट उल्लंघन देखील आहे.
सनातन धर्मात जानवे हे एक महत्त्वाचे प्रतीक आहे. अनेक हिंदू ते त्यांच्या धार्मिक पद्धतींचा अविभाज्य भाग आणि ब्राह्मण समुदायाचे पवित्र प्रतीक मानतात. परीक्षा केंद्रांवर ते जबरदस्तीने काढून टाकणे हे अक्षम्य आहे, आणि धार्मिक श्रद्धेचा घोर अपमान आहे. म्हणून, मी राज्य सरकारला या गंभीर बाबीचा त्वरित विचार करण्याची विनंती करतो. अशा अनुचित वर्तनाचे प्रदर्शन करणाऱ्या परीक्षा केंद्र अधिकाऱ्यांवर योग्य कायदेशीर कारवाई करावी. शिवाय, भविष्यात अशा घटना पुन्हा घडू नयेत यासाठी सरकारने कठोर आणि विशिष्ट मार्गदर्शक तत्त्वे तयार करावीत.
जानवे काढून टाकण्याच्या सूचनेमुळे परीक्षेला बसू न शकलेल्या विद्यार्थ्याची पुनर्परीक्षा घेण्यासाठी योग्य व्यवस्था करावी अशी मी विनंती करतो. अलिकडच्या काळात हिंदू धर्माच्या प्राचीन संस्कृतीला धोका निर्माण करणाऱ्या घटनांमध्ये वाढ होत आहे, हे खेदजनक आहे. आम्ही याचा तीव्र निषेध करतो.
मुख्यमंत्री सिद्धरामय्या यांच्या नेतृत्वाखालील कर्नाटक काँग्रेस सरकारला मी विनंती करतो की त्यांनी हे स्पष्ट करावे की त्यांचे प्रशासन सनातन धर्माला सन्मान आणि आदर देते आणि अशा चुका करणाऱ्या अधिकाऱ्यांना सेवेतून काढून टाकून सनातन धर्माची मूल्ये जपण्यास वचनबद्ध आहे.
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳನ್ನು “ಯಜ್ಞೋಪವೀತ” ( ಜನಿವಾರ) ತೆಗೆದು ಬರೆಯಲು ಒತ್ತಾಯಿಸಿದ ಘಟನೆಯನ್ನು ಸಂಸದ ಹೆಗಡೆ ಖಂಡಿಸಿದ್ದಾರೆ! ಬ್ರಾಹ್ಮಣ ಸಮುದಾಯವು ಸೋಮವಾರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ!
ಖಾನಾಪುರ; ಇತ್ತೀಚೆಗೆ ಸಿಇಟಿ ಪರೀಕ್ಷೆಗಳನ್ನು ನಡೆದು, ಆದರೆ ಅನೇಕ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ, ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ “ಯಜ್ಞೋಪವೀತ” (“ಜನಿವಾರ”) ವನ್ನು ತೆಗೆದುಹಾಕುವಂತೆ ಕೇಳಲಾಯಿತು. ಆದ್ದರಿಂದ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರೆ ಕೆಲವರು, “ಯಜ್ಞೋಪವೀತ”ವನ್ನು ತೆಗೆಯಲು ಸ್ಪಷ್ಟವಾಗಿ ನಿರಾಕರಿಸುವ ಮೂಲಕ ಪರೀಕ್ಷೆಯನ್ನು ಬಹಿಷ್ಕರಿಸಿದರು. ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಂಪೂರ್ಣ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದರಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮುದಾಯವು ಬೀದರ್ ಮತ್ತು ಶಿವಮೊಗ್ಗದಲ್ಲಿ ನಡೆದ ಈ ಖಂಡನೀಯ ಘಟನೆಯನ್ನು ನಾಳೆ, ಸೋಮವಾರ, ಏಪ್ರಿಲ್ 21 ರಂದು ಬೆಳಿಗ್ಗೆ 10.30 ಕ್ಕೆ ಪ್ರತಿಭಟಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಿದೆ.
ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಕೆಳಗಿನ ಮನವಿ ಯನ್ನು ಮಾಡಲಾಗಿದೆ…ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಜ್ಞೋಪವೀತವನ್ನು ತೆಗೆದು ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಸೂಚಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಕ್ರಮವು ಆಘಾತಕಾರಿ ಮಾತ್ರವಲ್ಲದೆ, ಭಾರತದ ಸಂವಿಧಾನವು ನಮ್ಮ ಸನಾತನ ಧರ್ಮಕ್ಕೆ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು
ಯಜ್ಞೋಪವೀತವು ಸನಾತನ ಧರ್ಮದಲ್ಲಿ ಒಂದು ಮಹತ್ವದ ಸಂಕೇತವಾಗಿದೆ. ಅನೇಕ ಹಿಂದೂಗಳು ಇದನ್ನು ತಮ್ಮ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿ ಮತ್ತು ಬ್ರಾಹ್ಮಣ ಸಮುದಾಯದ ಪವಿತ್ರ ಸಂಕೇತವಾಗಿ ಪರಿಗಣಿಸುತ್ತಾರೆ. ಪರೀಕ್ಷಾ ಕೇಂದ್ರಗಳಲ್ಲಿ ಇದನ್ನು ತೆಗೆಯಲು ಒತ್ತಾಯಿಸುವುದು ಅಕ್ಷಮ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಘೋರ ಅಪಮಾನವಾಗಿದೆ.
ಆದ್ದರಿಂದ, ಈ ಗಂಭೀರ ವಿಷಯವನ್ನು ರಾಜ್ಯ ಸರ್ಕಾರವು ತಕ್ಷಣವೇ ಪರಿಗಣಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ರೀತಿಯ ಅಸಮರ್ಪಕ ವರ್ತನೆ ತೋರಿದ ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಕಠಿಣ ಮತ್ತು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು.
ಯಜ್ಞೋಪವೀತವನ್ನು ತೆಗೆಯಲು ಸೂಚಿಸಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗೆ ಮರು ಪರೀಕ್ಷೆಯನ್ನು ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಸನಾತನ ಸಂಸ್ಕೃತಿಗೆ ಧಕ್ಕೆ ತರುವಂತಹ ಘಟನೆಗಳು ಹೆಚ್ಚುತ್ತಿರುವುದು ವಿಷಾದನೀಯ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇಂತಹ ತಪ್ಪುಗಳನ್ನು ಎಸಗುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಮೂಲಕ, ತನ್ನ ಆಡಳಿತವು ಸನಾತನ ಧರ್ಮಕ್ಕೂ ಸಮಾನ ಗೌರವ ನೀಡುತ್ತದೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
 
 
 
         
                                 
                             
 
         
         
         
        