मुसळधार पावसाने वीज व्यवस्था कोलमडली; आमदार विठ्ठलराव हलगेकरांचा हेस्कॉमला तातडीच्या कारवाईचा आदेश.
खानापूर, प्रतिनिधी :
खानापूर तालुक्यात गेल्या काही दिवसांपासून सुरू असलेल्या मुसळधार व वादळी पावसाने जनजीवन विस्कळीत झाले असून, अनेक ठिकाणी मोठमोठी झाडे उन्मळून पडल्यामुळे वीजवाहिन्यांचे मोठ्या प्रमाणावर नुकसान झाले आहे. परिणामी तालुक्यातील अनेक गावांचा वीजपुरवठा खंडित झाला असून, नागरिक, शेतकरी, व्यापारी आणि विद्यार्थ्यांना मोठ्या अडचणींचा सामना करावा लागत आहे.
तालुक्यातील गंभीर परिस्थितीची दखल घेत आमदार विठ्ठलराव हलगेकर यांनी हेस्कॉमच्या वरिष्ठ अधिकाऱ्यांशी तातडीने संपर्क साधून वीजपुरवठा पूर्ववत करण्यासाठी युद्धपातळीवर उपाययोजना राबविण्याचे निर्देश दिले.
यावेळी ग्रामीण विभाग, बेळगावचे कार्यकारी अभियंता विनोद केरूर तसेच खानापूर उपविभागाचे सहाय्यक कार्यकारी अभियंता प्रवीण बरगाले यांच्याकडून त्यांनी नुकसानग्रस्त भागांचा आणि सुरू असलेल्या दुरुस्ती कामांचा सविस्तर आढावा घेतला.
आढावा बैठकीदरम्यान आमदार हलगेकर यांनी नागरिकांच्या अडचणींचा उल्लेख करत, “सततच्या पावसामुळे अनेक गावांमध्ये अंधाराचे वातावरण निर्माण झाले आहे. नागरिकांना व शेतकऱ्यांना होणारा त्रास लक्षात घेता हेस्कॉमने अतिरिक्त मनुष्यबळ व यंत्रसामग्री तैनात करून सर्व बिघाड तातडीने दूर करावेत. कोणत्याही गावात वीजपुरवठा अनावश्यकपणे खंडित राहता कामा नये,” अशा स्पष्ट सूचना दिल्या.
यावेळी हेस्कॉमच्या अधिकाऱ्यांनी आमदारांना माहिती देताना सांगितले की, पडलेली झाडे हटविणे, तुटलेल्या वीजवाहिन्यांची दुरुस्ती, नुकसानग्रस्त खांब बदलणे आणि वीजपुरवठा सुरळीत करण्याचे काम विविध पथकांकडून सुरू आहे. दुर्गम भागातही कर्मचारी सातत्याने कार्यरत असून, शक्य तितक्या कमी वेळेत सर्व गावांमध्ये वीजपुरवठा पूर्ववत करण्यासाठी प्रयत्न सुरू आहेत.
सध्या अनेक भागांमध्ये शेतीपंप बंद असल्याने शेतकऱ्यांचे मोठे नुकसान होत आहे. तसेच पिण्याच्या पाण्याचा पुरवठा, लहान उद्योग, व्यावसायिक आस्थापने आणि विद्यार्थ्यांच्या ऑनलाइन कामकाजावरही वीज खंडित झाल्याचा परिणाम जाणवत आहे.
दरम्यान, आमदार हलगेकर यांनी घेतलेल्या तातडीच्या आढाव्यानंतर हेस्कॉम प्रशासनाने दुरुस्तीच्या कामांना अधिक गती दिल्याची माहिती मिळत असून, उर्वरित गावांमध्येही लवकरच वीजपुरवठा सुरळीत होईल, अशी अपेक्षा नागरिकांकडून व्यक्त केली जात आहे. प्रशासनानेही नागरिकांना सहकार्य करण्याचे आणि वीजवाहिन्या तुटलेल्या किंवा झाडे कोसळल्याचे आढळल्यास त्वरित हेस्कॉमला माहिती देण्याचे आवाहन केले आहे.
ಧಾರಾಕಾರ ಮಳೆಯಿಂದ ವಿದ್ಯುತ್ ವ್ಯವಸ್ಥೆಯಲ್ಲಿ ವ್ಯತ್ಯಯ; ತಕ್ಷಣದ ಕ್ರಮಕ್ಕೆ ಹೆಸ್ಕಾಂಗೆ ಶಾಸಕ ವಿಠ್ಠಲರಾವ್ ಹಲಗೇಕರ ಸೂಚನೆ.
ಖಾನಾಪುರ, ಪ್ರತಿನಿಧಿ : ಖಾನಾಪುರ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಹಾಗೂ ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ಕಡೆಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಮಾರ್ಗಗಳಿಗೆ ಭಾರೀ ಹಾನಿಯಾಗಿದೆ. ಇದರ ಪರಿಣಾಮವಾಗಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು, ರೈತರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ತಾಲ್ಲೂಕಿನ ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿದ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಹೆಸ್ಕಾಂನ ಹಿರಿಯ ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸಿ, ವಿದ್ಯುತ್ ಪೂರೈಕೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿನೋದ್ ಕೆರೂರ್ ಹಾಗೂ ಖಾನಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್ ಬರ್ಗಾಳೆ ಅವರಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ಪ್ರಸ್ತುತ ನಡೆಯುತ್ತಿರುವ ದುರಸ್ತಿ ಕಾಮಗಾರಿಗಳ ಕುರಿತು ಅವರು ಸವಿಸ್ತಾರ ಮಾಹಿತಿ ಪಡೆದುಕೊಂಡರು.
ಪರಿಶೀಲನಾ ಸಭೆಯಲ್ಲಿ ಶಾಸಕ ಹಲಗೇಕರ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಉಲ್ಲೇಖಿಸಿ, “ನಿರಂತರ ಮಳೆಯಿಂದ ಅನೇಕ ಗ್ರಾಮಗಳು ಕತ್ತಲೆಯಲ್ಲಿವೆ. ಸಾರ್ವಜನಿಕರು ಹಾಗೂ ರೈತರು ಅನುಭವಿಸುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹೆಸ್ಕಾಂ ಹೆಚ್ಚುವರಿ ಸಿಬ್ಬಂದಿ ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ನಿಯೋಜಿಸಿ ಎಲ್ಲಾ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಯಾವುದೇ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಅನಗತ್ಯವಾಗಿ ಸ್ಥಗಿತವಾಗಿರಬಾರದು,” ಎಂದು ಸ್ಪಷ್ಟ ನಿರ್ದೇಶನ ನೀಡಿದರು.
ಈ ವೇಳೆ ಹೆಸ್ಕಾಂ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡುತ್ತಾ, ಉರುಳಿಬಿದ್ದ ಮರಗಳನ್ನು ತೆರವುಗೊಳಿಸುವುದು, ತುಂಡಾದ ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡುವುದು, ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು ಹಾಗೂ ವಿದ್ಯುತ್ ಪೂರೈಕೆಯನ್ನು ಸುಗಮಗೊಳಿಸುವ ಕೆಲಸವನ್ನು ವಿವಿಧ ತಂಡಗಳು ನಿರಂತರವಾಗಿ ನಡೆಸುತ್ತಿವೆ ಎಂದು ತಿಳಿಸಿದರು. ದುರ್ಗಮ ಪ್ರದೇಶಗಳಲ್ಲಿಯೂ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಪ್ರಸ್ತುತ ಅನೇಕ ಪ್ರದೇಶಗಳಲ್ಲಿ ಕೃಷಿ ಪಂಪ್ಗಳು ಸ್ಥಗಿತಗೊಂಡಿರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಕುಡಿಯುವ ನೀರಿನ ಪೂರೈಕೆ, ಸಣ್ಣ ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಆನ್ಲೈನ್ ಕಾರ್ಯಚಟುವಟಿಕೆಗಳ ಮೇಲೆಯೂ ವಿದ್ಯುತ್ ವ್ಯತ್ಯಯದ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದರ ಮಧ್ಯೆ ಶಾಸಕ ಹಲಗೇಕರ ಅವರು ನಡೆಸಿದ ತುರ್ತು ಪರಿಶೀಲನೆಯ ನಂತರ ಹೆಸ್ಕಾಂ ಆಡಳಿತವು ದುರಸ್ತಿ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಿರುವ ಮಾಹಿತಿ ಲಭ್ಯವಾಗಿದ್ದು, ಉಳಿದ ಗ್ರಾಮಗಳಲ್ಲಿಯೂ ಶೀಘ್ರದಲ್ಲೇ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಆಡಳಿತವು ಸಹ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದು, ಎಲ್ಲಿಯಾದರೂ ವಿದ್ಯುತ್ ತಂತಿಗಳು ತುಂಡಾಗಿರುವುದು ಅಥವಾ ಮರಗಳು ವಿದ್ಯುತ್ ಮಾರ್ಗಗಳ ಮೇಲೆ ಬಿದ್ದಿರುವುದು ಕಂಡುಬಂದರೆ ತಕ್ಷಣವೇ ಹೆಸ್ಕಾಂಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.

