खानापूर तालुका दुष्काळग्रस्त घोषित करा; शेतकऱ्यांना तातडीने मदत द्या : खानापूर म.ए. समितीचे तहसीलदारांना निवेदन.
खानापूर : प्रतिनिधी
यावर्षी अत्यल्प पाऊस झाल्याने खानापूर तालुक्यातील खरीप पिके करपून गेली असून शेतकरी आर्थिक संकटात सापडला आहे. त्यामुळे खानापूर तालुका दुष्काळग्रस्त म्हणून घोषित करून शेतकऱ्यांना आवश्यक ती मदत तातडीने जाहीर करावी, अशी मागणी खानापूर तालुका महाराष्ट्र एकीकरण समितीच्या वतीने करण्यात आली.

यासंदर्भात शुक्रवार, दि. 25 सप्टेंबर रोजी समितीच्या पदाधिकाऱ्यांनी खानापूर तहसीलदारांना निवेदन सादर केले….
निवेदनात म्हटले आहे की, खानापूर तालुक्यात पावसाचे प्रमाण मोठ्या प्रमाणात घटले असून भूजल पातळी आणि जमिनीतील ओलावा यांसारख्या निकषांवरूनही परिस्थिती गंभीर असल्याचे दिसून येत आहे. तातडीने प्रशासकीय हस्तक्षेप न झाल्यास ग्रामीण भागातील शेतकरी व कष्टकरी कुटुंबांवर मोठे आर्थिक संकट ओढवण्याची शक्यता आहे.

तालुक्यातील सर्व गावांमध्ये पिकांच्या नुकसानीचे व पावसाच्या कमतरतेचे तातडीने मूल्यांकन करावे, तसेच प्रत्यक्ष शेतपाहणी करून दूरसंवेदन तंत्रज्ञानाच्या माध्यमातून सर्वेक्षण करण्यात यावे, अशी मागणी करण्यात आली आहे.
या मूल्यांकनाच्या आधारे खानापूर तालुका अधिकृतपणे दुष्काळग्रस्त क्षेत्र म्हणून घोषित करण्याची प्रक्रिया तातडीने पूर्ण करावी आणि राज्य शासनाकडे अधिकृत प्रस्ताव पाठवून मदतनिधी उपलब्ध करून द्यावा, अशी मागणी समितीने केली.
तसेच शेतकऱ्यांचे आपत्कालीन कृषी कर्ज माफ करावे, पुढील 7 ते 8 महिन्यांसाठी पिण्याच्या पाण्याचा सुरळीत पुरवठा सुनिश्चित करण्यासाठी तातडीच्या उपाययोजना कराव्यात आणि जनावरांसाठी छावण्या उभाराव्यात, अशी मागणीही निवेदनातून करण्यात आली.
खानापूर तालुक्यातील नागरिक व शेतकरी संकटाच्या काळात प्रशासनाकडे आशेने पाहत असून, शासनाची मदत बाधित शेतकऱ्यांपर्यंत कोणत्याही विलंबाशिवाय पोहोचण्यासाठी प्रशासनाने जलद व संवेदनशीलपणे कार्यवाही करावी, असे समितीने निवेदनात म्हटले आहे.
यावेळी अध्यक्ष गोपाळराव देसाई, माजी आमदार दिगंबरराव पाटील, कार्याध्यक्ष मुरलीधर पाटील, सरचिटणीस आबासाहेब दळवी, गोपाळराव पाटील, मारुती परमेकर, पांडुरंग सावंत, प्रकाश चव्हाण, संजीव पाटील, धनंजय पाटील, राजाराम देसाई, पुंडलिक पाटील, बाळाराम शेलार, रामचंद्र गावकर, रुक्माना झुंजवाडकर, राजेंद्र कुलम, म्हात्रु धबाले, मारुती गुरव आदी उपस्थित होते.
ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರಿಗೆ ತುರ್ತಾಗಿ ಪರಿಹಾರ ನೀಡಿ; ಖಾನಾಪುರ ಮ.ಎ. ಸಮಿತಿಯಿಂದ ತಹಶೀಲ್ದಾರರಿಗೆ ಮನವಿ.
ಖಾನಾಪುರ : ಪ್ರತಿನಿಧಿ
ಈ ವರ್ಷ ಅತ್ಯಲ್ಪ ಮಳೆಯಾಗಿರುವುದರಿಂದ ಖಾನಾಪುರ ತಾಲೂಕಿನ ಮುಂಗಾರು ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಅಗತ್ಯವಾದ ನೆರವನ್ನು ತುರ್ತಾಗಿ ಘೋಷಿಸಬೇಕು ಎಂದು ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.
ಈ ಕುರಿತು ಶುಕ್ರವಾರ, ದಿ. 25 ಸೆಪ್ಟೆಂಬರ್ ರಂದು ಸಮಿತಿಯ ಪದಾಧಿಕಾರಿಗಳು ಖಾನಾಪುರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ತಿಳಿಸಿರುವಂತೆ, ಖಾನಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದ್ದು, ಅಂತರ್ಜಲ ಮಟ್ಟ ಹಾಗೂ ಮಣ್ಣಿನಲ್ಲಿರುವ ತೇವಾಂಶ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೂ ಪರಿಸ್ಥಿತಿ ಗಂಭೀರವಾಗಿರುವುದು ಕಂಡುಬರುತ್ತಿದೆ. ತಕ್ಷಣವೇ ಆಡಳಿತಾತ್ಮಕ ಹಸ್ತಕ್ಷೇಪ ಮಾಡದಿದ್ದರೆ ಗ್ರಾಮೀಣ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಮೇಲೆ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬೆಳೆ ಹಾನಿ ಹಾಗೂ ಮಳೆಯ ಕೊರತೆಯ ಕುರಿತು ತುರ್ತಾಗಿ ಮೌಲ್ಯಮಾಪನ ನಡೆಸಬೇಕು. ಅಲ್ಲದೆ, ನೇರವಾಗಿ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ದೂರಸಂವೇದಿ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಮೌಲ್ಯಮಾಪನದ ಆಧಾರದ ಮೇಲೆ ಖಾನಾಪುರ ತಾಲೂಕನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ರಾಜ್ಯ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿ, ಪರಿಹಾರ ನಿಧಿಯನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಅದೇ ರೀತಿ ರೈತರ ತುರ್ತು ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಮುಂದಿನ 7 ರಿಂದ 8 ತಿಂಗಳ ಅವಧಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಜಾನುವಾರುಗಳಿಗಾಗಿ ಗೋಶಾಲೆಗಳನ್ನು ಸ್ಥಾಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಖಾನಾಪುರ ತಾಲೂಕಿನ ನಾಗರಿಕರು ಹಾಗೂ ರೈತರು ಸಂಕಷ್ಟದ ಸಂದರ್ಭದಲ್ಲಿ ಆಡಳಿತದತ್ತ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಸರ್ಕಾರದ ನೆರವು ಬಾಧಿತ ರೈತರನ್ನು ಯಾವುದೇ ವಿಳಂಬವಿಲ್ಲದೆ ತಲುಪುವಂತೆ ಆಡಳಿತವು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ವತಿಯಿಂದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಗೋಪಾಳರಾವ್ ದೇಸಾಯಿ, ಮಾಜಿ ಶಾಸಕ ದಿಗಂಬರರಾವ್ ಪಾಟೀಲ, ಕಾರ್ಯಾಧ್ಯಕ್ಷ ಮುರಳೀಧರ ಪಾಟೀಲ, ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ, ಗೋಪಾಳರಾವ್ ಪಾಟೀಲ, ಮಾರುತಿ ಪರಮೇಕರ್, ಪಾಂಡುರಂಗ ಸಾವಂತ್, ಪ್ರಕಾಶ್ ಚವ್ಹಾಣ್, ಸಂಜೀವ್ ಪಾಟೀಲ, ಧನಂಜಯ ಪಾಟೀಲ, ರಾಜಾರಾಮ ದೇಸಾಯಿ, ಪುಂಡಲಿಕ ಪಾಟೀಲ, ಬಾಳಾರಾಮ ಶೇಲಾರ್, ರಾಮಚಂದ್ರ ಗಾವಕರ್, ರುಕ್ಮಾನಾ ಝುಂಜವಾಡ್ಕರ್, ರಾಜೇಂದ್ರ ಕುಲಮ, ಮಾತ್ರು ಧಬಾಲೆ, ಮಾರುತಿ ಗುರವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



