सामूहिक स्मशानभूमीत अतिक्रमण करून रस्ता काम सुरू; कारवाईसाठी जिल्हाधिकाऱ्यांकडे तक्रार.
खानापूर : तालुक्यातील हलकर्णी व गांधीनगर गावातील मराठा, गोसावी, भुवी-वड्डर तसेच अनुसूचित जाती-जमाती समाजासाठी असलेल्या सामूहिक सार्वजनिक स्मशानभूमीच्या जागेत काही राजकीय प्रभावशाली व्यक्तींकडून कथितरित्या कायदेशीर परवानगीशिवाय अतिक्रमण करून रस्ता काम करण्यात येत असल्याचा आरोप करण्यात आला आहे.
या प्रकरणी सर्व समाजाच्या वतीने यापूर्वी २० जुलै २०२६ रोजी खानापूर तहसीलदारांकडे तक्रार अर्ज देण्यात आला होता. तहसीलदारांनीही या विषयाची माहिती जिल्हाधिकाऱ्यांना पत्राद्वारे दिल्याचे तक्रारदारांनी म्हटले आहे. मात्र, अद्याप संबंधित काम बंद झाले नसल्याने नागरिकांमध्ये नाराजी व्यक्त होत आहे.
या पार्श्वभूमीवर हलकर्णी व गांधीनगर येथील नागरिकांनी आज गुरुवारी २० ऑगस्ट रोजी बेळगाव जिल्हाधिकाऱ्यांकडे तक्रार अर्ज साद करून स्मशानभूमीतील कथित अतिक्रमणाची तातडीने चौकशी करण्याची मागणी केली आहे.
सदर अतिक्रमण तातडीने हटवून स्मशानभूमीची जागा संरक्षित करावी तसेच अतिक्रमण व रस्ता कामात सहभागी असलेल्या संबंधित व्यक्तींवर कायद्यानुसार कारवाई करावी, अशी मागणी निवेदनातून करण्यात आली आहे.
या तक्रारीच्या प्रती कर्नाटक लोकायुक्त, बंगळुरू यांच्याकडेही पाठविण्यात आल्या आहेत. तक्रारीसोबत तहसीलदारांना यापूर्वी दिलेल्या अर्जाची तसेच तहसीलदारांनी जिल्हाधिकाऱ्यांना दिलेल्या पत्राची प्रत जोडण्यात आली आहे.
यावेळी भाजपाचे युवा मोर्चा जिल्हा उपाध्यक्ष पंडित ओगले, सागर अष्टेकर, कुबेर नाईक, हरीश शीलवंत, मंगलदास गोसावी, एडवोकेट आकाश अथनीकर, बळीराम वांद्रे, राकेश मुदगल, प्रथमेश बुवाजी, राहुल बजंत्री आदीजण उपस्थित होते.
ಸಾಮೂಹಿಕ ಸ್ಮಶಾನಭೂಮಿಯಲ್ಲಿ ಅತಿಕ್ರಮಣ ಮಾಡಿ ರಸ್ತೆ ಕಾಮಗಾರಿಗೆ ಚಾಲನೆ; ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು.
ಖಾನಾಪುರ : ತಾಲ್ಲೂಕಿನ ಹಲಕರ್ಣಿ ಹಾಗೂ ಗಾಂಧಿನಗರ ಗ್ರಾಮಗಳ ಮರಾಠಾ, ಗೋಸಾವಿ, ಭುವಿ-ವಡ್ಡರ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಸಮಾಜದವರು ಬಳಸುತ್ತಿರುವ ಸಾಮೂಹಿಕ ಸಾರ್ವಜನಿಕ ಸ್ಮಶಾನಭೂಮಿಯ ಜಾಗದಲ್ಲಿ ಕೆಲವು ರಾಜಕೀಯ ಪ್ರಭಾವಶಾಲಿ ವ್ಯಕ್ತಿಗಳು ಕಾನೂನುಬದ್ಧ ಅನುಮತಿ ಇಲ್ಲದೆ ಅತಿಕ್ರಮಣ ಮಾಡಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸರ್ವ ಸಮಾಜದ ವತಿಯಿಂದ ಈ ಹಿಂದೆ 20 ಜುಲೈ 2026ರಂದು ಖಾನಾಪುರ ತಹಶೀಲ್ದಾರ್ ಅವರಿಗೆ ದೂರು ಅರ್ಜಿ ಸಲ್ಲಿಸಲಾಗಿತ್ತು. ಈ ವಿಷಯದ ಕುರಿತು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಆದರೆ, ಇದುವರೆಗೂ ಸಂಬಂಧಿತ ಕಾಮಗಾರಿ ಚಾಲನೆಯಲ್ಲಿದು ಅದು ಸ್ಥಗಿತಗೊಂಡಿಲ್ಲ. ಇದರಿಂದ ಸ್ಥಳೀಯ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಹಲಕರ್ಣಿ ಹಾಗೂ ಗಾಂಧಿನಗರ ಗ್ರಾಮದ ನಾಗರಿಕರು ಇಂದು ಗುರುವಾರ 20 ಆಗಸ್ಟ್ ರಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ಅರ್ಜಿ ಸಲ್ಲಿಸಿ, ಸ್ಮಶಾನಭೂಮಿಯಲ್ಲಿ ನಡೆದಿರುವ ಅತಿಕ್ರಮಣದ ಕುರಿತು ತುರ್ತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸ್ಮಶಾನಭೂಮಿಯ ಜಾಗದಲ್ಲಿರುವ ಅತಿಕ್ರಮಣವನ್ನು ಕೂಡಲೇ ತೆರವುಗೊಳಿಸಿ, ಸ್ಮಶಾನಭೂಮಿಯ ಜಾಗವನ್ನು ಸಂರಕ್ಷಿಸಬೇಕು. ಅಲ್ಲದೆ, ಅತಿಕ್ರಮಣ ಹಾಗೂ ರಸ್ತೆ ಕಾಮಗಾರಿಯಲ್ಲಿ ಭಾಗಿಯಾಗಿರುವ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ದೂರಿನ ಪ್ರತಿಗಳನ್ನು ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಅವರಿಗೂ ಕಳುಹಿಸಲಾಗಿದೆ. ದೂರಿನೊಂದಿಗೆ ಈ ಹಿಂದೆ ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನು ಹಾಗೂ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಪತ್ರದ ಪ್ರತಿಯನ್ನೂ ಲಗತ್ತಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಓಗಲೆ, ಸಾಗರ ಅಷ್ಟೇಕರ, ಕುಬೇರ ನಾಯ್ಕ, ಹರೀಶ ಶೀಲವಂತ, ಮಂಗಲದಾಸ ಗೋಸಾವಿ, ಅಡ್ವೊಕೇಟ್ ಆಕಾಶ ಅಥಣೀಕರ, ಬಲರಾಮ ವಾಂದ್ರೆ, ರಾಕೇಶ್ ಮುದಗಲ್, ಪ್ರಥಮೇಶ್ ಬುವಾಜಿ, ರಾಹುಲ್ ಬಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



