जिल्हा मध्यवर्ती सहकारी बँकेला येत्या पाच वर्षात देशात पहिल्या क्रमांकावर नेण्याचे लक्ष ; अण्णासाहेब जोल्ले.
खानापूर, ता. 26 : जिल्हा मध्यवर्ती सहकारी बँक ही अग्रगण्य संस्था असून येत्या पाच वर्षांत बँकेला देशात पहिल्या क्रमांकावर नेण्याचे लक्ष्य राबविण्यात येणार आहे. तसेच बँकेच्या एकूण ठेवींचे प्रमाण वाढवून ₹10,000 कोटींचा टप्पा पार करण्याचा संकल्प असून यासाठी कृतिशील आराखडा तयार करण्यात आला आहे, असे प्रतिपादन जिल्हा मध्यवर्ती सहकारी बँकेचे अध्यक्ष अण्णासाहेब जोल्ले यांनी केले. ते खानापूर येथे मंगळवारी (ता. 25 नोव्हेंबर) रोजी आयोजित सत्कार व मार्गदर्शन कार्यक्रमात बोलत होते.
सहकारी बँकांसाठी धोरणात्मक योजना…
यावेळी पुढे बोलताना जोल्ले म्हणाले की,
खानापूर तालुक्यातील सहकारी संस्था या केवळ कर्ज व ठेवीपुरत्याच मर्यादित न ठेवता जीवन विमा, आरोग्य विमा, बिगर शेती कर्ज योजना, लहान व मध्यम शेतकरी वर्गासाठी टॅक्टर व पॉवर टिलर सुविधा अशा विविध सेवा बँकेमार्फत उपलब्ध करून देत ग्राहकवर्गापर्यंत उच्च दर्जाची सातत्यपूर्ण सेवा पोहोचवली जाईल. सहकाराच्या बळावर तालुक्याचा सर्वांगीण विकास साधणे हेच आपले उद्दिष्ट आहे.
सत्कार सोहळ्याने कार्यक्रमाला उत्साह…
कार्यक्रमाच्या प्रारंभी मान्यवरांच्या हस्ते दीप प्रज्वलन करण्यात आले. यानंतर खानापूर तालुक्यातील सर्व प्राथमिक कृषी पतसंघ व विविध सहकारी संस्थांच्या अध्यक्ष, उपाध्यक्ष व संचालक मंडळाच्या वतीने अण्णासाहेब जोल्ले यांचा भव्य सत्कार करण्यात आला.
“पुढील पाच वर्षांत सहकार क्षेत्राला मजबुती” – अरविंद पाटील…
कार्यक्रमात प्रास्ताविक करताना माजी आमदार व जिल्हा मध्यवर्ती बँकेचे संचालक अरविंद पाटील म्हणाले,
माझी संचालकपदी निवड करून सहकार क्षेत्राला सेवा करण्याची संधी दिल्याबद्दल मी तालुक्यातील सर्व प्राथमिक कृषी पतसंघ, सहकारी बँका, अध्यक्ष व संचालकांचा मनापासून ऋणी आहे. आगामी पाच वर्षांत तालुक्यातील सहकारी संस्थांची बळकटी आणि आर्थिक मजबुतीसाठी सर्वोत्तम प्रयत्न केले जातील.
कार्यक्रमाचे सूत्रसंचालन विठ्ठल हिंडलगेकर यांनी केले.
सहकारी संस्थांच्या समस्या ऐकून आश्वासन..
कार्यक्रमादरम्यान इटगी, अवरोळी, खानापूर, बिडी, चिकमन्नोळी, इदलहोंड, बैलूर आदी गावांतील प्राथमिक कृषी पतसंघांचे अध्यक्ष यांनी आपल्या समस्या मांडल्या.
यावर प्रतिसाद देताना अण्णासाहेब जोल्ले यांनी सांगितले की,
सर्व मांडलेल्या अडचणी व मागण्यांचे निराकरण प्राधान्याने करून लवकरच मार्गी लावण्यात येईल..
मान्यवरांची उपस्थिती…
व्यासपीठावर श्रीशैल माटोली, बाबुराव देसाई, जनरल मॅनेजर शिव बागेवाडी, बँक अधिकारी एम. जी. कलावंत, नारायण कार्वेकर, सुरेश देसाई, प्रकाश गावडे यांसह तालुक्यातील सर्व सहकारी संस्था व कृषी पतसंघांचे अध्यक्ष, संचालक मंडळ सदस्य, कर्मचारीवर्ग, हितचिंतक, सहकारी संघांचे पदाधिकारी, नागरिक मोठ्या संख्येने उपस्थित होते.
खानापूर तालुक्यातील सहकार क्षेत्राला नव्या उंचीवर नेण्याचा संकल्प या कार्यक्रमातून दृढ करण्यात आला. कार्यक्रम यशस्वीपणे व उत्साहात पार पडला.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪ್ರಥಮ ಸ್ಥಾನಕ್ಕೆ ಯರುವ ಗುರಿ : ಅಣ್ಣಾಸಾಹೇಬ ಜೋಲ್ಲೇ
ಖಾನಾಪುರ, ತಾ. 25 : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಗ್ರಗಣ್ಯ ಸಂಸ್ಥೆಯಾಗಿದ್ದು ಮುಂದಿನ ಐದು ವರ್ಷಗಳ ಒಳಗೆ ಬ್ಯಾಂಕ ದೇಶದಲ್ಲಿ ಪ್ರಥಮ ಸ್ಥಾನಕ್ಕೆ ತರುವ ಗುರಿಯನ್ನು ಜಾರಿಗೆ ತರಲಾಗುವುದು. ಜೊತೆಗೆ ಬ್ಯಾಂಕಿನ ಒಟ್ಟು ಠೇವಣಿಗಳ ಪ್ರಮಾಣವನ್ನು ಹೆಚ್ಚಿಸಿ ₹10,000 ಕೋಟಿಯ ಗುರಿಯನ್ನು ತಲುಪಲು ಸಂಕಲ್ಪ ಮಾಡಲಾಗಿದೆ. ಇದಕ್ಕಾಗಿ ಕ್ರಿಯಾಶೀಲ ಯೋಜನೆ ರೂಪಿಸಲಾಗಿದೆ, ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೇ ಅವರು ಪ್ರತಿಪಾದಿಸಿದರು.
ಅವರು ಖಾನಾಪುರದಲ್ಲಿ ಮಂಗಳವಾರ (ತಾ. 25 ನವೆಂಬರ್) ಆಯೋಜಿಸಿದ ಸತ್ಕಾರ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಹಕಾರಿ ಬ್ಯಾಂಕ್ಗಳಿಗೆ ತಂತ್ರಾತ್ಮಕ ಯೋಜನೆ…
ಮುಂದೆ ಮಾತನಾಡಿದ ಜೋಲ್ಲೇ, ಖಾನಾಪುರ ತಾಲ್ಲೂಕಿನ ಸಹಕಾರಿ ಸಂಸ್ಥೆಗಳು ಸಾಲ–ಠೇವಣಿಗಳಿಗೆ ಮಾತ್ರ ಸೀಮಿತವಾಗದೆ ಜೀವನ ವಿಮೆ, ಆರೋಗ್ಯ ವಿಮೆ, ಬಿಗರ್ ಕೃಷಿ ಸಾಲ ಯೋಜನೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಟ್ರಾಕ್ಟರ್ ಮತ್ತು ಪವರ್ಟಿಲ್ಲರ್ ಸೌಲಭ್ಯ ಸೇರಿದಂತೆ ಹಲವು ಸೇವೆಗಳನ್ನು ಬ್ಯಾಂಕಿನ ಮೂಲಕ ಲಭ್ಯ ಮಾಡಿಸಿ ಗ್ರಾಹಕರಿಗೆ ಉನ್ನತ ಮಟ್ಟದ ನಿರಂತರ ಸೇವೆ ಒದಗಿಸಲಾಗುವುದು. ಸಹಕಾರದ ಬಲದ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಸಾಧಿಸುವುದೇ ನಮ್ಮ ಧ್ಯೇಯವಾಗಿದೆ ಎಂದರು.
ಸತ್ಕಾರ ಸಮಾರಂಭದಿಂದ ಕಾರ್ಯಕ್ರಮಕ್ಕೆ ಉತ್ಸಾಹ…
ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರ ಹಸ್ತದಿಂದ ದೀಪ ಪ್ರಜ್ವಲನ ನೆರವೇರಿತು.
ತದನಂತರ ಖಾನಾಪುರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಸಂಘ ಮತ್ತು ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರ ವತಿಯಿಂದ ಅಣ್ಣಾಸಾಹೇಬ ಜೋಲ್ಲೇ ಅವರ ಭವ್ಯ ಸತ್ಕಾರ ನಡೆಯಿತು.
“ಮುಂದಿನ ಐದು ವರ್ಷಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಬಲ” – ಅರವಿಂದ ಪಾಟೀಲ
ಕಾರ್ಯಕ್ರಮದ ಪ್ರಸ್ತಾವನೆಯಲ್ಲಿ ಮಾತನಾಡಿದ ಮಾಜಿ ಶಾಸಕರು ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಅರವಿಂದ ಪಾಟೀಲ,
ನನ್ನನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕಾಗಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಸಂಘ, ಸಹಕಾರಿ ಬ್ಯಾಂಕ್ಗಳು, ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ನಾನು ಮನಃಪೂರ್ವಕ ಋಣಿಯಾಗಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ತಾಲ್ಲೂಕಿನ ಸಹಕಾರಿ ಸಂಸ್ಥೆಗಳ ಬಲಪಡಿಸಲು ಮತ್ತು ಆರ್ಥಿಕ ದೃಢತೆಗೆ ಶ್ರೇಷ್ಠ ಪ್ರಯತ್ನಗಳನ್ನು ಮಾಡಲಿದ್ದೇವೆ.
ಕಾರ್ಯಕ್ರಮದ ಸೂತ್ರಸಂಚಾಲನವನ್ನು ವಿಠ್ಠಲ ಹಿಂಡಲಗೇಕರ ಅವರು ನಿರ್ವಹಿಸಿದರು.
ಸಹಕಾರಿ ಸಂಸ್ಥೆಗಳ ಸಮಸ್ಯೆ ಆಲಿಸಿ ಭರವಸೆ…
ಕಾರ್ಯಕ್ರಮದ ವೇಳೆ ಇಟಗಿ, ಅವರೋಳಿ, ಖಾನಾಪುರ, ಬೀಡಿ, ಚಿಕ್ಕಮನ್ನೋಳಿ, ಇದಲಹೊ೦ಡ, ಬೈಲೂರು ಮುಂತಾದ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಸಂಘಗಳ ಅಧ್ಯಕ್ಷರು ತಮ್ಮ ಸಮಸ್ಯೆಗಳನ್ನು ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡುತ್ತ ಅಣ್ಣಾಸಾಹೇಬ ಜೋಲ್ಲೇ :
ಎಲ್ಲಾ ಮಂಡಿಸಲಾದ ಅಡಚಣೆಗಳು ಹಾಗೂ ಬೇಡಿಕೆಗಳ ಪರಿಹಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ ಮತ್ತು ಬಹುಬೇಗ ಅದನ್ನು ನಿವಾರಿಸಲಾಗುವುದು…
ಗಣ್ಯರ ಹಾಜರಿ…
ವೇದಿಕೆಯಲ್ಲಿ ಶ್ರೀಶೈಲ ಮಾಟೋಳಿ, ಬಾಬುರಾವ ದೇಸಾಯಿ, ಜನರಲ್ ಮ್ಯಾನೇಜರ್ ಶಿವ ಬಾಗೇವಾಡಿ, ಬ್ಯಾಂಕ್ ಅಧಿಕಾರಿ ಎಂ. ಜಿ. ಕಲಾವಂತ, ನರಾಯಣ ಕಾರ್ವೇಕರ್, ಸುರೇಶ ದೇಸಾಯಿ, ಪ್ರಕಾಶ ಗಾವಡೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಸಹಕಾರಿ ಸಂಸ್ಥೆಗಳು ಹಾಗೂ ಕೃಷಿ ಪತ್ತಸಂಘಗಳ ಅಧ್ಯಕ್ಷರು, ನಿರ್ದೇಶಕ ಮಂಡಳಿಯ ಸದಸ್ಯರು, ಸಿಬ್ಬಂದಿ, ಹಿತೈಷಿಗಳು, ಸಹಕಾರಿ ಸಂಘಗಳ ಪದಾಧಿಕಾರಿಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ಖಾನಾಪುರ ತಾಲ್ಲೂಕಿನ ಸಹಕಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ತರುವ ಸಂಕಲ್ಪ ಮತ್ತಷ್ಟು ದೃಢಪಡಿಸಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಉತ್ಸಾಹದಿಂದ ಮುಕ್ತಾಯವಾಯಿತು.

