खानापूर : उद्या मेदर लक्ष्मी मंदिराचा कळसारोहण व मूर्ती प्रतिष्ठापना सोहळा व महाप्रसादाचे आयोजन
खानापूर ; खानापूर शहरातील प्राचीन मेदर लक्ष्मी मंदिराचा कळसारोहण व मूर्ती प्रतिष्ठापना सोहळा उद्या गुरुवार, दि. 14 ऑगस्ट 2025 रोजी भव्य उत्साहात पार पडणार आहे. या सोहळ्यानिमित्त सकाळी धार्मिक विधी, होम–हवन आणि कळसारोहणाचा कार्यक्रम होणार असून दुपारी 12 ते सायंकाळी 6 वाजेपर्यंत महाप्रसादाचे आयोजन करण्यात आले आहे. सर्व भाविकांनी या सोहळ्याचा व महाप्रसादाचा लाभ घ्यावा, असे आवाहन खानापूर लक्ष्मी यात्रा समितीच्या वतीने ज्येष्ठ सदस्य प्रकाश देशपांडे यांनी केले आहे. आज आयोजित बैठकीत यात्रा समितीचे अध्यक्ष नामदेव गुरव, माजी नगराध्यक्ष प्रतापराव सरदेसाई, सदस्य हनमंत हट्टीकर तसेच मेदर लक्ष्मी मंदिर समितीचे सदस्य आणि मोठ्या संख्येने नागरिक उपस्थित होते.
खानापूर शहरात ग्रामदैवत रवळनाथ मंदिर, थळ देवता सातेरी माऊली मंदिराबरोबरच मुख्य लक्ष्मी मंदिर व मेदर लक्ष्मी मंदिर अशी दोन लक्ष्मी मंदिरे आहेत. पूर्वी दोन्ही मंदिरांमध्ये देवीची मूर्ती नव्हती. 2007 मध्ये लक्ष्मी यात्रा समितीने या दोन्ही मंदिरांमध्ये मूर्ती प्रतिष्ठापना करण्याचा निर्णय घेतला होता. त्यानुसार 2019 ची लक्ष्मी यात्रेच्या अगोदर, 10 फेब्रुवारी 2019 रोजी मुख्य लक्ष्मी मंदिरात मूर्ती प्रतिष्ठापना करण्यात आली, तर मेदर लक्ष्मी मंदिरात लाकडी लक्ष्मी मूर्तीची प्रतिष्ठापना झाली होती.
मेदर लक्ष्मी मंदिराच्या जीर्णावस्थेमुळे सहा महिन्यांपूर्वी मंदिराच्या जिर्णोद्धाराचे काम हाती घेण्यात आले. जुन्या मंदिराचे पारंपरिक स्वरूप जपून नवा गाभारा, कळस, ग्रॅनाईट फरशी, रंगरंगोटी व इतर सौंदर्यवर्धक कामे करण्यात आली आहेत.
उद्या सकाळी 8 ते 12 या वेळेत मंदिरात होम–हवन, पूजा व कळसारोहणाचा कार्यक्रम होईल. या कार्यक्रमास अवरोळी बीळ्की मठाचे स्वामीजी चन्नबसव देवरू यांची प्रमुख उपस्थिती लाभणार आहे. त्यानंतर दुपारी 12 ते सायंकाळी 6 पर्यंत महाप्रसादाचे आयोजन करण्यात आले आहे. सर्व भक्त, नागरिक आणि मंडळींनी उपस्थित राहून महाप्रसादाचा लाभ घ्यावा, असे आवाहन श्री महालक्ष्मी यात्रा कमिटीच्या वतीने करण्यात आले आहे.
ಖಾನಾಪುರ : ನಾಳೆ ಮೇದರ್ ಲಕ್ಷ್ಮೀ ದೇವಸ್ಥಾನದ ಕಳಸಾರೋಹಣ, ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮಹಾಪ್ರಸಾದ ಆಯೋಜನೆ
ಖಾನಾಪುರ : ಖಾನಾಪುರ ಪಟ್ಟಣದ ಪ್ರಾಚೀನ ಮೇದರ್ ಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ನಾಳೆ ಗುರುವಾರ, ದಿನಾಂಕ 14 ಆಗಸ್ಟ್ 2025 ರಂದು ಭವ್ಯವಾಗಿ ಜರುಗಲಿದೆ. ಈ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಧಾರ್ಮಿಕ ವಿಧಿ–ವಿಧಾನಗಳು, ಹೋಮ–ಹವನ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಮಹೋತ್ಸವದ ಮತ್ತು ಮಹಾಪ್ರಸಾದದ ಲಾಭ ಪಡೆಯುವಂತೆ ಖಾನಾಪುರ ಲಕ್ಷ್ಮೀ ಯಾತ್ರಾ ಸಮಿತಿಯ ಹಿರಿಯ ಸದಸ್ಯರಾದ ಪ್ರಕಾಶ ದೇಶಪಾಂಡೆ ಅವರು ಭಕ್ತರಿಗೆ ಕರೆ ನೀಡಿದ್ದಾರೆ. ಇಂದು ನಡೆದ ಸಭೆಯಲ್ಲಿ ಯಾತ್ರಾ ಸಮಿತಿಯ ಅಧ್ಯಕ್ಷ ನಾಮದೇವ ಗುರುವ್, ಮಾಜಿ ನಗರಾಧ್ಯಕ್ಷ ಪ್ರತಾಪರಾವ್ ಸರದೇಸಾಯಿ, ಸದಸ್ಯ ಹನಮಂತ ಹಟ್ಟೀಕರ ಹಾಗು ಮೇದರ್ ಲಕ್ಷ್ಮೀ ದೇವಸ್ಥಾನ ಸಮಿತಿಯ ಸದಸ್ಯರು ಮತ್ತು ಅನೇಕ ನಾಗರಿಕರು ಉಪಸ್ಥಿತರಿದ್ದರು.
ಖಾನಾಪುರ ಪಟ್ಟಣದಲ್ಲಿ ಗ್ರಾಮದೇವತೆ ರವಳನಾಥ ದೇವಸ್ಥಾನ, ಥಳದೇವತೆ ಸಾತೇರಿ ಮಾವುಲಿ ದೇವಸ್ಥಾನದೊಂದಿಗೆ ಮುಖ್ಯ ಲಕ್ಷ್ಮೀ ದೇವಸ್ಥಾನ ಮತ್ತು ಮೇದರ್ ಲಕ್ಷ್ಮೀ ದೇವಸ್ಥಾನ ಹೀಗೆ ಎರಡು ಲಕ್ಷ್ಮೀ ದೇವಾಲಯಗಳಿವೆ. ಹಿಂದೆ ಈ ಎರಡು ದೇವಾಲಯಗಳಲ್ಲಿ ದೇವಿಯ ವಿಗ್ರಹ ಇರಲಿಲ್ಲ. 2007ರಲ್ಲಿ ಲಕ್ಷ್ಮೀ ಯಾತ್ರಾ ಸಮಿತಿಯು ಈ ಎರಡೂ ದೇವಾಲಯಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ನಿರ್ಧಾರ ಕೈಗೊಂಡಿತ್ತು. ಅದರಂತೆ 2019ರ ಲಕ್ಷ್ಮೀ ಯಾತ್ರೆಗೆ ಮುನ್ನ, 2019ರ ಫೆಬ್ರವರಿ 10ರಂದು ಮುಖ್ಯ ಲಕ್ಷ್ಮೀ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ, ಮೇದರ್ ಲಕ್ಷ್ಮೀ ದೇವಾಲಯದಲ್ಲಿ ತಾತ್ಕಾಲಿಕವಾಗಿ ಕಟ್ಟಿಗೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು.
ಮೇದರ್ ಲಕ್ಷ್ಮೀ ದೇವಾಲಯ ಹಳೆಯದಾಗಿ ಜೀರ್ಣಾವಸ್ಥೆಗೆ ತಲುಪಿದ್ದರಿಂದ ಆರು ತಿಂಗಳ ಹಿಂದೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಯಿತು. ಹಳೆಯ ದೇವಾಲಯದ ಪರಂಪರೆಯ ರೂಪವನ್ನು ಕಾಪಾಡಿ, ಹೊಸ ಗರ್ಭಗುಡಿ, ಕಳಸ, ಗ್ರಾನೈಟ್ ನೆಲಹಾಸು, ಬಣ್ಣ ಹಚ್ಚುವಿಕೆ ಮತ್ತು ಇತರೆ ಸೌಂದರ್ಯವರ್ಧಕ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.
ನಾಳೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ದೇವಾಲಯದಲ್ಲಿ ಹೋಮ–ಹವನ, ಪೂಜೆ ಮತ್ತು ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅವರೋಳಿ ಬೀಳ್ಕಿ ಮಠದ ಸ್ವಾಮೀಜಿ ಚನ್ನಬಸವ ದೇವರು ಮುಖ್ಯ ಅತಿಥಿಯಾಗಿ ಹಾಜರಾಗಲಿದ್ದಾರೆ. ನಂತರ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಭಕ್ತರಿಗೆ ಮಹಾಪ್ರಸಾದ ಆಯೋಜಿಸಲಾಗಿದೆ. ಎಲ್ಲಾ ಭಕ್ತರು, ನಾಗರಿಕರು ಹಾಗೂ ಬಾಂಧವರು ಆಗಮಿಸಿ ಮಹಾಪ್ರಸಾದದ ಲಾಭ ಪಡೆಯುವಂತೆ ಶ್ರೀ ಮಹಾಲಕ್ಷ್ಮೀ ಯಾತ್ರಾ ಸಮಿತಿ ವಿನಂತಿಸಿದೆ.

