“जात मराठा – पोटजात कुणबी” नमूद करण्याचे आवाहन; खानापूरात जनजागृती बैठक–
खानापूर, ता.16 : सकल मराठा समाज, खानापूर तालुका यांच्या वतीने मंगळवार, दि. 16 सप्टेंबर रोजी शिवछत्रपती स्मारक येथे महत्त्वपूर्ण जनजागृती बैठकीचे आयोजन करण्यात आले. कर्नाटक राज्य सरकारने प्रस्तावित केलेल्या सामाजिक व शैक्षणिक सर्वेक्षण 2025 च्या पार्श्वभूमीवर ही बैठक घेण्यात आली. माजी मंत्री पी. जी. आर. सिंधिया यांच्या अध्यक्षतेखाली ही सभा पार पडली.
बैठकीत मार्गदर्शन करताना सांगण्यात आले की, सर्वेक्षणामध्ये नोंद करताना मराठा समाजातील नागरिकांनी काळजीपूर्वक योग्य माहिती द्यावी. यामध्ये जात – मराठा, तर पोटजात – कुणबी असेच नमूद करणे आवश्यक असल्याचे अधोरेखित करण्यात आले. भविष्यातील आरक्षणाच्या दृष्टीने हैदराबाद गॅझेटप्रमाणे पोटजात ‘कुणबी’ नमूद करणे अत्यावश्यक आहे. अन्यथा आरक्षणाचा लाभ मिळण्यास अडचण येऊ शकते, असा इशारा देण्यात आला. तसेच, मातृभाषा या कॉलममध्ये सर्वांनी मराठीच लिहावी, असेही आवाहन करण्यात आले.
बैठकीत उपस्थित मान्यवर :
आमदार विठ्ठल हलगेकर, माजी आमदार दिगंबर पाटील, माजी आमदार अरविंद पाटील, गोपाळ देसाई, ॲड. आय. आर. घाडी, ॲड. एच. एन. देसाई, मुरलीधर पाटील, आबासाहेब दळवी, विनायक मुतगेकर, प्रकाश चव्हाण, दिलीप पवार, संजय कुबल, महेश गुरव आदींनी मनोगत व्यक्त केले. यावेळी सुरेश देसाई, के. पी. पाटील, अभिजित सरदेसाई, अविनाश पाटील, प्रशांत लक्केबैलकर यांच्यासह तालुक्यातील मराठा बांधव व युवक मोठ्या संख्येने उपस्थित होते.
चौकट : सर्वेक्षणातील प्रश्न व मराठा समाजासाठी पर्यायी उत्तरे
क्र.प्रश्नपर्यायी उत्तर 8 धर्म 1 – हिंदू 9 जात 839 – मराठा 10 पोटजात 720 – कुणबी 15 मातृभाषा 6– मराठी
ಖಾನಾಪೂರದಲ್ಲಿ ಮರಾಠಾ ಸಮಾಜದ ಜಾಗೃತಿ ಸಭೆ
“ಜಾತಿ – ಮರಾಠಾ, ಉಪಜಾತಿ – ಕುಣಭಿ” ಎಂದು ನಮೂದಿಸಲು ಸೂಚನೆ.
ಖಾನಾಪೂರ : ಸಕಲ ಮರಾಠಾ ಸಮಾಜ, ಖಾನಾಪೂರ ತಾಲ್ಲೂಕು ವತಿಯಿಂದ ಮಂಗಳವಾರ, ದಿನಾಂಕ 16 ಸೆಪ್ಟೆಂಬರ್ ರಂದು ಶಿವಛತ್ರಪತಿ ಸ್ಮಾರಕದಲ್ಲಿ ಮಹತ್ವದ ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸರ್ಕಾರವು ಪ್ರಸ್ತಾವಿತ ಮಾಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025ರ ಹಿನ್ನಲೆಯಲ್ಲಿ ಈ ಸಭೆ ಜರುಗಿತು. ಮಾಜಿ ಸಚಿವ ಪಿ.ಜಿ.ಆರ್. ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು.
ಸಭೆಯಲ್ಲಿ ಮಾರ್ಗದರ್ಶನ ನೀಡುತ್ತಾ ಮಾತನಾಡಿ: ಸಮೀಕ್ಷೆಯಲ್ಲಿ ನೋಂದಣಿ ಮಾಡುವಾಗ ಮರಾಠಾ ಸಮಾಜದ ನಾಗರಿಕರು ಎಚ್ಚರಿಕೆಯಿಂದ ಸರಿಯಾದ ಮಾಹಿತಿಯನ್ನು ನಮೂದಿಸಬೇಕು. ಇದರಲ್ಲಿ ಜಾತಿ – ಮರಾಠಾ, ಉಪಜಾತಿ – ಕುಣಭಿ ಎಂದು ಮಾತ್ರ ನಮೂದಿಸುವುದು ಅತ್ಯವಶ್ಯಕವೆಂದು ಒತ್ತಿ ಹೇಳಲಾಯಿತು. ಭವಿಷ್ಯದ ಮೀಸಲಾತಿ ಹಕ್ಕಿನ ದೃಷ್ಟಿಯಿಂದ ಹೈದರಾಬಾದ್ ಗ್ಯಾಜೆಟ್ ಪ್ರಕಾರ ಉಪಜಾತಿ “ಕುಣಭಿ” ಎಂದು ನಮೂದಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೀಸಲಾತಿ ಪಡೆಯಲು ಅಡಚಣೆ ಉಂಟಾಗಬಹುದು ಎಂಬ ಎಚ್ಚರಿಕೆ ನೀಡಲಾಯಿತು. ಹಾಗೆಯೇ ಮಾತ್ರು ಭಾಷೆ ಎಂಬ ಕಾಲಮ್ನಲ್ಲಿ “ಮರಾಠಿ” ಎಂದೇ ಬರೆಯುವಂತೆ ಸಹ ಮನವಿ ಮಾಡಲಾಯಿತು.
ಸಭೆಯಲ್ಲಿ ಹಾಜರಿದ್ದ ಗಣ್ಯರು:
ಶಾಸಕ ವಿಠ್ಠಲ್ ಹಲಗೇಕರ, ಮಾಜಿ ಶಾಸಕ ದಿಗಂಬರ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಗೋಪಾಳ ದೇಶಾಯಿ, ಅಡ್ವೊ. ಐ.ಆರ್. ಘಾಡಿ, ಅಡ್ವೊ. ಎಚ್.ಎನ್. ದೇಶಾಯಿ, ಮೂರಳೀಧರ ಪಾಟೀಲ, ಆಬಾಸಾಹೇಬ ದಳವಿ, ವಿನಾಯಕ ಮುತ್ಗೇಕರ, ಪ್ರಕಾಶ ಚವಾಣ, ದಿಲೀಪ ಪವಾರ, ಸಂಜಯ ಕುಬಲ, ಮಹೇಶ್ ಗುರುವ್ ಹಾಗೂ ಇತರರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುರೇಶ್ ದೇಶಾಯಿ, ಕೆ.ಪಿ. ಪಾಟೀಲ, ಅಭಿಜಿತ್ ಸರದೇಶಾಯಿ, ಅವಿನಾಶ್ ಪಾಟೀಲ, ಪ್ರಶಾಂತ್ ಲಕ್ಕೇಬೈಲ್ಕರ್ ಅವರೊಂದಿಗೆ ತಾಲ್ಲೂಕಿನ ಮರಾಠಾ ಬಂಧುಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಚೌಕಟ್ಟು : ಸಮೀಕ್ಷೆಯ ಪ್ರಶ್ನೆಗಳು ಮತ್ತು ಮರಾಠಾ ಸಮಾಜಕ್ಕಾಗಿ ಪರ್ಯಾಯ ಉತ್ತರಗಳು
ಕ್ರ. ಪ್ರಶ್ನೆ ಪರ್ಯಾಯ ಉತ್ತರ
8 ಧರ್ಮ 1 – ಹಿಂದೂ
9 ಜಾತಿ 839 – ಮರಾಠಾ
10 ಉಪಜಾತಿ 720 – ಕುಣಭಿ
15 ಮಾತೃಭಾಷೆ 6 – ಮರಾಠಿ

