मंजुनाथ धर्मस्थळाचे मुख्यस्थ वीरेंद्र हेगडे यांची धारवाड येथे भेट.
खानापूर ; राज्यातील सुप्रसिद्ध मंजुनाथ धर्मस्थळ तीर्थक्षेत्राला बदनाम करण्याचा प्रयत्न करणाऱ्यांविरोधात चौकशी करून कठोर कारवाई करण्याची मागणी करत 19 ऑगस्ट रोजी बेळगाव जिल्ह्यात हिंदू समाजाच्या वतीने जिल्हाधिकारी कार्यालयावर आमदार अभय पाटील यांच्या नेतृत्वाखाली भव्य मूक मोर्चा काढण्यात आला होता. या मोर्चामध्ये सुमारे 15 हजारांहून अधिक नागरिकांनी सहभाग नोंदविला होता.

याच पार्श्वभूमीवर काल बुधवार, दिनांक 20 ऑगस्ट रोजी मंजुनाथ धर्मस्थळाचे मुख्यस्थ डॉ. वीरेंद्र हेगडे धारवाड येथे आले असता खानापूर येथील जैन समाजाचे नेते व भाजप जिल्हा उपाध्यक्ष प्रमोद कोचेरी यांच्यासह बेळगाव येथील जैन समाजाचे प्रमुख नेते मंडळींनी त्यांची भेट घेतली.
या भेटीदरम्यान वीरेंद्र हेगडे यांचे आशीर्वाद घेऊन बेळगाव जिल्ह्यात काढण्यात आलेल्या भव्य मोर्चाची सविस्तर माहिती देण्यात आली. यावेळी अभय अवलक्की, राजू जकन्नावर, अशोक पाटील आदी नेते उपस्थित होते.
ಮಂಜುನಾಥ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರನು ಧಾರವಾಡದಲ್ಲಿ ಭೇಟಿ ಮಾಡಿದ ಜೈನ ಸಮಾಜದ ನಾಯಕ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ.
ಖಾನಾಪುರ ; ರಾಜ್ಯದ ಪ್ರಸಿದ್ಧ ಮಂಜುನಾಥ ಧರ್ಮಸ್ಥಳ ತೀರ್ಥಕ್ಷೇತ್ರದ ಹೆಸರು ಕೆಡಿಸಲು ಕೆಲವರು ಮಾಡಿದ ಪ್ರಯತ್ನದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಗಸ್ಟ್ 19ರಂದು ಬೆಳಗಾವಿ ಜಿಲ್ಲೆಯ ಹಿಂದು ಸಮಾಜದ ವತಿಯಿಂದ ಶಾಸಕ ಅಭಯ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೌನ ಮೆರವಣಿಗೆ ನಡೆಸಲಾಗಿತ್ತು. ಈ ಮೋರಚಾದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು.
ಈ ಹಿನ್ನೆಲೆಯಲ್ಲೇ ನಿನ್ನೆ ಬುಧವಾರ (ಆ. 20) ಮಂಜುನಾಥ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಧಾರವಾಡಕ್ಕೆ ಆಗಮಿಸಿದ ವೇಳೆ ಖಾನಾಪುರದ ಜೈನ ಸಮಾಜದ ನಾಯಕ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ಬೆಳಗಾವಿಯ ಜೈನ ಸಮಾಜದ ಪ್ರಮುಖರು ಅವರನೂ ಭೇಟಿ ಮಾಡಿದರು.
ಭೇಟಿಯ ವೇಳೆ ಡಾ. ಹೆಗಡೆ ಅವರ ಆಶೀರ್ವಾದವನ್ನು ಪಡೆದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಡೆದ ಭವ್ಯ ಮೆರವಣಿಗೆ ಕುರಿತು ವಿವರ ನೀಡಿದರು. ಈ ಸಂದರ್ಭದಲ್ಲಿ ಅಭಯ ಅವಲಕ್ಕಿ, ರಾಜು ಜಕನ್ನಾವರ, ಅಶೋಕ ಪಾಟೀಲ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

