बेळगाव ; सुभाषनगरात पोत्यातून तलवार घेऊन जाणारा इसम अटकेत.
बेळगाव : शहरातील वाढत्या चाकूभोसक्यांच्या घटनांवर आळा घालण्यासाठी कार्यरत असलेल्या पोलिसांच्या अँटी-स्टॅबिंग पथकाने मंगळवारी (दि. 19 ऑगस्ट) सुभाषनगर परिसरात कारवाई करून एका इसमाला अटक केली. त्याच्याकडून प्राणघातक तलवार जप्त करण्यात आली आहे.
अटक झालेल्याचे नाव जुबेर अब्दुलवहाब शेख (वय 36, रा. सहावा क्रॉस, आझादनगर, बेळगाव) असे आहे. पोलिस सूत्रांच्या माहितीनुसार, जुबेर मंगळवारी सुभाषनगर येथील मराठा मंडळ कॉलेज शेजारील हॉस्पिटलकडे जाणाऱ्या रस्त्याने पोते घेऊन संशयास्पदरित्या जात होता.
त्यावेळी मार्केट पोलीस ठाण्याच्या अँटी-स्टॅबिंग पथकातील पोलीस उपनिरीक्षक विठ्ठल हावन्नवर व त्यांच्या सहकाऱ्यांनी त्याला थांबवून चौकशी केली. झडतीदरम्यान त्याच्या पोत्यामध्ये तलवार आढळून आली.
याप्रकरणी तलवार जप्त करून आरोपी जुबेर शेख याला अटक करण्यात आली आहे. मार्केट पोलीस ठाण्यात गुन्हा नोंद करण्यात आला असून पुढील तपास सुरू आहे.
ಬೆಳಗಾವಿ : ಸುಭಾಷನಗರದಲ್ಲಿ ಚೀಲದಲ್ಲಿ ಮಾರಕಾಸ್ತ್ರ (ಕತ್ತಿ) ಹೊತ್ತು ಸಾಗುತ್ತಿದ್ದ ವ್ಯಕ್ತಿ ಅರೆಸ್ಟ್
ಬೆಳಗಾವಿ : ನಗರದಲ್ಲಿ ಹೆಚ್ಚುತ್ತಿರುವ ಚಾಕು ಭೋಸಾಟಿಕೆ ಪ್ರಕರಣಗಳಿಗೆ ತಡೆ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಆಂಟಿ-ಸ್ಟ್ಯಾಬಿಂಗ್ ಪಡೆಯುವರು ಮಂಗಳವಾರ (ಆ. 19) ಸುಭಾಷನಗರ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು . ಅವನ ಬಳಿಯಿಂದ ಜೀವಕ್ಕೆ ಅಪಾಯಕಾರಿಯಾದ ಮಾರಕಾಸ್ತ್ರ (ಕತ್ತಿ) ವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನ ಹೆಸರು ಜುಬೇರ್ ಅಬ್ದುಲ್ವಹಾಬ್ ಶೇಖ್ (36, ಸಾ – 6ನೇ ಕ್ರಾಸ್, ಆಜಾದ್ನಗರ, ಬೆಳಗಾವಿ) ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜುಬೇರ್ ಮಂಗಳವಾರ ಸುಭಾಷನಗರದಲ್ಲಿರುವ ಮರಾಠಾ ಮಂಡಳ ಕಾಲೇಜು ಪಕ್ಕದ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಚೀಲ ಹೊತ್ತು ಸಂಶಯಾಸ್ಪದವಾಗಿ ತಿರುಗುತ್ತಿದ್ದ ಎಂದು ತಿಳಿದು ಬಂದಿದೆ.
ಅದೇ ವೇಳೆ ಮಾರ್ಕೆಟ್ ಪೊಲೀಸ್ ಠಾಣೆಯ ಆಂಟಿ-ಸ್ಟ್ಯಾಬಿಂಗ್ ಪಡೆಯಲ್ಲಿ ಪಿಎಸ್ಐ ವಿಠ್ಠಲ್ ಹಾವಣ್ಣವರ ಹಾಗೂ ಅವರ ಸಹೋದ್ಯೋಗಿಗಳು ಅವನನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ, ಚೀಲದೊಳಗೆ ಕತ್ತಿ ಪತ್ತೆಯಾಗಿದೆ.
ಈ ಸಂಬಂಧ ಕತ್ತಿಯನ್ನು ವಶಪಡಿಸಿಕೊಂಡು ಆರೋಪಿಯನ್ನೂ ಬಂಧಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

