मळवाड गावचा पाणी प्रश्न सोडविण्यासाठी ग्रामस्थांची आमदारांकडे धाव; आमदार विठ्ठल हालगेकर यांनी दिले अधिकाऱ्यांना तातडीचे आदेश!
खानापूर (ता.18): खानापूर तालुक्यातील मळवाड गावात गंभीर पाणीटंचाईचा प्रश्न निर्माण झाला असून, अनेक दिवसांपासून ग्रामस्थांना पिण्याच्या पाण्यासाठी त्रास सहन करावा लागत आहे. ग्रामपंचायतीकडून या प्रश्नाकडे दुर्लक्ष झाल्याने नागरिकांत तीव्र नाराजी व्यक्त होत होती.
या पार्श्वभूमीवर मळवाड गावातील ग्रामस्थांच्या वतीने शनिवारी (दि. 18 ऑक्टोबर) रोजी खानापूरचे आमदार मा. विठ्ठल हालगेकर यांची भेट घेऊन लेखी निवेदन सादर करण्यात आले. ग्रामस्थांनी गावातील पाणीपुरवठा नियमित व्हावा, पाण्याच्या टाक्या व पाईपलाईनची दुरुस्ती करण्यात यावी तसेच या समस्येवर शाश्वत उपाययोजना कराव्यात, अशी मागणी केली.
या वेळी आमदार विठ्ठल हालगेकर यांनी ग्रामस्थांच्या तक्रारीकडे गांभीर्याने लक्ष देत संबंधित खात्याच्या अधिकाऱ्यांना तात्काळ मळवाड गावाला भेट देऊन प्रत्यक्ष स्थितीचा आढावा घेण्याचे आणि आवश्यक ती कार्यवाही करण्याचे आदेश दिले.
भेटीदरम्यान गावातील जेष्ठ नागरिक, मान्यवर व ग्रामस्थ उपस्थित होते. आमदारांनी त्वरित हस्तक्षेप करून अधिकाऱ्यांना आदेश दिल्याने मळवाड गावचा दीर्घकाळ प्रलंबित असलेला पाणी प्रश्न सुटण्याची शक्यता निर्माण झाली असून ग्रामस्थांमध्ये समाधानाचे वातावरण पसरले आहे.
गावकऱ्यांनी आमदार हालगेकर यांचे मन:पूर्वक आभार मानले असून, लवकरच पाणीपुरवठा सुरळीत होईल अशी आशा व्यक्त केली आहे.
ಮಳವಾಡ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ಗ್ರಾಮಸ್ಥರ ಮನವಿ; ಶಾಸಕ ವಿಠ್ಠಲ ಹಾಲಗೇಕರ ಅವರು ಅಧಿಕಾರಿಗಳಿಗೆ ತುರ್ತು ಸಮಸ್ಯೆ ಬಗೆಹರಿಸಲ ಸೂಚನೆ ನೀಡಿದರು!
ಖಾನಾಪುರ (ತಾ.18): ಖಾನಾಪುರ ತಾಲ್ಲೂಕಿನ ಮಳವಾಡ ಗ್ರಾಮದಲ್ಲಿ ಗಂಭೀರ ನೀರಿನ ತೊಂದರೆ ಉಂಟಾಗಿದ್ದು. ಹಲವು ದಿನಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಈ ಸಮಸ್ಯೆ ಕಡೆಗಣನೆಗೆ ಗುರಿ ಆಗಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಗ್ರಾಮಸ್ಥರ ಪ್ರತಿನಿಧಿ ಶನಿವಾರ (ಅ. 18) ಖಾನಾಪುರದ ಶಾಸಕರಾದ ಶ್ರೀ ವಿಠ್ಠಲ ಹಲಗೇಕರ್ ಅವರನ್ನು ಭೇಟಿಯಾಗಿ ಲೇಖಿ ಮನವಿ ಪತ್ರ ಸಲ್ಲಿಸಿದರು. ಗ್ರಾಮದಲ್ಲಿ ನೀರಿನ ಪೂರೈಕೆ ನಿಯಮಿತಗೊಳಿಸಬೇಕು, ನೀರಿನ ಟ್ಯಾಂಕ್ ಹಾಗೂ ಪೈಪ್ಲೈನ್ಗಳ ದುರಸ್ತಿ ಮಾಡಬೇಕು ಹಾಗೂ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಶಾಸಕ ವಿಠ್ಠಲ ಹಲಗೇಕರ್ ಅವರು ಗ್ರಾಮಸ್ಥರ ಅಹವಾಲು ತೀವ್ರವಾಗಿ ಪರಿಗಣಿಸಿ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಮಳವಾಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯ ಅವಲೋಕನ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭೇಟಿಯ ವೇಳೆ ಗ್ರಾಮದ ಹಿರಿಯರು, ಗಣ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಶಾಸಕರು ತಕ್ಷಣ ಹಸ್ತಕ್ಷೇಪ ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಳವಾಡ ಗ್ರಾಮದ ದೀರ್ಘಕಾಲ ಬಾಕಿ ಉಳಿದ ನೀರಿನ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗುವ ನಿರೀಕ್ಷೆ ಮೂಡಿದೆ. ಗ್ರಾಮಸ್ಥರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮಸ್ಥರು ಶಾಸಕರಾದ ವಿಠ್ಠಲ ಹಲಗೇಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ, ಶೀಘ್ರದಲ್ಲೇ ನೀರಿನ ಪೂರೈಕೆ ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

