नगरपंचायतीच्या वतीने मलप्रभा नदी पूजाविधी संपन्न; साड्यांच्या खरेदीवरून संताप..
खानापूर : खानापूर नगरपंचायतीतर्फे पारंपरिक श्री मलप्रभा नदी पूजाविधी व ओटी अर्पण कार्यक्रम नगराध्यक्ष मीनाक्षी बैलूरकर व त्यांचे पती नगरसेवक प्रकाश बैलूरकर यांच्या हस्ते संपन्न झाला. यावेळी पौरोहित्य शार्दुल जोशी यांनी विधी उत्तम रीतीने पार पाडला.

कार्यक्रमाला उपनगराध्यक्षा जया भूतकी, स्थायी समितीचे अध्यक्ष आप्पया कोडोळी, नगरसेवक रफिक वारीमनी, नारायण ओगले, हनुमंत पुजारी, नगरसेविका मेघा कुंदर्गी, राजश्री तोप्पीनकट्टी, महिला अधिकारी राजश्री वेर्णेकर, शोभा पत्तार, राजू जांबोटी, प्रेमानंद नाईक तसेच नगरसेवक, नगरसेविका व अधिकारी व कर्मचारी वर्ग मोठ्या संख्येने उपस्थित होते. पूजाविधीनंतर नगरपंचायतीच्या वतीने नदीची ओटी भरण्यात आली.

साड्यांच्या खरेदीवरून वादंग…
या पूजाविधीच्या निमित्ताने नगरसेविका व महिला कर्मचाऱ्यांसाठी तब्बल 20 साड्या खरेदी करण्यात आल्या होत्या. हा खर्च नगरपंचायतीच्या निधीतून केल्याचे उघड होताच नागरिक व महिला वर्गामध्ये तीव्र नाराजी व्यक्त करण्यात आली.
“आम्ही भरलेली घरपट्टी शहराच्या विकासासाठी आहे, साड्या खरेदीसाठी नाही,” असा सवाल नागरिकांनी केला.
नागरिकांचा संताप – “चार आण्याची कोंबडी, बारा आण्याचा मसाला!”…
नागरिक व महिलांच्या वतीने नगरसेवक-नगरसेविकांवर टीकेची झोड उठवण्यात आली. नदीची पूजा ही पारंपरिक व साध्या पद्धतीने होणारी असल्याने मंडप, साड्यांची खरेदी व खर्चिक व्यवस्था यावर प्रश्नचिन्ह निर्माण झाले आहे.
बेळगाव महानगरपालिकेकडून राकसकोप धरणात कमी खर्चात पूजा विधी पार पडतो, मग खानापूरमध्ये एवढा खर्च का, असा सवाल उपस्थित होत आहे.
नगरसेवकांचाही विरोध…
काही नगरसेवकांनी “आपलं खानापूर” या स्थानिक न्यूज पोर्टलला माहिती देताना सांगितले की,
“पूर्वी फक्त नदीला ओटी अर्पण करून पूजाविधी पार पाडला जात असे. त्याप्रमाणे साधेपणाने पूजा करायला हवी होती. अनावश्यक खर्च हा नगरपंचायतीच्या निधीवर टाकण्यात आला आहे. सदर बिल जर मीटिंगमध्ये ठेवले तर आम्ही कडाडून विरोध करू.”
जबाबदारी निश्चित करण्याची मागणी.. यारदो..दुडू.. यल्लमन् जात्रा..
नागरिकांनी मागणी केली आहे की, या खर्चाची जबाबदारी संबंधित असलेल्या, एका नगरसेवक-नगरसेविकेवर टाकावी आणि बिल त्यांच्याकडूनच वसूल करावे.
नगरपंचायतीचे मुख्याधिकारी संतोष कुरबेटी यांनी हा मनमानी खर्च मंजूर करू नये, अशीही ठाम भूमिका नागरिक व सामाजिक कार्यकर्त्यांनी घेतली आहे.
आरटीआय कारवाईची चेतावणी…
आरटीआय कार्यकर्त्यांनी स्पष्ट इशारा दिला आहे की, “जर हा खर्च मंजूर करण्यात आला तर आम्ही आरटीआय कायद्यांतर्गत माहिती मागवून संबंधित अधिकाऱ्यांविरोधात कायदेशीर कारवाई करू.”
दोन वर्षांपूर्वीही अशाच प्रकारे साड्यांची खरेदी झाली होती. त्यावेळी नगरसेवकांनी बिल अडवले होते व अखेर साड्या आणणाऱ्या कर्मचाऱ्यालाच आपल्या पगारातून पैसे भरावे लागले होते, असा आरोपही करण्यात येत आहे.
निष्कर्ष…
नगरपंचायतीच्या निधीतून पूजाविधीच्या नावाखाली अनावश्यक खर्च करून साड्या खरेदी करण्यात आल्याचा प्रकार उघड झाल्याने खानापूर शहरात संतापाची लाट उसळली आहे.
नागरिकांचा ठाम आग्रह आहे की, पूजाविधी पारंपरिक पद्धतीने व साधेपणाने व्हावा आणि नगरपंचायतीचा निधी शहराच्या विकासासाठीच वापरला जावा.
ನಗರ ಪಂಚಾಯತಿ ವತಿಯಿಂದ ಮಲಪ್ರಭಾ ನದಿಯ ಪೂಜಾವಿಧಿ ಹಾಗೂ ಬಾಗಿನ ಅರ್ಪಿಸುವ ಕಾರ್ಯ ನೆರವೇರಿತು; ಸೀರೆಯ ಖರೀದಿ ವೆಚ್ಚಯಿಂದ ಜನರ ಆಕ್ರೋಶ..
ಖಾನಾಪುರ : ಖಾನಾಪುರ ನಗರಪಂಚಾಯತಿ ವತಿಯಿಂದ ಸಾಂಪ್ರದಾಯಿಕ ಶ್ರೀ ಮಲಪ್ರಭಾ ನದಿ ಪೂಜಾವಿಧಿ ಹಾಗೂ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ನಗರಾಧ್ಯಕ್ಷೆ ಮೀನಾಕ್ಷಿ ಬೈಲೂರಕರ ಹಾಗೂ ಅವರ ಪತಿ, ನಗರಸಭಾ ಸದಸ್ಯ ಪ್ರಕಾಶ ಬೈಲೂರಕರ ಅವರಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪೌರೋಹಿತ್ಯವನ್ನು ಶಾರ್ದೂಲ ಜೋಶಿ ಅವರು ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪನಗರಾಧ್ಯಕ್ಷೆ ಜಯಾ ಭೂತಕಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಪ್ಪಯ್ಯಾ ಕೋಡೋಳಿ, ನಗರಸಭಾ ಸದಸ್ಯ ರಫಿಕ್ ವಾರಿ್ಮಣಿ, ನಾರಾಯಣ ಒಗಲೆ, ಹನುಮಂತ ಪುಜಾರಿ, ನಗರಸಭಾ ಸದಸ್ಯೆ ಮೇಘಾ ಕುಂದರ್ಗಿ, ರಾಜಶ್ರೀ ತೊಪ್ಪಿನಕಟ್ಟಿ, ಮಹಿಳಾ ಅಧಿಕಾರಿ ರಾಜಶ್ರೀ ವೇರ್ಣೇಕರ್, ಶೋಭಾ ಪತ್ತಾರ, ರಾಜು ಜಾಂಬೋಟಿ, ಪ್ರೇಮಾನಂದ ನಾಯ್ಕ ಸೇರಿದಂತೆ ನಗರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು. ಪೂಜಾವಿಧಿಯ ನಂತರ ನಗರಪಂಚಾಯತಿ ವತಿಯಿಂದ ನದಿಗೆ ಬಾಗಿನ
ಅರ್ಪಿಸಲಾಯಿತು.
ಚರ್ಚೆಗೆ ಗ್ರಾಸವಾದ ಸೀರೆ ಖರೀದಿ ಪ್ರಕರಣ
ಈ ಪೂಜಾವಿಧಿಯ ಅಂಗವಾಗಿ ಮಹಿಳಾ ನಗರಸಭಾ ಸದಸ್ಯೆ ಹಾಗೂ ಮಹಿಳಾ ಸಿಬ್ಬಂದಿಗಳಿಗಾಗಿ ಒಟ್ಟು 20 ಸೀರೆಯನ್ನು ಖರೀದಿ ಮಾಡಲಾಗಿದೂ. ಈ ವೆಚ್ಚವನ್ನು ನಗರಪಂಚಾಯತಿ ನಿಧಿಯಿಂದ ಮಾಡಲಾಗಿದೆ ಎಂಬುದು ಬಹಿರಂಗವಾಗುತ್ತಿದ್ದಂತೆಯೇ ಕಾರ್ಯಕ್ರಮಕ್ಕೆ ಸೇರಿದ ನಾಗರಿಕರು ಹಾಗೂ ಮಹಿಳೆಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿ
“ನಾವು ಪಂಚಾಯಿತಿಗೆ ಪಾವತಿಸುವ ಮನೆ ಕರ ನಗರಾಭಿವೃದ್ಧಿಗೆ, ಹೊರತು ಸೀರೆ ಖರೀದಿಗೆ ಅಲ್ಲ,” ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ನಾಗರಿಕರ ಆಕ್ರೋಶ – ನಾಲ್ಕನೇಯ ಕೋಳಿಗೆ, ಹನ್ನೆರಡಣೆಯ ಮಸಾಲೆ!” ಎಂಬ ಗಾದೆಗೆ ಹೋಲಿಸಿದರು.
ನಾಗರಿಕರು ಹಾಗೂ ಮಹಿಳೆಯರ ಪರವಾಗಿ ನಗರಸಭಾ ಸದಸ್ಯೆಯರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು. ನದಿಯ ಪೂಜೆ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ನಡೆಯುಬೇಕಿತ್ತು. ಆದರೆ ಆಡಂಬರದ ಮಂಟಪ, ಸೀರೆಯ ಖರೀದಿ ಹಾಗೂ ಭಾರೀ ವೆಚ್ಚದಿಂದ ಅನುಮಾನ ವ್ಯಕ್ತವಾಗಿದೆ.
ಬೆಳಗಾವಿ ಮಹಾನಗರಪಾಲಿಕೆ ವತಿಯಿಂದ ರಾಕಸ್ಕೋಪ್ ಜಲಾಶಯಕ್ಕೆ ಕಡಿಮೆ ವೆಚ್ಚದಲ್ಲಿ ನದಿಪೂಜೆ ನಡೆಸುತ್ತದೆ. ಆದರೆ ಖಾನಾಪುರದಲ್ಲಿ ಅಷ್ಟೊಂದು ವೆಚ್ಚ ಏಕೆ, ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಗರಸಭಾ ಸದಸ್ಯರ ವಿರೋಧ
ಕೆಲವು ನಗರಸಭಾ ಸದಸ್ಯರು “ಆಪಲ ಖಾನಾಪುರ” ಪೋರ್ಟಲ್ಗೆ ಮಾಹಿತಿ ನೀಡುತ್ತ,
“ಹಿಂದೆ ಕೇವಲ ನದಿಗೆ ಬಾಗಿನ ಅರ್ಪಿಸಿ ಪೂಜಾವಿಧಿ ನೆರವೇರಿಸಲಾಗುತ್ತಿತ್ತು. ಅದೇ ರೀತಿಯಲ್ಲಿ ಸರಳವಾಗಿ ಪೂಜೆ ಮಾಡಬೇಕಿತ್ತು. ಅನಾವಶ್ಯಕ ವೆಚ್ಚವನ್ನು ನಗರ ಪಂಚಾಯತಿ ನಿಧಿಯಿಂದ ಹಾಕಲಾಗಿದೆ. ಈ ಬಿಲ್ ಸಭೆಯಲ್ಲಿ ಇಟ್ಟರೆ ನಾವು ತೀವ್ರವಾಗಿ ವಿರೋಧಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಜವಾಬ್ದಾರಿ ನಿಶ್ಚಿತಗೊಳಿಸುವ ಬೇಡಿಕೆ
ನಾಗರಿಕರು ಈ ವೆಚ್ಚದ ಜವಾಬ್ದಾರಿ ಸಂಬಂಧಪಟ್ಟ ನಗರಸಭಾ ಸದಸ್ಯ ಅಥವಾ ಸದಸ್ಯೆಯರ ಮೇಲೆ ಹಾಕಿ, ಬಿಲ್ ಅವರಿಂದಲೇ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರ ಪಂಚಾಯತಿ ಮುಖ್ಯಾಧಿಕಾರಿ ಸಂತೋಷ ಕುರ್ಬೇಟಿ ಅವರು ಈ ತರಹದ ಮನಬಂದ ವೆಚ್ಚವನ್ನು ಅಂಗೀಕರಿಸಬಾರದು ಎಂದು ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಆರ್ ಟಿ ಐ ಕಾರ್ಯಕರ್ತರ ಸ್ಪಷ್ಟ ಎಚ್ಚರಿಕೆ:
“ಈ ವೆಚ್ಚವನ್ನು ಅಂಗೀಕರಿಸಿದರೆ ನಾವು ಆರ್ ಟಿ ಐ ಕಾಯ್ದೆಯಡಿಯಲ್ಲಿ ಮಾಹಿತಿ ಕೇಳಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.”
ಎರಡು ವರ್ಷಗಳ ಹಿಂದೆ ಕೂಡ ಇದೇ ರೀತಿಯಾಗಿ ಸೀರೆಯ ಖರೀದಿ ಮಾಡಲಾಗಿತ್ತು. ಆಗ ನಗರಸಭಾ ಸದಸ್ಯರು ಬಿಲ್ ತಡೆದಿದ್ದರು ಆಗ ಕೊನೆಗೆ ಸೀರೆಗಳನ್ನು ತಂದುಕೊಟ್ಟ ನೌಕರನ ಸಂಬಳದಿಂದ ಹಣ ಪಾವತಿಸಬೇಕಾಗಿತು ಎಂಬ ಆರೋಪ ಕೂಡ ವ್ಯಕ್ತವಾಗಿದೆ.
ನಿಷ್ಕರ್ಷ
ನಗರ ಪಂಚಾಯತಿ ನಿಧಿಯಿಂದ ಪೂಜಾವಿಧಿಯ ಹೆಸರಿನಲ್ಲಿ ಅನಾವಶ್ಯಕ ವೆಚ್ಚ ಮಾಡಿ ಸೀರೆಯ ಖರೀದಿ ನಡೆದಿರುವುದು ಬಹಿರಂಗವಾಗುತ್ತಿದ್ದಂತೆಯೇ ಖಾನಾಪುರದಲ್ಲಿ ಜನರ ಆಕ್ರೋಶ ಉಕ್ಕಿ ಬಂದಿದೆ.
ನಾಗರಿಕರ ಸ್ಪಷ್ಟ ಆಗ್ರಹ ಏನೆಂದರೆ – ಪೂಜಾವಿಧಿ ಸಾಂಪ್ರದಾಯಿಕ ಹಾಗೂ ಸರಳ ರೀತಿಯಲ್ಲಿ ನಡೆಯಬೇಕಿತ್ತು, ಮತ್ತು ನಗರ ಪಂಚಾಯತಿ ನಿಧಿ ಕೇವಲ ನಗರಾಭಿವೃದ್ಧಿಗೇ ಬಳಸಲ್ಪಡಬೇಕು.



