पाऊस ओसरल्याने, मलप्रभेच्या नदीपात्रातील पाण्याच्या पातळीत घट.
खानापूर : गेल्या चार दिवसापासून सुरू असलेल्या पावसाच्या संततधारेमुळे, खानापूर तालुक्यातील नदी, नाले तुडुंब भरून वाहत होते. मलप्रभा नदीच्या पाण्याच्या पातळीत सुध्दा भरपूर वाढ झाली होती. जांबोटी नजीक असलेल्या हबनहट्टी येथील मारुती मंदिर, पाण्यात, अर्ध्यापेक्षा जास्त बुडाले होते. परंतु काल बुधवारी रात्रीपासून पाऊस थोडा ओसरल्याने मलप्रभा नदी पात्रातील पाण्याच्या पातळीत बरीच घट झाली आहे.
चार दिवसापासून पडत असलेल्या संततधार पावसामुळे, काल बुधवारी 3 जुलै रोजी, सायंकाळपर्यंत, खानापूर येथील मलप्रभा नदी घाटावरील बऱ्याच पायऱ्या पाण्याखाली गेल्या होत्या. परंतु काल बुधवारी रात्री पासून पाऊस ओसरल्याने पाण्याच्या पातळीत घट झाली आहे. आज गुरुवारी 4 जूलै रोजी, मलप्रभा नदी घाटावरील, पाण्याखाली गेलेल्या पाच पायऱ्या, पाणी उतरल्याने दिसत आहेत. पाऊस इतक्या मोठ्या प्रमाणात कोसळत होता, की, पूरसदृश्य स्थिती निर्माण होईल असे दिसून येत होते. शाळा कॉलेज ना सुट्टी द्यावी लागेल अशी पूर सदृश्य परिस्थिती निर्माण झाली होती. परंतु पाऊस ओसरल्याने नदी, नाल्यांच्या पाणी पातळीत घट झाली आहे.
ಮಳೆ ಕಡಿಮೆಯಾದಂತೆ ಮಲಪ್ರಭಾ ನದಿ ಪಾತ್ರದಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿದೆ.
ಖಾನಾಪುರ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಾನಾಪುರ ತಾಲೂಕಿನ ನದಿ, ನಾಲೆಗಳು ತುಂಬಿ ಹರಿಯುತ್ತಿವೆ. ಮಲಪ್ರಭಾ ನದಿಯ ನೀರಿನ ಮಟ್ಟವೂ ಸಾಕಷ್ಟು ಹೆಚ್ಚಾಗಿದ್ದು ಜಾಂಬೋಟಿ ಸಮೀಪದ ಹಬನಹಟ್ಟಿಯ ಸ್ವಯಂಭೂ ಮಾರುತಿ ದೇವಸ್ಥಾನ ಮುಳುಗಡೆಯಾಗಿದೆ. ಆದರೆ ಬುಧವಾರ ಜುಲೈ 3ರ ರಾತ್ರಿಯಿಂದ ಮಳೆ ಕೊಂಚ ಕಡಿಮೆಯಾದ ಕಾರಣ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ.
ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಖಾನಾಪುರದ ಮಲಪ್ರಭಾ ನದಿ ತಟದ ಹಲವು ಮೆಟ್ಟಿಲುಗಳು ನಿನ್ನೆ ಜುಲೈ 3 ಬುಧವಾರ ಸಂಜೆಯವರೆಗೆ ಮುಳುಗಡೆ ಯಾಗಿದ್ದು ಆದರೆ ಬುಧವಾರ ರಾತ್ರಿಯಿಂದ ಮಳೆ ಕಡಿಮೆಯಾಗಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಇಂದು, ಜುಲೈ 4 ಗುರುವಾರ, ನೀರು ಕಡಿಮೆಯಾಗಿ ಮಲಪ್ರಭಾ ನದಿ ತಟದಲ್ಲಿರುವ ಐದು ಮೆಟ್ಟಿಲುಗಳು ಗೋಚರಿಸುತ್ತವೆ. ನಿನ್ನೆಯ ವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಂಡು ಬಂದಿದೆ. ಶಾಲಾ-ಕಾಲೇಜುಗಳಿಗೆ ರಾಜೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮಳೆ ಕಡಿಮೆಯಾಗುತ್ತಿರುವುದರಿಂದ ನದಿ, ನಾಲೆಗಳ ನೀರಿನ ಮಟ್ಟ ಕಡಿಮೆಯಾಗಿದೆ.