मडवाळ-कापोलीतील समस्यांवर प्रजासेवा सभेत चर्चा.
खानापूर : खानापूर तालुक्यातील मडवाळ येथे पुढील वर्षी एप्रिल महिन्यात होणाऱ्या 24 गावच्या श्री महालक्ष्मी यात्रेच्या पार्श्वभूमीवर तसेच कर्नाटक सरकार व तालुका प्रशासनाच्या वतीने आयोजित कापोली-मळवाड ग्रामपंचायतस्तरीय ‘होबळी मट्टद प्रजा सेवा आंदोलन सभा’ आमदार विठ्ठलराव हलगेकर यांच्या अध्यक्षतेखाली नुकतीच पार पडली. या सभेत यात्रेच्या नियोजनासह परिसरातील विविध विकासकामे आणि नागरिकांच्या समस्यांवर सविस्तर चर्चा करण्यात आली.
यात्रेच्या नियोजनासह मूलभूत सुविधांवर चर्चा…
खानापूर तालुक्यातील 24 गावांची श्री महालक्ष्मी यात्रा मोठ्या उत्साहात भरत असल्याने यात्रेच्या अनुषंगाने आवश्यक सुविधा उपलब्ध करून देण्यावर भर देण्यात आला. पाणीटंचाई, रस्त्यांची दुरुस्ती, विद्युत पुरवठा, स्वच्छता, मंदिरांची रंगरंगोटी आणि गटारींची व्यवस्था यासंबंधीच्या प्रश्नांवर चर्चा करण्यात आली. यात्रेदरम्यान भाविकांना श्री महालक्ष्मी देवीचे दर्शन व्यवस्थित घेता यावे, तसेच भाविकांची गैरसोय होऊ नये, यासाठी योग्य नियोजन करण्याची आवश्यकता व्यक्त करण्यात आली.
नागरिकांच्या समस्या जाणून घेतल्या…
कर्नाटक सरकार व तालुका प्रशासनाच्या वतीने आयोजित या प्रजासेवा आंदोलन सभेत मडवाळ व कापोली ग्रामपंचायत क्षेत्रातील नागरिकांच्या अडीअडचणी जाणून घेण्यात आल्या. नागरिकांनी मांडलेल्या विविध समस्या सोडविण्यासाठी आमदार विठ्ठलराव हलगेकर यांनी संबंधित विभागांच्या अधिकाऱ्यांना तातडीने कार्यवाही करण्याच्या सूचना दिल्या. विकासकामांमध्ये विलंब होऊ नये आणि नागरिकांना शासकीय योजनांचा लाभ वेळेत मिळावा, यासाठी प्रशासनाने जबाबदारीने काम करावे, असे निर्देशही त्यांनी दिले.
तक्रारींच्या संगणकीकरणावर भर…
नागरिकांच्या तक्रारी आणि अर्ज तातडीने संगणकीकृत करून ते वरिष्ठ स्तरापर्यंत पोहोचवावेत. त्यामुळे तक्रारींचा पाठपुरावा करणे सोपे होईल आणि कामकाजात पारदर्शकता राहील, अशा सूचना आमदार हलगेकर यांनी अधिकाऱ्यांना दिल्या. नागरिकांच्या प्रश्नांकडे दुर्लक्ष होणार नाही, याची दक्षता घेण्याचेही त्यांनी स्पष्ट केले.
मान्यवरांची उपस्थिती….
या सभेला खानापूरचे तहसीलदार दुंडप्पा कुमार, श्री महालक्ष्मी यात्रा कमिटीचे अध्यक्ष मनोहर गणपतराव देसाई, शिवाजी गुणाजी देसाई, खानापूर भाजपचे ज्येष्ठ नेते प्रमोद कोचेरी, भाजपचे जिल्हा उपाध्यक्ष संजय कुबल, भाजप युवा नेते जोतिबा रेमानी, गॅरंटी योजनांचे अध्यक्ष सूर्यकांत कुलकर्णी, सार्वजनिक बांधकाम विभागाचे अभियंता संजय गस्ती, पशुसंवर्धन व पशुवैद्यकीय विभागाचे डॉक्टर मनोहर दादमी यांच्यासह विविध शासकीय विभागांचे अधिकारी आणि ग्रामस्थ मोठ्या संख्येने उपस्थित होते.
ಮಡವಾಳ-ಕಾಪೋಲಿ ಭಾಗದ ಸಮಸ್ಯೆಗಳ ಕುರಿತು ಪ್ರಜಾಸೇವಾ ಸಭೆಯಲ್ಲಿ ಚರ್ಚೆ.
ಖಾನಾಪುರ : ಖಾನಾಪುರ ತಾಲ್ಲೂಕಿನ ಮಡವಾಳ ಗ್ರಾಮದಲ್ಲಿ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ 24 ಗ್ರಾಮಗಳ ಶ್ರೀ ಮಹಾಲಕ್ಷ್ಮಿ ಯಾತ್ರೆಯ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ಸರ್ಕಾರ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾಪೋಲಿ-ಮಳವಾಡ ಗ್ರಾಮ ಪಂಚಾಯಿತಿ ‘ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ’ಯು ಜನ ಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ ಯಾತ್ರೆಯ ಯೋಜನೆ ಸೇರಿದಂತೆ ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಾಗರಿಕರ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಜಾತ್ರೆಯ ಯೋಜನೆಯೊಂದಿಗೆ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ…
ಖಾನಾಪುರ ತಾಲ್ಲೂಕಿನ 24 ಗ್ರಾಮಗಳ ಶ್ರೀ ಮಹಾಲಕ್ಷ್ಮಿ ಯಾತ್ರೆಯು ಅತ್ಯಂತ ಉತ್ಸಾಹದಿಂದ ನಡೆಯುವುದರಿಂದ, ಜಾತ್ರೆಯ ಹಿನ್ನೆಲೆಯಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕುರಿತು ವಿಶೇಷ ಒತ್ತು ನೀಡಲಾಯಿತು. ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ದುರಸ್ತಿ, ವಿದ್ಯುತ್ ಪೂರೈಕೆ, ಸ್ವಚ್ಛತೆ, ದೇವಸ್ಥಾನಗಳ ಬಣ್ಣ ಬಳಿಯುವಿಕೆ ಹಾಗೂ ಚರಂಡಿಗಳ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳಿಗೆ ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನವನ್ನು ಸುಗಮವಾಗಿ ಪಡೆಯಲು ಅನುಕೂಲವಾಗುವಂತೆ ಹಾಗೂ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಯೋಜನೆ ರೂಪಿಸುವ ಅಗತ್ಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ನಾಗರಿಕರ ಸಮಸ್ಯೆಗಳನ್ನು ಆಲಿಸಲಾಯಿತು…
ಕರ್ನಾಟಕ ಸರ್ಕಾರ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಮಡವಾಳ ಮತ್ತು ಕಾಪೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲಾಯಿತು. ನಾಗರಿಕರು ಮಂಡಿಸಿದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಶಾಸಕ ವಿಠ್ಠಲರಾವ್ ಹಲಗೇಕರ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬವಾಗದಂತೆ ಹಾಗೂ ನಾಗರಿಕರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತೆ ಆಡಳಿತ ವ್ಯವಸ್ಥೆಯು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೂರುಗಳ ಗಣಕೀಕರಣಕ್ಕೆ ಒತ್ತು…
ನಾಗರಿಕರ ದೂರುಗಳು ಮತ್ತು ಅರ್ಜಿಗಳನ್ನು ತಕ್ಷಣ ಗಣಕೀಕರಿಸಿ, ಅವುಗಳನ್ನು ಮೇಲಧಿಕಾರಿಗಳ ಹಂತಕ್ಕೆ ತಲುಪಿಸಬೇಕು. ಇದರಿಂದ ದೂರುಗಳ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅವುಗಳ ಪ್ರಗತಿಯನ್ನು ಪರಿಶೀಲಿಸಲು ಅನುಕೂಲವಾಗುವುದರ ಜೊತೆಗೆ ಆಡಳಿತದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ವಿಠಲರಾವ ಹಲಗೇಕರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರಿಕರ ಸಮಸ್ಯೆಗಳನ್ನು ನಿರ್ಲಕ್ಷಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಪ್ರತಿಯೊಂದು ದೂರಿನ ಬಗ್ಗೆಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಗಣ್ಯರ ಉಪಸ್ಥಿತಿ…
ಈ ಸಭೆಯಲ್ಲಿ ಖಾನಾಪುರದ ತಹಶೀಲ್ದಾರ್ ದುಂಡಪ್ಪ ಕುಮಾರ, ಶ್ರೀ ಮಹಾಲಕ್ಷ್ಮಿ ಜಾತ್ರಾ ಸಮಿತಿಯ ಅಧ್ಯಕ್ಷ ಮನೋಹರ ಗಣಪತರಾವ್ ದೇಸಾಯಿ, ಶಿವಾಜಿ ಗುಣಾಜಿ ದೇಸಾಯಿ, ಖಾನಾಪುರ ಬಿಜೆಪಿ ಪಕ್ಷದ ಹಿರಿಯ ಮುಖಂಡ ಪ್ರಮೋದ್ ಕೋಚೇರಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಕುಬಲ್, ಬಿಜೆಪಿ ಯುವ ಮುಖಂಡ ಜ್ಯೋತಿಬಾ ರೇಮಾನಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಂಜಯ್ ಗಸ್ತಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯ ಮನೋಹರ ದಾದಮಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

