लॉरीला आग लावल्याप्रकरणी, दोन गुन्हे दाखल.
बेळगाव : कागवाड तालुक्यातील ऐनापूर येथे सोमवारी रात्री गायीचे मांस वाहतूक करणाऱ्या लॉरीला आग लावण्यात आल्याची घटना घडली. या प्रकरणी कागवाड पोलीस ठाण्यात दोन स्वतंत्र गुन्हे दाखल करण्यात आले आहेत.
या संदर्भात माहिती देताना जिल्हा पोलिस अधीक्षक भीमशंकर गुळेद यांनी सांगितले की, अवैधरीत्या गायीचे मांस वाहतूक करणाऱ्या लॉरीवर गोहत्याबंदी कायदा व प्राणी अत्याचार प्रतिबंधक कायदा अंतर्गत कारवाई करून दोघांना अटक करण्यात आली आहे.
तर लॉरीला आग लावण्याच्या प्रकरणी दरोडा व ॲट्रॉसिटी कायद्यान्वये पाच जणांना ताब्यात घेऊन चौकशी सुरू आहे. तपास वेगाने सुरू असून दोषींवर कठोर कायदेशीर कारवाई केली जाईल, असे त्यांनी स्पष्ट केले.
रायबाग तालुक्यातील कुडचीहून हैदराबादकडे अवैध गोमांस घेऊन जात असताना, ऐनापूर येथे सोमवारी रात्री नागरिकांनी लॉरी अडवून तिला आग लावली होती.
ಲಾರಿಗೆ ಬೆಂಕಿ: ಎರಡು ಪ್ರಕರಣ ದಾಖಲು
ಬೆಳಗಾವಿ: ಕಾಗವಾಡ ತಾಲೂಕು ಐನಾಪುರದಲ್ಲಿ ಸೋಮವಾರ ರಾತ್ರಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡದಲ್ಲಿ ಎರಡು ಪ್ರಕರಣ ದಾಖಲಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಭೀಮಶಂಕರ ಗುಳೇದ ಅವರು, ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆ ಅಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾರಿಗೆ ಬೆಂಕಿ ಹಚ್ಚಿದ್ದು ದರೋಡೆ ಮತ್ತು ಅಟ್ರಾಸಿಟಿ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಯಬಾಗ ತಾಲೂಕು ಕುಡಚಿಯಿಂದ ಹೈದರಾಬಾದಗೆ ಲಾರಿಯಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದಾಗ ಐನಾಪುರದಲ್ಲಿ ಸೋಮವಾರ ರಾತ್ರಿ ನಾಗರಿಕರು ಲಾರಿ ತಡೆದು ಬೆಂಕಿ ಹಚ್ಚಿದ್ದರು ಎಂದು ತಿಳಿದು ಬಂದಿದೆ.

