लोंढा येथे श्रीराम जन्मभूमी मंदिर उद्घाटन वर्धापन दिन व गणेश जयंतीनिमित्त तिळगुळ व हळदी-कुंकू समारंभ उत्साहात..
खानापूर : अयोध्या येथील नव्याने बांधण्यात आलेल्या श्रीराम जन्मभूमी मंदिराच्या उद्घाटनाच्या वर्धापन दिनानिमित्त तसेच गणेश जयंतीच्या शुभ मुहूर्तावर लोंढा (ता. खानापूर) येथे विविध स्त्री संघटनांच्या वतीने तिळगुळ व हळदी-कुंकू समारंभ मोठ्या उत्साहात पार पडला.

या समारंभाचे आयोजन सर्वोदय स्त्री शक्ती संघ, विजय ज्योती स्त्री शक्ती संघ, अरुणोदय स्त्री शक्ती संघ व सरस्वती महिला मंडळ यांच्या संयुक्त विद्यमाने करण्यात आले होते. श्रीराम जन्मभूमी मंदिराच्या उद्घाटनाच्या निमित्ताने महिलांमध्ये सामाजिक ऐक्य, स्नेहभाव आणि संस्कृती जपण्याचा उद्देश या कार्यक्रमामागे होता.
कार्यक्रमाची सुरुवात मान्यवरांच्या उपस्थितीत करण्यात आली. यावेळी ग्रामपंचायत सदस्य संतोष चितळे, पोलीस विवेक वाडियार, सीडीपीओ विक्रम, एसीडीपीओ शारदा मराठे, सिनियर सुपरवायझर नंदा यांच्यासह मेघा मिठारी, उर्मिला सावंत, उर्मिला मिराशी, कांती सावंत, शांता खंडोरी आदी मान्यवर उपस्थित होते.
या प्रसंगी महिलांनी एकमेकींना तिळगुळ देत “तिळगुळ घ्या, गोड गोड बोला” असा संदेश दिला. तसेच हळदी-कुंकू कार्यक्रमातून महिलांमध्ये आपुलकी, स्नेह व सामाजिक सलोखा अधिक दृढ झाला. पारंपरिक पद्धतीने साजरा करण्यात आलेल्या या समारंभात मोठ्या संख्येने महिलांचा सहभाग लाभला.
स्त्री संघटनांच्या या उपक्रमाचे परिसरातील नागरिकांकडून कौतुक करण्यात आले असून, धार्मिक व सांस्कृतिक परंपरा जपण्याबरोबरच महिलांना एकत्र आणणारा हा उपक्रम प्रेरणादायी ठरल्याचे मत उपस्थितांनी व्यक्त केले.
ಲೊಂಡಾದಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ಉದ್ಘಾಟನಾ ವಾರ್ಷಿಕೋತ್ಸವ ಹಾಗೂ ಗಣೇಶ ಜಯಂತಿ ಪ್ರಯುಕ್ತ ಎಳ್ಳು ಬೆಲ್ಲ ಹಂಚುವ ಹಾಗೂ ಅರಿಶಿನ –ಕುಂಕುಮ ಸಮಾರಂಭ ಸಂಭ್ರಮದಿಂದ ನೆರವೇರಿತು..
ಖಾನಾಪುರ : ಅಯೋಧ್ಯೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ಶ್ರೀರಾಮ ಜನ್ಮಭೂಮಿ ಮಂದಿರದ ಉದ್ಘಾಟನೆಯ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಗಣೇಶ ಜಯಂತಿಯ ಶುಭ ಮುಹೂರ್ತದಲ್ಲಿ ಲೊಂಡಾ (ತಾ. ಖಾನಾಪುರ) ಗ್ರಾಮದಲ್ಲಿ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ಎಳ್ಳು ಬೆಲ್ಲ ಹಂಚುವ ಹಾಗೂ ಸುಹಾಸನೀಯರಿಗೆ ಅರಿಶಿನ –ಕುಂಕುಮ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಯಿತು.
ಈ ಸಮಾರಂಭವನ್ನು ಸರ್ವೋದಯ ಸ್ತ್ರೀ ಶಕ್ತಿ ಸಂಘ, ವಿಜಯ ಜ್ಯೋತಿ ಸ್ತ್ರೀ ಶಕ್ತಿ ಸಂಘ, ಅರುಣೋದಯ ಸ್ತ್ರೀ ಶಕ್ತಿ ಸಂಘ ಮತ್ತು ಸರಸ್ವತಿ ಮಹಿಳಾ ಮಂಡಳ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಶ್ರೀರಾಮ ಜನ್ಮಭೂಮಿ ಮಂದಿರ ಉದ್ಘಾಟನೆಯ ಸ್ಮರಣಾರ್ಥವಾಗಿ ಮಹಿಳೆಯರಲ್ಲಿ ಸಾಮಾಜಿಕ ಏಕತೆ, ಸೌಹಾರ್ದತೆ ಹಾಗೂ ಸಂಸ್ಕೃತಿ ಸಂರಕ್ಷಣೆಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಗಣ್ಯರ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಚಿತಳೆ, ಪೊಲೀಸ್ ವಿವೇಕ ವಡಿಯಾರ್, ಸಿಡಿಪಿಒ ವಿಕ್ರಮ್, ಎಸಿಡಿಪಿಒ ಶಾರದಾ ಮರಾಠೆ, ಸೀನಿಯರ್ ಸೂಪರ್ವೈಸರ್ ನಂದಾ ಅವರೊಂದಿಗೆ ಮೇಘಾ ಮಿಠಾರಿ, ಉರ್ಮಿಲಾ ಸಾವಂತ, ಉರ್ಮಿಲಾ ಮಿರಾಶಿ, ಕಾಂತಿ ಸಾವಂತ, ಶಾಂತಾ ಖಂಡೋರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಮಹಿಳೆಯರು ಪರಸ್ಪರ ಎಳ್ಳು ಬೆಲ್ಲ ನೀಡಿ ಸಿಹಿಯಾಗಿ ಮಾತನಾಡಿ” ಎಂಬ ಸಂದೇಶವನ್ನು ನೀಡಿದರು. ಅರಿಶಿನ –ಕುಂಕುಮ ಕಾರ್ಯಕ್ರಮದ ಮೂಲಕ ಮಹಿಳೆಯರ ನಡುವೆ ಆತ್ಮೀಯತೆ, ಸ್ನೇಹಭಾವ ಮತ್ತು ಸಾಮಾಜಿಕ ಸೌಹಾರ್ದತೆ ಮತ್ತಷ್ಟು ಬಲವಾಯಿತು. ಪರಂಪರೆ ರೀತಿಯಲ್ಲಿ ಆಚರಿಸಲಾದ ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಸ್ತ್ರೀ ಸಂಘಟನೆಗಳ ಈ ಉಪಕ್ರಮಕ್ಕೆ ಸ್ಥಳೀಯ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಜೊತೆಗೆ ಮಹಿಳೆಯರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ರಮ ಪ್ರೇರಣಾದಾಯಕವಾಗಿದೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.



