भटक्या कुत्र्यांसह मोकाट जनावरांच्या समस्येबाबत लोंढा ग्रामपंचायतीला निवेदन.
लोंढा : प्रतिनिधी
लोंढा गावातील विविध भागांत भटक्या कुत्र्यांचा वाढता उपद्रव तसेच रस्त्यावर मोकाट फिरणाऱ्या जनावरांमुळे नागरिकांना होत असलेल्या त्रास व अपघाताच्या धोक्याकडे लक्ष वेधत कर्नाटक युवा रक्षणा वेदिकेच्या लोंढा ग्राम घटकाच्यावतीने बुधवार, 23 सप्टेंबर 2026 रोजी ग्रामपंचायत विकास अधिकाऱ्यांना निवेदन देण्यात आले.

गावातील भटक्या कुत्र्यांकडून नागरिकांवर हल्ले होण्याच्या घटना घडत असून, त्याचा नागरिकांच्या सुरक्षिततेवर परिणाम होत असल्याचे निवेदनात नमूद करण्यात आले. तसेच रस्त्यांवर मोकाट फिरणाऱ्या जनावरांमुळे वाहनचालकांना अडथळा निर्माण होऊन अपघाताचा धोका वाढत असल्याची बाबही ग्रामपंचायत प्रशासनाच्या निदर्शनास आणून देण्यात आली.
निवेदन स्वीकारल्यानंतर ग्रामपंचायत विकास अधिकाऱ्यांनी संबंधित समस्यांची दखल घेत याबाबत आगामी काळात योग्य ती कार्यवाही करण्यात येईल, असे आश्वासन दिले.
यावेळी कर्नाटक युवा रक्षण वेदिकेचे लोंढा ग्राम घटक अध्यक्ष परशुराम चिकमणी, खानापूर तालुका सचिव संतोष चितळे, ग्राम घटक पदाधिकारी जयवंत नाईक, नवाज जुनेदी, जुनेद शेख, कुमार पाटील, उमरफारूक मुल्ला, गंगाजी नाईक तसेच ग्रामस्थ उपस्थित होते.
ಬೀದಿ ನಾಯಿಗಳು ಹಾಗೂ ಅಲೆದಾಡುವ ಜಾನುವಾರುಗಳ ಸಮಸ್ಯೆ ಕುರಿತು ಲೋಂಡಾ ಗ್ರಾಮ ಪಂಚಾಯಿತಿಗೆ ಮನವಿ.
ಲೋಂಡಾ : ಪ್ರತಿನಿಧಿ
ಲೋಂಡಾ ಗ್ರಾಮದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಹಾಗೂ ರಸ್ತೆಯಲ್ಲಿ ಅಲೆದಾಡುವ ಜಾನುವಾರುಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಮತ್ತು ಅಪಘಾತದ ಅಪಾಯದ ಬಗ್ಗೆ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಲೋಂಡಾ ಗ್ರಾಮ ಘಟಕದ ವತಿಯಿಂದ ಬುಧವಾರ, 23 ಸೆಪ್ಟೆಂಬರ್ 2026 ರಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡುವ ಘಟನೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಸುರಕ್ಷತೆಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ದ್ವಿಚಕ್ರ ವಾಹನ ಸವಾರರು ಬೀದಿ ನಾಯಿಗಳ ಹಾವಳಿಯಿಂದ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅದೇ ರೀತಿ ಲೋಂಡಾ ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಜಾನುವಾರುಗಳು ಮೇವಿಗಾಗಿ ಹಾಗೂ ಇತರ ಕಾರಣಗಳಿಂದ ಮಿತಿ ಮೀರಿ ಅಲೆದಾಡುತ್ತಿವೆ. ರಸ್ತೆಯ ಮಧ್ಯಭಾಗದಲ್ಲೇ ಜಾನುವಾರುಗಳು ನಿಂತುಕೊಳ್ಳುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ವಾಹನ ಚಾಲಕರು ಜಾನುವಾರುಗಳನ್ನು ತಪ್ಪಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟಾಗುವ ಮುನ್ನ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ತರಲಾಯಿತು.
ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದರ ಜೊತೆಗೆ ರಸ್ತೆಯಲ್ಲಿ ಅಲೆದಾಡುವ ಜಾನುವಾರುಗಳ ಮಾಲೀಕರಿಗೆ ಸೂಕ್ತ ಸೂಚನೆ ನೀಡಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಲೋಂಡಾ ಗ್ರಾಮ ಘಟಕದ ವತಿಯಿಂದ ಮನವಿ ಮಾಡಲಾಯಿತು.
ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಬೀದಿ ನಾಯಿಗಳು ಹಾಗೂ ಅಲೆದಾಡುವ ಜಾನುವಾರುಗಳ ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಂಡಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಲೋಂಡಾ ಗ್ರಾಮ ಘಟಕದ ಅಧ್ಯಕ್ಷ ಪರಶುರಾಮ ಚಿಕಮಣಿ, ಖಾನಾಪುರ ತಾಲೂಕು ಕಾರ್ಯದರ್ಶಿ ಸಂತೋಷ ಚಿತಳೆ, ಗ್ರಾಮ ಘಟಕದ ಪದಾಧಿಕಾರಿಗಳಾದ ಜಯವಂತ ನಾಯ್ಕ, ನವಾಜ್ ಜುನೇದ, ಜುನೇದ್ ಶೇಖ್, ಕುಮಾರ್ ಪಾಟೀಲ್, ಉಮರ್ಫಾರೂಕ್ ಮುಲ್ಲಾ, ಗಂಗಾಜಿ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



