माजी सरन्यायाधीश गवईवर बूट फेकणाऱ्या वकिलाला न्यायालयातच मारहाण.
सर्वोच्च न्यायालयाचे माजी मुख्य न्यायाधीश भूषण गवई यांच्यावर बूट फेकणारे वकील राकेश किशोर यांना दिल्लीच्या करकरडूमा न्यायालय परिसरात वकिलांनी चप्पलांनी मारहाण केली. माजी मुख्य न्यायाधीश भूषण गवई यांच्यावर बूट फेकून गोंधळ घालणारे वकील राकेश किशोर यांना भूषण गवई यांनी माफ केले. तथापि, काही वकिलांनी त्यांना न्यायालय परिसरातच चप्पलांनी मारहाण केली असल्याचा एक व्हिडीओ सध्या व्हायरल होतोय.

राकेश किशोर न्यायालयात उपस्थित असताना ही घटना घडली तेव्हा काही वकिलांनी त्यांच्यावर हल्ला केला. राकेश यांना ढकलण्यात आले आणि चप्पलांनी हल्ला करण्यात आला. यावेळी न्यायालयाच्या सुरक्षा कर्मचाऱ्यांनी हस्तक्षेप करून त्यांना बाहेर काढले. दरम्यान, भूषण गवई यांच्यावर बूट फेकल्यानंतर राकेश किशोर यांना बार कौन्सिलने निलंबित केले होते. त्यांनी केलेल्या कृतीचा व्यापक निषेध होत असताना किशोर यांनी त्यांना त्यांच्या कृत्याबद्दल कोणताही पश्चात्ताप नसल्याचे म्हटले होते.
ಮಾಜಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಬೂಟ್ ಎಸೆದ ವಕೀಲರಿಗೆ ನ್ಯಾಯಾಲಯದ ಆವರಣದಲ್ಲಿ ಬೇರೆ ವಕೀಲರಿಂದ ಚಪ್ಪಲಿಯಿಂದ ದಾಳಿ.
ದೆಹಲಿ: ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರ ಮೇಲೆ ಬೂಟ್ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ದೆಹಲಿಯ ಕರ್ಕರಡೂಮಾ ನ್ಯಾಯಾಲಯ ಆವರಣದಲ್ಲಿ ಬೇರೆ ವಕೀಲರೇ ಚಪ್ಪಲಿಯಿಂದ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ನಡೆದಿದೆ.
ಮಾಜಿ ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರ ಮೇಲೆ ಬೂಟ್ ಎಸೆದು ಗಲಭೆ ಸೃಷ್ಟಿಸಿದ ರಾಕೇಶ್ ಕಿಶೋರ್ ಅವರನ್ನು ಗವಾಯಿ ಅವರು ಕ್ಷಮಿಸಿದ್ದರೂ, ಆದರೂ ಕೆಲವು ವಕೀಲರು ನ್ಯಾಯಾಲಯದ ಆವರಣದಲ್ಲೇ ಅವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಕೇಶ್ ಕಿಶೋರ್ ನ್ಯಾಯಾಲಯದಲ್ಲಿ ಹಾಜರಿದ್ದ ವೇಳೆ ಈ ಘಟನೆ ಸಂಭವಿಸಿತು. ಕೆಲವು ವಕೀಲರು ಅವರನ್ನು ತಳ್ಳಾಡಿ ಚಪ್ಪಲಿಯಿಂದ ಹೊಡೆದಿರುವುದು ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. ನಂತರ ನ್ಯಾಯಾಲಯದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.
ಇದೇ ವೇಳೆ, ಭೂಷಣ ಗವಾಯಿ ಅವರ ಮೇಲೆ ಬೂಟ್ ಎಸೆದ ಘಟನೆ ನಂತರ ಬಾರ್ ಕೌನ್ಸಿಲ್ ನಿಂದ ರಾಕೇಶ್ ಕಿಶೋರ್ ಅವರನ್ನು ನಿಲಂಬಿಸಿತ್ತು. ತಮ್ಮ ಕ್ರಿಯೆಗೆ ವಿಷಾದ ವ್ಯಕ್ತಪಡಿಸುವ ಬದಲು, ತಾನು ಮಾಡಿದ ಕೃತ್ಯ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಕಿಶೋರ್ ಹೇಳಿದ್ದನ್ನು ಗಮನಿಸಬಹುದಾಗಿದೆ.

