मे. लैला शुगर्सचा 2025-26 ऊस गाळप हंगाम 12 फेब्रुवारीला संपणार ; अध्यक्ष व कार्यकारी संचालकांची माहिती.
खानापूर : मे. लैला शुगर्स प्रायव्हेट लिमिटेड, खानापूर (ता. खानापूर, जि. बेळगाव) कारखान्याचा सन 2025-26 चा ऊस गाळप हंगाम गुरुवार, दिनांक 12 फेब्रुवारी 2026 रोजी समाप्त करण्याचा निर्णय घेण्यात आला आहे. अशी माहिती कारखान्याचे चेअरमन व खानापूर तालुक्याचे आमदार विठ्ठल हलगेकर व कार्यकारी संचालक (एमडी) सदानंद पाटील यांनी दिली आहे. तसेच पुढे माहिती देताना त्यांनी सांगितले आहे की, यावर्षी कारखाना 3,00000 (तीन लाख) टन ऊस गाळप पूर्ण करणार असून त्या दृष्टीने वाटचाल सुरू असल्याचे त्यांनी सांगितले.
या संदर्भात कारखाना प्रशासनाने ऊस उत्पादक शेतकरी बांधवांसाठी जाहीर प्रकटन जारी केले आहे. कारखान्याच्या कार्यक्षेत्रातील सर्व शेतकऱ्यांनी आपल्याकडे शिल्लक असलेला ऊस तोडून, दिनांक 12 फेब्रुवारी 2026 रोजी दुपारी 12 वाजेपर्यंत कारखान्याला पुरवठा करावा, असे आवाहन करण्यात आले आहे.
प्रकटनात स्पष्ट करण्यात आले आहे की, ठरविलेल्या मुदतीनंतर कार्यक्षेत्रात ऊस शिल्लक राहिल्यास त्याची जबाबदारी कारखान्याची राहणार नाही. त्यामुळे शेतकऱ्यांनी वेळेत ऊस पुरवठा करून सहकार्य करावे, असे कारखान्याचे चेअरमन व खानापूर तालुक्याचे आमदार विठ्ठल हलगेकर तसेच कार्यकारी संचालक सदानंद पाटील यांनी कळविले आहे.
ಲೈಲಾ ಶುಗರ್ಸ್ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಕಬ್ಬು ನುರಿಸುವ ಕಬ್ಬು ಹಂಗಾಮು ಫೆಬ್ರವರಿ 12ರಂದು ಮುಕ್ತಾಯ; ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಿಂದ ಮಾಹಿತಿ.
ಖಾನಾಪುರ : ಲೈಲಾ ಶುಗರ್ಸ್ ಪ್ರೈವೇಟ್ ಲಿಮಿಟೆಡ್, ಖಾನಾಪುರ (ತಾ. ಖಾನಾಪುರ, ಜಿ. ಬೆಳಗಾವಿ) ಕಾರ್ಖಾನೆಯ 2025-26ರ ಕಬ್ಬು ನುರಿಸುವ ಹಂಗಾಮನ್ನು ಗುರುವಾರ, ಫೆಬ್ರವರಿ 12, 2026ರಂದು ಮುಕ್ತಾಯಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಕಾರ್ಖಾನೆಯ ಚೇರ್ಮನ್ ಹಾಗೂ ಖಾನಾಪುರ ತಾಲೂಕು ಶಾಸಕ ವಿಠ್ಠಲ್ ಹಲಗೇಕರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ (ಎಂಡಿ) ಸದಾನಂದ ಪಾಟೀಲ್ ಮಾಹಿತಿ ನೀಡಿದ್ದಾರೆ. ತದನಂತರ ಮುಂದೆ ಮಾತನಾಡುತ್ತಾ ಅವರು, ಈ ವರ್ಷ ಕಾರ್ಖಾನೆ 3,00000 (ಮೂರು ಲಕ್ಷ) ಟನ್ ಕಬ್ಬು ನುರಿಸುವ ಕಾರ್ಯ ಪುರ್ಣಗೊಳಿಸುವ ಗುರಿಯನ್ನು ಹೊಂದಿದ್ದು, ಆ ದಿಶೆಯಲ್ಲಿ ಪ್ರಗತಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ಕುರಿತು ಕಾರ್ಖಾನಾ ಆಡಳಿತವು ಕಬ್ಬು ಉತ್ಪಾದಕ ರೈತರಿಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು. ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿರುವ ಎಲ್ಲಾ ರೈತರು ತಮ್ಮ ಬಳಿ ಉಳಿದಿರುವ ಕಬ್ಬನ್ನು ಕಟಾವು ಮಾಡಿ, ಫೆಬ್ರವರಿ 12, 2026ರ ಮಧ್ಯಾಹ್ನ 12 ಗಂಟೆಯೊಳಗೆ ಕಾರ್ಖಾನೆಗೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿರುವುದೇನೆಂದರೆ, ನಿಗದಿತ ಅವಧಿಯ ನಂತರ ಕಾರ್ಯಕ್ಷೇತ್ರದಲ್ಲಿ ಕಬ್ಬು ಉಳಿದರೆ ಅದರ ಜವಾಬ್ದಾರಿ ಕಾರ್ಖಾನೆಯದು ಇರುವುದಿಲ್ಲ. ಆದ್ದರಿಂದ ರೈತರು ಸಮಯಕ್ಕೆ ಸರಿಯಾಗಿ ಕಬ್ಬು ಪೂರೈಕೆ ಮಾಡಿ ಸಹಕಾರ ನೀಡಬೇಕೆಂದು ಕಾರ್ಖಾನೆಯ ಚೇರ್ಮನ್ ಹಾಗೂ ಖಾನಾಪುರ ತಾಲೂಕು ಶಾಸಕ ವಿಠ್ಠಲ್ ಹಲಗೇಕರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸದಾನಂದ ಪಾಟೀಲ್ ಮನವಿ ಮಾಡಿದ್ದಾರೆ.



