कुणकीकोप गावच्या लहान वीद्यार्थ्यांची अशीही, समाज सेवा. श्रमदानातून केली रस्त्याची दुरुस्ती
खानापूर ; खानापूर तालुक्यातील नंदगड- बीडी मार्गापासून काही अंतरावर असलेलें कुणकीकोप गांव, बेकवाड कत्री पासून अगदी नजीकच्या अंतरावर असलेले, परंतु प्रसीध्दीपासुन अलीप्त असलेलं हे गांव, कधी नावारूपास आलेच नाही. तालुक्यातील बऱ्याच लोकांना सुध्दा हे गांव अस्तित्वात आहे म्हणून माहित नाही. रहाते राहीले ते तालुक्यातील राजकारणी, या लोकांना या गावची संपूर्ण माहिती आहे. कारण ही तसेच आहे. निवडणुका आल्या की मतांची भीक मागायला येण्यापुरता हे गाव मर्यादित ठेवले आहे.
नंदगड बीडी मार्गापासून, या गावांसाठी जाणारा रस्ता चिखलमय झाला असून, यामधून विद्यार्थ्यांना पायपीट करत शाळा गाठावी लागते. सगळीकडे अर्ज विनंती करून झाल्या, परंतु या गावचा रस्ता काही झाला नाही. कारण हा रस्ता, आपल्या शेतातून जातो, असे म्हणून जुंझवाडच्या शेती मालकाने, डांबरीकरण करण्यास वीरोध केला. त्यामुळे कंत्राटदार काम अर्धवट सोडून गेला. त्यानंतर या रस्त्याचे डांबरीकरण कधी झालेच नाही.
यावर्षी पाऊस जास्त झाल्याने, संपूर्ण रस्ता चिखलमय झाला होता. विद्यार्थ्यांना रस्त्याने शाळेला जाताना त्रास होत, होता. शेवटी गावातील लहान विद्यार्थ्यांनी, या रस्त्यात साचलेले पाणी, श्रमदानाने चर मारून बाहेर काढले. व काही खड्डे बुजविले, त्यासाठी, या लहान मुलांचे कौतुक करावेसे वाटते. हा प्रश्न सोडविण्यासाठी, या भागातील सर्वपक्षीय नेते मंडळींनी एकत्र येऊन, सदर शेती मालकाबरोबर चर्चा करून, हा प्रश्न सोडविल्यास, हा रस्ता होण्यास विलंब होणार नाही. त्यासाठी बेकवाड, नंदगड, जुंझवाड परिसरातील नेते मंडळींनी व तालुक्याच्या आमदार विठ्ठलराव हलगेकर व माजी आमदार अरविंद पाटील यांनी प्रयत्न केल्यास, यातून निश्चितच मार्ग निघेल.
ಕುಣಕಿಕೋಪ್ ಗ್ರಾಮದ ಪೂಟ ವಿದ್ಯಾರ್ಥಿಗಳಿಂದ ಹಿಗೂ ಒಂದು ಸಮಾಜ ಸೇವೆ. ಶ್ರಮದಾನದಿದ ಮೂಲಕ ರಸ್ತೆ ದುರಸ್ತಿ.
ಖಾನಾಪುರ; ಖಾನಾಪುರ ತಾಲೂಕಿನ ಕುಣಕಿಕೋಪ್ ಗ್ರಾಮ, ನಂದಗಢ-ಬಿಡಿ ರಸ್ತೆಯಿಂದ ಸ್ವಲ್ಪ ದೂರ, ಬೇಕವಾಡ ಕತ್ರಿಗೆ ಅತ್ಯಂತ ಸಮೀಪ, ಆದರೆ ಖ್ಯಾತಿಯಿಂದ ವಂಚಿತವಾಗಿರುವ ಈ ಗ್ರಾಮ ಅಸ್ತಿತ್ವಕ್ಕೆ ಬಂದಿಲ್ಲ. ತಾಲೂಕಿನ ಅನೇಕ ಜನರಿಗೆ ಈ ಗ್ರಾಮ ಇದೆ ಎಂಬುದೇ ಗೊತ್ತಿಲ್ಲ. ಆದರೆ ತಾಲೂಕಾ ರಾಜಕಾರಣಿಗಳಿಗೆ ಈ ಗ್ರಾಮದ ಬಗ್ಗೆ ಸಂಪೂರ್ಣ ಜ್ಞಾನವಿದೆ ಕಾರಣ ಒಂದೇ. ಚುನಾವಣೆ ಬಂದಾಗ ಮತ ಭಿಕ್ಷೆ ಬೇಡಲು ಮಾತ್ರ ಈ ಗ್ರಾಮವನ್ನು ಗ್ರಹಿಸಲಾಗಿದೆ.
ನಂದಗಡ ಬೀಡಿ ಮಾರ್ಗದಿಂದ ಈ ಗ್ರಾಮಗಳಿಗೆ ತೆರಳುವ ರಸ್ತೆ ಕೆಸರುಮಯವಾಗಿದ್ದು, ಈ ರಸ್ತೆಯ ಮೂಲಕ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿದೆ. ಎಲ್ಲೆಂದರಲ್ಲಿ ಮನವಿ ಸಲ್ಲಿಸಿದರೂ ಈ ಗ್ರಾಮದ ರಸ್ತೆ ಸರಿ ಪಡಿಸಲು ಆಗಲಿಲ್ಲ. ಜುಂಜ್ವಾಡ್ ಗ್ರಾಮದ ಕೇಲ ರೈತರೂ ಹೋಂದಿರುವ ಫಾರ್ಮಾ ಮಾಲೀಕರು ರಸ್ತೆಯು ಅವರ ಜಮೀನಿನಲ್ಲಿ ಹಾದುಹೋಗುತ್ತದೆ ಎಂಬ ಕಾರಣಕ್ಕೆ ಡಾಂಬರೀಕರಣವನ್ನು ವಿರೋಧಿಸಿದರು ಹೀಗಾಗಿ ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ಬಿಟ್ಟಿದ್ದಾರೆ. ಆ ನಂತರ ಈ ರಸ್ತೆ ಡಾಂಬರೀಕರಣ ಆಗಲೇ ಇಲ್ಲ.
ಈ ವರ್ಷ ಸುರಿದ ಭಾರಿ ಮಳೆಗೆ ಇಡೀ ರಸ್ತೆ ಕೆಸರುಮಯವಾಗಿತ್ತು. ವಿದ್ಯಾರ್ಥಿಗಳು ರಸ್ತೆ ಮಾರ್ಗವಾಗಿ ಶಾಲೆಗೆ ಹೋಗಲು ತೊಂದರೆಯಾಗುತ್ತಿತ್ತು. ಕೊನೆಗೆ ಗ್ರಾಮದ ಪೂಟ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಗ್ರಹವಾದ ನೀರನ್ನು ಶ್ರಮದಾನದ ಮೂಲಕ ಹೊರ ತೆಗೆದರು. ಮತ್ತು ಕೆಲವು ಗುಂಡಿಗಳನ್ನು ಮುಚ್ಚಿದರು ಈ ಕಾರ್ಯಕ್ಕೆ ಮಕ್ಕಳನ್ನು ಪ್ರಶಂಸಿಸಬೇಕಾಗಿದೆ. ಈ ಸಮಸ್ಯೆ ಬಗೆಹರಿಸಲು ಈ ಭಾಗದ ಸರ್ವಪಕ್ಷಗಳ ಮುಖಂಡರು ಒಗ್ಗೂಡಿ ಮಾತನಾಡಿ ತೋಟದ ಮಾಲೀಕರೊಂದಿಗೆ ಚರ್ಚಿಸಿದರೆ ಈ ಸಮಸ್ಯೆ ಬಗೆಹರಿಸಿ ರಸ್ತೆ ಪೂರ್ಣ ಮಾಡಲು ಯಾವುದೇ ತೊಂದರೆ ಆಗದು. ಇದಕ್ಕೆ ಬೇಕವಾಡ, ನಂದಗಡ, ಜುಂಜವಾಡ ಭಾಗದ ಮುಖಂಡರು ಹಾಗೂ ತಾಲೂಕಾ ಶಾಸಕ ವಿಠ್ಠಲರಾವ್ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ ಪ್ರಯತ್ನ ನಡೆಸಿದರೆ ಖಂಡಿತವಾಗಿಯೂ ಈ ರಸ್ತೆ ಪೂರ್ಣ ಮಾಡಲು ತೊಂದರೆ ಆಗದು.