कोंकण रेल्वे वापरकर्ते सल्लागार समितीची बैठक : रेल्वे सेवांच्या विस्ताराचे महत्त्वाचे निर्णय
मडगाव (गोवा) : कोंकण रेल्वे वापरकर्ते सल्लागार समितीची (KRUCC) बैठक मडगाव येथे यशस्वीरीत्या पार पडली. या बैठकीचे अध्यक्षस्थान उत्तर कन्नड लोकसभा मतदारसंघाचे खासदार श्री. विश्वेश्वर हेगडे कागेरी यांनी भूषविले. कर्नाटक, केरळ, गोवा आणि महाराष्ट्रातील विविध रेल्वे संबंधित प्रश्न व मागण्यांवर या बैठकीत सविस्तर चर्चा करण्यात आली.
बैठकीतील प्रमुख निर्णय व घोषणा :
- एसएमव्हीबी-मुरुडेश्वर एक्सप्रेसचा विस्तार : रेल्वे क्रमांक 16585/86 (SMVB-मुरुडेश्वर एक्सप्रेस) ही गाडी गोव्याच्या वास्कोपर्यंत वाढविण्याचा ठराव सर्वानुमते घेण्यात आला. या संदर्भातील नवी शिफारस रेल्वे मंडळाकडे पाठविण्यात येणार आहे.
- कारवार-मडगाव मेमू रेल्वेचा विस्तार : कारवार-मडगावदरम्यान धावणाऱ्या मेमू रेल्वेला गोव्याच्या पेरणेम पर्यंत वाढविण्याचा अंतिम निर्णय घेण्यात आला असून लवकरच त्याची अंमलबजावणी होणार आहे. या निर्णयामुळे विशेषतः किनारपट्टी भागातील प्रवासी व विद्यार्थ्यांना मोठा लाभ होणार आहे.
- पंचगंगा एक्सप्रेसला अतिरिक्त डबे : रेल्वे क्रमांक 16595/96 (कारवार-बंगळूरू पंचगंगा एक्सप्रेस) या गाडीला सध्याच्या 19 डब्यांबरोबर आणखी 3 डबे जोडण्याची शिफारस रेल्वे मंडळाला पाठविण्यात येणार आहे. त्यामुळे या मार्गावरील प्रवाशांच्या वाढत्या संख्येला पूरक सुविधा उपलब्ध होतील.
नवीन मोबाईल ॲपचे उद्घाटन :
या प्रसंगी खासदार श्री. विश्वेश्वर हेगडे कागेरी यांच्या हस्ते ‘के.आर. मिरर’ (KR Mirror) या नव्या मोबाईल अॅपचे लोकार्पण करण्यात आले. या ॲपच्या माध्यमातून प्रवाशांना रेल्वे गाड्यांची स्थिती, वेळापत्रक आणि इतर सेवांची माहिती सहज मिळणार आहे.
बैठकीत उत्तर कन्नड जिल्ह्यातील विविध रेल्वे स्थानकांवरील प्लॅटफॉर्म, शेल्टर आणि इतर सुविधा प्रवाशांना उपलब्ध करून देण्याबाबतही चर्चा झाली. कोंकण रेल्वे सीएमडी श्री. संतोष कुमार झा यांच्यासह एकूण आठ लोकसभा खासदार या बैठकीत सहभागी झाले होते. या बैठकीत घेतलेले निर्णय कोंकण रेल्वे मार्गावरील प्रवाशांच्या सोयीसाठी महत्त्वपूर्ण ठरणार आहेत.
ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ: ರೈಲು ಸೇವೆಗಳ ವಿಸ್ತರಣೆಗೆ ನಿರ್ಣಯ.
ಕೊಂಕಣ ರೈಲ್ವೆಯ ಬಳಕೆದಾರರ ಸಮಾಲೋಚನಾ ಸಮಿತಿ (KRUCC) ಸಭೆಯು ಗೋವಾದ ಮಡಗಾಂನಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಭೆಯ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಹಿಸಿದ್ದರು. ಸಭೆಯಲ್ಲಿ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ರೈಲ್ವೆ ಸಂಬಂಧಿತ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಗಹನವಾದ ಚರ್ಚೆ ನಡೆಯಿತು.
ಪ್ರಮುಖ ನಿರ್ಣಯಗಳು ಮತ್ತು ಪ್ರಕಟಣೆಗಳು:
- SMVB-ಮುರುಡೇಶ್ವರ ಎಕ್ಸ್ಪ್ರೆಸ್ ರೈಲು ವಿಸ್ತರಣೆ: ರೈಲು ಸಂಖ್ಯೆ 16585/86 (SMVB-ಮುರುಡೇಶ್ವರ ಎಕ್ಸ್ಪ್ರೆಸ್) ಅನ್ನು ಗೋವಾದ ವಾಸ್ಕೋವರೆಗೂ ವಿಸ್ತರಿಸಲು ರೈಲ್ವೆ ಮಂಡಳಿಗೆ ಮರುಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
- ಕಾರವಾರ-ಮಡಗಾಂ ಮೆಮು ರೈಲು ವಿಸ್ತರಣೆ: ಕಾರವಾರ-ಮಡಗಾಂ ನಡುವೆ ಸಂಚರಿಸುವ ಮೆಮು ರೈಲನ್ನು ಗೋವಾದ ಪೆರ್ನಮ್ ವರೆಗೆ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಸ್ತರಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಭೆಗೆ ತಿಳಿಸಲಾಯಿತು. ಈ ಕ್ರಮವು ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.
- ಪಂಚಗಂಗಾ ಎಕ್ಸ್ಪ್ರೆಸ್ಗೆ ಹೆಚ್ಚುವರಿ ಬೋಗಿಗಳು: ರೈಲು ಸಂಖ್ಯೆ 16595/96 (ಕಾರವಾರ-ಬೆಂಗಳೂರು) ಪಂಚಗಂಗಾ ಎಕ್ಸ್ಪ್ರೆಸ್ಗೆ ಈಗಿರುವ 19 ಬೋಗಿಗಳ ಜತೆಗೆ ಇನ್ನೂ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಗೆ ಸೂಚಿಸಲಾಯಿತು.
ಈ ನಿರ್ಧಾರದಿಂದಾಗಿ ಈ ಪ್ರಮುಖ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸಾಮರ್ಥ್ಯ ವೃದ್ಧಿಯಾಗಲಿದೆ. - ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ:
ಸಭೆಯ ಸಂದರ್ಭದಲ್ಲಿ, ಕೊಂಕಣ ರೈಲ್ವೆಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಹೊಸ ಮೊಬೈಲ್ ಅಪ್ಲಿಕೇಶನ್ ‘ಕೆ.ಆರ್. ಮಿರರ್’ (K R miror) ಅನ್ನು ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಡುಗಡೆ ಮಾಡಿದರು. ಈ ಆ್ಯಪ್ ಮೂಲಕ ಪ್ರಯಾಣಿಕರು ರೈಲುಗಳ ಸ್ಥಿತಿ, ವೇಳಾಪಟ್ಟಿ ಮತ್ತು ಇತರೆ ಸೇವೆಗಳ ಕುರಿತು ಮಾಹಿತಿ ಪಡೆಯಬಹುದು.
ಸಭೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಸಂಬಂಧಿತ ಇತರ ಸಮಸ್ಯೆಗಳ ಕುರಿತು ಕೂಡ ಚರ್ಚಿಸಲಾಯಿತು. ಸಭೆಯಲ್ಲಿ ಕೊಂಕಣ ರೈಲ್ವೆ ಸಿ.ಎಂ.ಡಿ. ಶ್ರೀ ಸಂತೋಷ್ ಕುಮಾರ್ ಝಾ ಸೇರಿದಂತೆ ಒಟ್ಟು ಎಂಟು ಲೋಕಸಭಾ ಸದಸ್ಯರು ಭಾಗವಹಿಸಿದ್ದರು. ಈ ಸಭೆಯ ನಿರ್ಣಯಗಳು ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲವನ್ನುi ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಪ್ಲಾಟ್ ಫಾರ್ಮ್, ಶೆಲ್ಟರ್ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು

