
कोंगळा येथील वृद्धाला बेळगाव रुग्णालयात नेल्याची अफवा; खोटी माहिती व्हायरल
खानापूर (ता. 1 ऑगस्ट): खानापूर तालुक्यातील भिमगड अभयारण्यात वसलेल्या कोंगळा येथील व्यंकट गावकर या 65 वर्षीय वृद्धाला बेळगाव येथील रुग्णालयात दाखल करण्यात आले असल्याची बातमी सध्या सोशल मीडियावर जोरात व्हायरल होत आहे. इतकेच नव्हे तर बेळगावचे जिल्हाधिकारी मोहम्मद रोशन यांनी देखील पत्रकार परिषदेत हीच माहिती दिली. मात्र, ही सर्व माहिती अपूर्ण व चुकीची असल्याचे स्थानिक नागरिकांनी स्पष्ट केले आहे.
“आपलं खानापूर”ने कोंगळा येथील नागरिक सूर्याजी पाटील यांच्याशी संपर्क साधून वस्तुस्थिती जाणून घेतली असता, वृत्त संपूर्णपणे खोटं व दिशाभूल करणारे असल्याचे स्पष्ट झाले. व्यंकट गावकर यांना बेळगाव रुग्णालयात नेण्यात आलेच नव्हते. अनेक उपचार करूनही उपयोग होत नसल्याने त्यांची प्रकृती अत्यंत गंभीर झाली होती. त्यामुळे नातेवाईक व गावकरी यांच्यातील समजुतीनुसार त्यांना रिक्षाने नेरसेपर्यंत आणि तेथून तिरडीवरून मूळ गावी कोंगळा येथे नेण्यात आले.
यावेळी वृद्धाचे वय 52 वर्षे असल्याचे भासवले गेले, ते देखील चुकीचे असून वास्तविक वय 65 वर्षे आहे. व्यंकट गावकर हे कायम आजारी राहत असल्याने त्यांनी उपचारासाठी आपल्या जावयाच्या (मुलीच्या) घरी गणेबैल येथे राहण्याचे ठरवले होते. व गेल्या एक वर्षापासून गणेबैल या ठिकाणी राहून उपचार घेत होते. परंतु उपचाराचा काहीही उपयोग न होता, त्यांची प्रकृती अत्यंत ढासळल्याने शेवटी गावकऱ्यांनी त्यांना त्यांच्या मूळ गावी परत नेण्याचा निर्णय घेतला.
दरम्यान, सरकार सध्या भिमगड अभयारण्यातील गावांचे पुनर्वसन करण्याच्या हालचाली करत आहे. या पार्श्वभूमीवर सदर घटनेचा वापर करून राजकीय भांडवल करण्याचा प्रकार घडत असल्याची चर्चा असून कोंगळा ग्रामस्थांनी अद्याप पुनर्वसनाबाबत कोणताही ठोस निर्णय घेतलेला नाही. येत्या गणेशोत्सवाच्या पार्श्वभूमीवर ग्रामसभा बोलावून पुनर्वसनाबाबत अंतिम निर्णय घेण्यात येणार आहे.
ಕೊಂಗಳ ಗ್ರಾಮದ ಹಿರಿಯ ವ್ಯಕ್ತಿಯನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಅಪಪ್ರಚಾರ; ತಪ್ಪು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಖಾನಾಪುರ (ಆ.1): ಭೀಮಗಡ ಅಭಯಾರಣ್ಯದಲ್ಲಿ ಸ್ಥಿತ ಕೊಂಗಳಾ ಗ್ರಾಮದ 65 ವರ್ಷದ ವ್ಯಂಕಟ ಗಾವಕರ ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿಯು ಈತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹೊರಡಿಸಲಾಗಿದೆ. ಹಾಗೆಯೇ ಈ ವಿಷಯವನ್ನು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೂಡಾ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಆದರೆ, ಈ ಸಂಪೂರ್ಣ ಮಾಹಿತಿ ತಪ್ಪು ಹಾಗೂ ಅಪೂರ್ಣವಾಗಿದೆ ಎಂಬುದಾಗಿ ಸ್ಥಳೀಯ ನಾಗರಿಕರು ಸ್ಪಷ್ಟಪಡಿಸಿದ್ದಾರೆ.
“ಅಪಲ ಖಾನಾಪುರ” ಸುದ್ದಿ ಪೋರ್ಟಲ್ ಪರವಾಗಿ ನಾವು ಕೊಂಗಳ ಗ್ರಾಮದ ನಿವಾಸಿ ಸೂರ್ಯಾಜಿ ಪಾಟೀಲ ಅವರಿಂದ ಮಾಹಿತಿ ಸಂಗ್ರಹಿಸಿದಾಗ, ಸುದ್ದಿ ಸಂಪೂರ್ಣವಾಗಿ ಸುಳ್ಳು ಹಾಗೂ ದಿಕ್ಕು ತಪ್ಪಿಸುವಂತಿದೆ ಎಂಬುದಾಗಿ ತಿಳಿದುಬಂದಿದೆ. ವ್ಯಂಕಟ ಗಾವಕರ ಅವರನ್ನು ಬೆಳಗಾವಿ ಆಸ್ಪತ್ರೆಗೆ ತೆಗೆದುಕೊಂಡೇ ಹೋಗಲಾಗಿಲ್ಲ. ಅವರಿಗೆ ಹಲವಾರು ಚಿಕಿತ್ಸೆ ನೀಡಿದ ಬಳಿಕವೂ ಪ್ರಯೋಜನವಾಗದೆ ಅವರ ಆರೋಗ್ಯ ತುಂಬಾ ಗಂಭೀರಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪರಸ್ಪರ ಸಮಜಾಯಶಿಯಿಂದ ಅವರಿಗೆ ರಿಕ್ಷಾದಲ್ಲಿ ನೆರಸಾ ಗ್ರಾಮದ ವರೆಗೆ ಹಾಗೂ ಅಲ್ಲಿಂದ ತಿರಡಿಯಲ್ಲಿ ಅವರ ಸ್ವಗ್ರಾಮ ಕೊಂಗಳಕ್ಕೆ ಕರೆತರುವ ನಿರ್ಧಾರ ಕೈಗೊಂಡಿರುವುದು ನಿಜ ಹಾಗೆಯೇ ಅವರ ವಯಸ್ಸು 52 ಎಂದು ತಿಳಿಸಿದ್ದು, ಅದು ಸಹ ತಪ್ಪಾಗಿದ್ದು; ಅವರ ನಿಜವಾದ ವಯಸ್ಸು 65 ವರ್ಷಗಳಾಗಿದೆ. ಅವರು ಬಹುಶಃ ಯಾವಾಗಲೂ ಕಾಯಿಲೆಯಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗಾಗಿ ತಮ್ಮ ಅಳಿಯನ ಮನೆಯಲ್ಲಿ (ಮಗಳಿನ ಮನೆ) ಗಣೇಬೈಲಿಗೆ ತೆರಳಿದ್ದರು. ಕಳೆದ ಒಂದು ವರ್ಷದಿಂದ ಅವರು ಅಲ್ಲಿ ವಾತ್ಸವ ಮಾಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಆದರೂ ಚಿಕಿತ್ಸೆ ಪ್ರಯೋಜನಕಾರಿಯಾಗದ ಕಾರಣ, ಅವರ ಆರೋಗ್ಯ ಸಂಪೂರ್ಣವಾಗಿ ಕುಸಿತಗೊಂಡ ಕಾರಣ ಕೊನೆಗೆ ಗ್ರಾಮಸ್ಥರು ಅವರನ್ನು ಮತ್ತೆ ಗ್ರಾಮಕ್ಕೆ ಕರೆತರಲು ನಿರ್ಧಾರ ಮಾಡಿಕೊಂಡರು.
ಇನೊಂದೆಡೆ, ಸರ್ಕಾರ ಈಗ ಭೀಮಗಡ ಅಭಯಾರಣ್ಯದ ಗ್ರಾಮಗಳನ್ನು ಪುನರ್ವಸತಿ ಮಾಡಲು ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆಗಳು ಹರಡಿದ್ದು, ಕೊಂಗಳ ಗ್ರಾಮದ ಜನರು ಇನ್ನೂ ಪುನರ್ವಸತಿ ಕುರಿತು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಮುಂಬರುವ ಗಣೇಶೋತ್ಸವದ ಹಿನ್ನಲೆಯಲ್ಲಿ ಗ್ರಾಮಸಭೆ ಕರೆದು ಅಲ್ಲಿಯೇ ಪುನರ್ವಸತಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
