टायक्वांदोमध्ये KLE कॉलेजच्या अंजलीला सुवर्णपदक; राज्यस्तरीय स्पर्धेसाठी निवड.
बेळगाव : प्रतिनिधी
जिल्हा शिक्षण विभाग आणि अंजुमन पदवीपूर्व महाविद्यालय, बेळगाव यांच्या संयुक्त विद्यमाने आयोजित 2026-27 या शैक्षणिक वर्षातील जिल्हास्तरीय क्रीडा स्पर्धेत के एल ई सोसायटीच्या एम एस होसमणी पदवीपूर्व महाविद्यालयाची विद्यार्थिनी कु. अंजली एन. गुरव हिने टायक्वांदोच्या 56 किलो वजन गटात प्रथम क्रमांक पटकावत सुवर्णपदक मिळविले.

अंजली सध्या महाविद्यालयातील द्वितीय पी.यू.सी. विज्ञान शाखेत शिक्षण घेत आहे. तिच्या या उल्लेखनीय कामगिरीमुळे महाविद्यालयाच्या शिरपेचात आणखी एक मानाचा तुरा खोवला गेला आहे. या दमदार कामगिरीच्या जोरावर अंजलीची राज्यस्तरीय टायक्वांदो स्पर्धेसाठी निवड झाली आहे.
अंजलीच्या यशाबद्दल महाविद्यालयाचे प्राचार्य श्री. विजय कलमठ, शारीरिक शिक्षण शिक्षक श्री. के. व्ही. पाटील, सर्व प्राध्यापक, शिक्षकेतर कर्मचारी आणि विद्यार्थ्यांनी तिचे अभिनंदन केले. राज्यस्तरीय स्पर्धेतही अंजलीने उत्कृष्ट कामगिरी करून महाविद्यालयाचे आणि बेळगावचे नाव उज्ज्वल करावे, यासाठी तिला शुभेच्छा देण्यात आल्या
ಟೈಕ್ವಾಂಡೋದಲ್ಲಿ ಖಾನಾಪುರ KLE ಕಾಲೇಜಿನ ಅಂಜಲಿಗೆ ಚಿನ್ನದ ಪದಕ; ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ.
ಬೆಳಗಾವಿ : ಪ್ರತಿನಿಧಿ
ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಅಂಜುಮನ್ ಪದವಿಪೂರ್ವ ಕಾಲೇಜು, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2026-27ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ KLE ಸೊಸೈಟಿಯ ಎಂ. ಎಸ್. ಹೊಸಮನಿ ಪದವಿಪೂರ್ವ ಮಹಾವಿದ್ಯಾಲಯ ಖಾನಾಪುರ ಇಲ್ಲಿಯ ವಿದ್ಯಾರ್ಥಿನಿ ಕು. ಅಂಜಲಿ ಎನ್. ಗುರವ್ ಅವರು ಟೈಕ್ವಾಂಡೋದ 56 ಕೆ.ಜಿ. ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಅಂಜಲಿ ಅವರು ಪ್ರಸ್ತುತ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು. ಜಿಲ್ಲಾ ಮಟ್ಟದ ಟೈಕ್ವಾಂಡೋ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಅವರು ಮಹಾವಿದ್ಯಾಲಯದ ಕೀರ್ತಿಗೆ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ.
ಅಂಜಲಿ ಅವರ ಈ ಗಮನಾರ್ಹ ಸಾಧನೆಯ ಫಲವಾಗಿ ಇದೀಗ ಅವರು ರಾಜ್ಯಮಟ್ಟದ ಟೈಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ತಮ್ಮ ಪ್ರತಿಭೆ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದ ಅಂಜಲಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತಷ್ಟು ಯಶಸ್ಸು ಸಾಧಿಸುವ ನಿರೀಕ್ಷೆ ಮೂಡಿಸಿದ್ದಾರೆ.
ಅಂಜಲಿ ಅವರ ಈ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಿಜಯ್ ಕಲಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೆ. ವಿ. ಪಾಟೀಲ, ಎಲ್ಲಾ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಮಟ್ಟದ ಟೈಕ್ವಾಂಡೋ ಸ್ಪರ್ಧೆಯಲ್ಲಿಯೂ ಅಂಜಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಮಹಾವಿದ್ಯಾಲಯದ ಹಾಗೂ ಬೆಳಗಾವಿಯ ಹೆಸರನ್ನು ಮತ್ತಷ್ಟು ಉಜ್ವಲಗೊಳಿಸಲಿ ಎಂದು ಪ್ರಾಚಾರ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.



