खानापूरचे मलप्रभा क्रीडांगण म्हणजे दारुड्यांचा अड्डा बनले! नागरिकांची पोलिसांकडे कारवाईची मागणी
खानापूर : खानापूर शहरातील जांबोटी कत्री जवळ असलेले श्री मलप्रभा क्रीडांगण हे खेळाडूंसाठी खेळाचे मैदान असूनही सध्या दारुड्यांचा अड्डा बनल्याची गंभीर परिस्थिती निर्माण झाली आहे.
सायंकाळी 7 नंतर काही युवक व नागरिक गटागटाने येथे जमा होऊन मैदानात व स्टेजवर बसून खुलेआम मद्यपान करीत असल्याचे दिसून येत आहे. मद्यप्राशनानंतर रिकाम्या बाटल्या मैदानात फेकणे, बाटल्या फोडणे यामुळे मैदानावर काचांचे तुकडे विखुरले जात आहेत. त्यामुळे सकाळी वॉकिंगला येणाऱ्या नागरिकांना व खेळाडूंना पायाला दुखापती होण्याचे प्रकार घडत आहेत.
याशिवाय मैदान परिसरात पाण्याच्या बाटल्या, कुरकुरेंची पाकिटे व इतर कचरा टाकल्याने अस्वच्छतेचे प्रमाण वाढले आहे. परिणामी खेळाडूंना खेळाचा सराव करणे अशक्य झाले असून नागरिकांमध्ये तीव्र नाराजी व्यक्त केली जात आहे.
“खेळाडूंसाठी निर्माण करण्यात आलेले मलप्रभा क्रीडांगण हे आता दारुड्यांचा अड्डा झाला आहे का?” असा सवाल नागरिक करत आहेत. या पार्श्वभूमीवर स्थानिकांनी खानापूर पोलिसांनी सायंकाळी पाळत ठेवून संबंधितांवर तातडीने कारवाई करावी, अशी जोरदार मागणी केली आहे.
नागरिक आणि खेळाडूंची एकच मागणी — “दारुड्यांच्या अड्ड्याऐवजी खेळाडूंचे खरे क्रीडांगण परत द्या!”
ಖಾನಾಪುರದ ಮಲಪ್ರಭಾ ಕ್ರೀಡಾಂಗಣ ಸದ್ಯ ಮದ್ಯಪಾನಿಗಳ ಅಡ್ಡೆಯಾಗಿದೆಯೇ? ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಬೇಡಿಕೆ.
ಖಾನಾಪುರ : ಖಾನಾಪುರ ಪಟ್ಟಣದ ಜಾಂಬೋಟಿ ಕತ್ರಿ ಬಳಿ ಇರುವ ಶ್ರೀ ಮಲಪ್ರಭಾ ಕ್ರೀಡಾಂಗಣವು ಕ್ರೀಡಾಪಟುಗಳಿಗಾಗಿ ನಿರ್ಮಿಸಲಾದ ಮೈದಾನವಾಗಿದ್ದರೂ, ಈಗ ಸದ್ಯ ಮದ್ಯಪಾನಿಗಳ ಅಡ್ಡೆಯಾಗಿ ಮಾರ್ಪಟ್ಟಿರುವ ಗಂಭೀರ ಪರಿಸ್ಥಿತಿ ಎದುರಾಗಿದೆ.
ಸಂಜೆ 7 ಗಂಟೆಯ ನಂತರ ಕೆಲ ಯುವಕರು ಹಾಗೂ ನಾಗರಿಕರು ಗುಂಪು ಗುಂಪಾಗಿ ಇಲ್ಲಿ ಸೇರುತ್ತಿದ್ದು, ಮೈದಾನ ಮತ್ತು ಸ್ಟೇಜ್ ಮೇಲೆ ಕುಳಿತು ಮದ್ಯವನ್ನು ಸೇವಿಸುತ್ತಿರುವುದು ಕಂಡು ಬರುತ್ತಿದೆ. ಮದ್ಯಪಾನದ ನಂತರ ಖಾಲಿ ಬಾಟಲಿಗಳನ್ನು ಮೈದಾನದಲ್ಲೇ , ಒಡೆದು ಎಸೆದು ಹಾಕುವುದರಿಂದ ಮೈದಾನದಲ್ಲಿ ಗಾಜಿನ ತುಂಡುಗಳು ಚದರಿಹೋಗಿವೆ. ಇದರಿಂದ ಬೆಳಿಗ್ಗೆ ವಾಕಿಂಗ್ಗೆ ಬರುವ ನಾಗರಿಕರು ಹಾಗೂ ಕ್ರೀಡಾಪಟುಗಳ ಪಾದಕ್ಕೆ ಗಾಯಗಳಾಗುತ್ತಿರುವ ಘಟನೆಗಳು ಸಂಭವಿಸುತ್ತಿವೆ.
ಇದೇ ರೀತಿ ಮೈದಾನದ ಸುತ್ತಮುತ್ತ ನೀರಿನ ಬಾಟಲಿ, ಕುರ್ಕುರೆಯ ಪ್ಯಾಕೆಟ್ ಹಾಗೂ ಇತರ ಕಸವನ್ನು ಎಸೆಯುವುದರಿಂದ ಅಸ್ವಚ್ಛತೆ ಹೆಚ್ಚಾಗಿದೆ. ಪರಿಣಾಮವಾಗಿ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಇದರಿಂದ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕ್ರೀಡಾಪಟುಗಳಿಗಾಗಿ ನಿರ್ಮಿಸಿರುವ ಮಲಪ್ರಭಾ ಕ್ರೀಡಾಂಗಣ ಈಗ ಮದ್ಯಪಾನಿಗಳ ಅಡ್ಡೆಯಾಯಿತೇ?” ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಖಾನಾಪುರ ಪೊಲೀಸ್ ಅಧಿಕಾರಿಗಳು ಸಂಜೆ ಪಾಳೆ ಇಟ್ಟು, ಸಂಬಂಧಪಟ್ಟವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.
ನಾಗರಿಕರು ಹಾಗೂ ಕ್ರೀಡಾಪಟುಗಳ ಒಂದೇ ಧ್ವನಿ — “ಮದ್ಯಪಾನಿಗಳ ಅಡ್ಡೆಯ ಬದಲು ಕ್ರೀಡಾಪಟುಗಳ ನಿಜವಾದ ಕ್ರೀಡಾಂಗಣ ಹಿಂತಿರುಗಿಸಿ!” ಎಂಬುದು.

