कक्केरी बिष्टादेवी जत्रेला पाच लाख भाविकांची अपेक्षा – मूलभूत सुविधांची मागणी.

कक्केरी (ता. खानापूर) : जिल्ह्यातील सर्वात मोठी समजली जाणारी कक्केरी (ता. खानापूर) येथील श्री बिष्टादेवी जत्रा यंदा 1 ऑक्टोबर ते 7 ऑक्टोबर दरम्यान पार पडणार आहे. या जत्रेला जिल्हा प्रशासनाने अधिक जबाबदारीने लक्ष देऊन आवश्यक त्या मूलभूत सुविधा उपलब्ध करून द्याव्यात, अशी मागणी अखिल कर्नाटक रायते संघाचे राज्य उपाध्यक्ष किशोर मिठारी तसेच खानापूर तालुका शेतकरी संघटनांच्या पदाधिकाऱ्यांनी केली आहे.
12 व्या शतकातील शिवशरण डोहरा कक्कय्या यांचे ऐक्यस्थान असलेली ही जत्रा ऐतिहासिक पार्श्वभूमी लाभलेली असून, मैसुर दसरा, कित्तूर उत्सव, यल्लम्मा देवी यात्रा यांना जसा दर्जा मिळतो, तसाच दर्जा कक्केरी यात्रेलाही मिळायला हवा, अशी मागणी यावेळी करण्यात आली.

मागितलेल्या सुविधा :
अतिरिक्त बस सुविधा
अग्निशमन दलाची पाण्याची गाडी
मोबाईल (संचारी) शौचालय व्यवस्था
सलग सात दिवस अखंडित वीजपुरवठा
जत्रा काळात दारू दुकाने बंद ठेवणे
वाहतुकीसाठी पर्यायी व्यवस्था व अतिरिक्त पोलीस बंदोबस्त
प्यायच्या पाण्यासाठी टँकरची सोय
रुग्णालयात अतिरिक्त कर्मचारी व औषधसामग्री
क्रीडापटूंकरिता खेळांचे आयोजन
या यात्रेला उत्तर कन्नड जिल्ह्यातील कारवार, हलियाळ, दांडेली, धारवाड, हुबळी तसेच बेळगाव जिल्ह्यातील खानापूर, कित्तूर, संवदत्ती, बैलहोंगल भागांतूनच नव्हे तर गोवा व महाराष्ट्र राज्यातूनही मिळून सुमारे पाच लाखांहून अधिक भाविक उपस्थित राहणार असल्याचा अंदाज आहे. त्यामुळे जिल्हा प्रशासनाने विशेष लक्ष देऊन ही जत्रा उत्तम व सुव्यवस्थित पार पाडावी, असे आवाहन करण्यात आले.
ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆ 5 ಲಕ್ಷ ಭಕ್ತರ ನಿರೀಕ್ಷೆ – ಮೂಲಭೂತ ಸೌಕರ್ಯಗಳ ಬೇಡಿಕೆ
ಬಿಷ್ಟಾದೇವಿ ಜಾತ್ರೆ ಅಕ್ಟೋಬರ 1ರಿಂದ 7 ರ ವರೆಗೆ ನಡೆಯಲಿದ್ದು, ಜಾತ್ರೆಗೆ ಜಿಲ್ಲಾಡಳಿತ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸುವುದು ಅವಶ್ಯಕ.
ಜಾತ್ರೆಯೆಂದರೆ ಜನ ಸೇರುವುದು ಜನ ಸೇರುತ್ತಾರೆ ಎಂದರೆ ಮೂಲಭೂತ ಸೌಕರ್ಯಗಳು ಕಲ್ಪಿಸಲೇ ಬೇಕು.
12ನೇ ಶತಮಾನದ ಶಿವಶರಣ ಡೋಹರ ಕಕ್ಕಯ್ಯ ಐಕ್ಯ ಸ್ಥಳವಾಗಿದ್ದು ಐತಿಹಾಸಿಕ ಹಿನ್ನೆಲೆ ಇರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆ ಜಿಲ್ಲೆಯಲ್ಲಿ ಅತಿ ದೊಡ್ಡ ಜಾತ್ರೆ ಯಾಗಿದ್ದೆ.
ಜಿಲ್ಲಾಡಳಿತ ಹೆಚ್ಚಿನ ಮುತರ್ಜಿವಹಿಸಿ ಮೈಸೂರು ದಸರಾ, ಕಿತ್ತೂರು ಉತ್ಸವ , ಯಲ್ಲಮ್ಮ ದೇವಿ ಜಾತ್ರೆಗೆ , ಸಿಕ್ಕಂತಹಾ ಸ್ಥಾನಮಾನ ಕಕ್ಕೇರಿ ಜಾತ್ರೆಗೂ ಸಿಗುವಂತಾಗಬೇಕು ಎಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರಾದ ಕಿಶೋರ ಮಿಠಾರಿ. ಹಾಗೂ ಖಾನಾಪುರ ತಾಲೂಕು ರೈತ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮೂಲಭೂತ ಸೌಕರ್ಯಗಳಾದ.
ಹೆಚ್ಚಿನ ಬಸ್ ಸೌಲಭ್ಯಗಳು, ಅಗ್ನಿಶಾಮಕ ದಳ, ನೀರಿನ ವಾಹನ, ಮೊಬೈಲ್ ( ಸಂಚಾರಿ) ಶೌಚಾಲಯದ ವಾಹನಗಳು, ಏಳು ದಿನ ನಿರಂತರ ವಿದ್ಯುತ್ ಪೂರೈಸುವ ವ್ಯವಸ್ಥೆ,
ಜಾತ್ರೆ ಮುಗಿಯುವವರೆಗೆ ಸರಾಯಿ ಅಂಗಡಿ ಬಂದ ಮಾಡಿಸುವುದು, ವಾಹನ ಸಂಚಾರ, ಹಾಗೂ ಜನದಟ್ಟಣೆ ನಿವಾರಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದು, ಕುಡಿಯುವ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ, ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಔಷದ ಗುಳಿಗೆ ಪೂರೈಸುವುದು,
ಕ್ರೀಡಾಪಟುಗಳ ಗೋಸ್ಕರ ಕ್ರೀಡೆಗಳು ನಿಯೋಜನೆ ಮಾಡುವುದು ಪ್ರಮುಖ ಬೇಡಿಕೆಗಳು.
ಈ ಜಾತ್ರೆಗೆ ಉತ್ತರ ಕನ್ನಡ ಜಿಲ್ಲೆಯಾದ ಕಾರವಾರ, ಹಳಿಯಾಳ, ದಾಂಡೇಲಿ, ಧಾರವಾಡ ಜಿಲ್ಲೆ, ಧಾರವಾಡ ,ಹುಬ್ಬಳ್ಳಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ, ಕಿತ್ತೂರು, ಖಾನಾಪುರ, ಸವದತ್ತಿ, ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದ್ದು. ಜಿಲ್ಲಾಡಳಿತ ಹೆಚ್ಚಿನ ಮುತರ್ಜಿವಹಿಸಿ ಈ ಜಾತ್ರೆಯು ಉತ್ತಮ ಜಾತ್ರೆಯನ್ನಾಗಿ ಮಾಡಬೇಕು.
ಕಕ್ಕೇರಿ ಗ್ರಾಮದ ಜಾತ್ರೆಗೆ ಸಿದ್ದಗೊಳ್ಳುತ್ತಿರುವ ಮನರಂಜನೆಯ ಜೋಕಾಲಿಗಳು ಬೀಡು ಬಿಟ್ಟ ಕಾರಣ ಈಗಲೇ ಜಾತ್ರೆ ಸ್ವರೂಪ ಕಂಡಿದೆ.

